ಮಡಿಕೇರಿ, ಜೂ. ೨೧: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕೇಂದ್ರ ಪುರಸ್ಕೃತ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿಯಲ್ಲಿ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಕ್ಕೆ ಪಶುಪಾಲನಾ ಇಲಾಖೆ ಉಪ ನಿದೇಶಕ ಡಾ. ಪಿ. ಸುರೇಶ್ ಭಟ್ ಅವರು ಚಾಲನೆ ನೀಡಿದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಪಶುಚಿಕಿತ್ಸಾ ಸಂಚಾರಿ ವಾಹನ ಇದಾಗಿದ್ದು, ಮಡಿಕೇರಿ ತಾಲೂಕಿನಲ್ಲಿ ಸಂಚಾರಿ ವಾಹನಕ್ಕೆ ಚಾಲನೆ ದೊರಕಿದೆ. ಜುಲೈ ೨ ರಿಂದ ಎಲ್ಲಾ ತಾಲೂಕುಗಳಲ್ಲಿಯೂ ಈ ವಾಹನದ ಸೌಲಭ್ಯ ದೊರೆಯಲಿದೆ ಎಂದರು.

ಪಶು ಚಿಕಿತ್ಸಾ ವಾಹನವು ಸುಸಜ್ಜಿತವಾದ ಸೌಲಭ್ಯವನ್ನು ಒಳಗೊಂಡಿದ್ದು ವಾಹನವು ಹವಾನಿಯಂತ್ರಣದಿAದ ಕೂಡಿದ್ದು, ಮೆಡಿಸಿನ್ ವ್ಯವಸ್ಥೆ, ಬಿಸಿ ನೀರಿನ ವ್ಯವಸ್ಥೆ, ಟೇಬಲ್ ಮತ್ತು ಪಶುಗಳಿಗೆ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಈ ವಾಹನವು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಚಾರಿ ವಾಹನದ ಪಶು ವೈದ್ಯಾಧಿಕಾರಿ ಡಾ. ಎಂ.ಸಿ. ಲತಾ, ಸಿಬ್ಬಂದಿಗಳು ಇತರರು ಇದ್ದರು.