ಸೋಮವಾರಪೇಟೆ, ಜೂ. ೨೧: ಲೋಕೋಪಯೋಗಿ ಇಲಾಖೆ ಮೂಲಕ ಅನುಷ್ಠಾನಗೊಳ್ಳುತ್ತಿರುವ ರೂ. ೩೦ ಲಕ್ಷ ವೆಚ್ಚದ ಸಂಪಿಗೆದಾಳು-ಅAಕನಳ್ಳಿ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ರಸ್ತೆ ನಿರ್ಮಾಣ ಸಂದರ್ಭ ಚರಂಡಿಗೆ ಅಗತ್ಯವಿರುವ ಜಾಗವನ್ನು ಸ್ಥಳೀಯರು ಬಿಟ್ಟುಕೊಡಬೇಕು. ಸಮರ್ಪಕ ಚರಂಡಿಗಳಿದ್ದರೆ ಮಾತ್ರ ರಸ್ತೆ ದೀರ್ಘಕಾಲ ಬಾಳಿಕೆ ಬರುತ್ತದೆ. ಇದರೊಂದಿಗೆ ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು ಎಂದರು.

ಇಲಾಖೆಯ ಅಭಿಯಂತರ ವೆಂಕಟೇಶ್ ನಾಯಕ್, ಪ್ರಮುಖರಾದ ನಾಗರಾಜ್, ಬಾಬುರಾಜೇಂದ್ರ ಪ್ರಸಾದ್, ಭಗವಾನ್, ಕ್ಯಾತೆ ಶಿವು, ಹೆಬ್ಬುಲುಸೆ ಮನು, ಕೆಂಚೇಶ್ವರ್, ಕುಶಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.