ಮಡಿಕೇರಿ, ಜೂ. ೧೯: ಮಂಗಳೂರು ರಸ್ತೆಯ ಎಂ.ಆರ್.ಎಫ್. ಟಯರ್ ಶಾಪ್ ಬಳಿ ಹೆದ್ದಾರಿಯಲ್ಲಿ ನಿನ್ನೆ ದಿನ ಟಿಟಿ ವಾಹನವೊಂದರ ಡೀಸೆಲ್ ಟ್ಯಾಂಕ್ ಸೋರಿಕೆಯಾದ ಘಟನೆ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ೧೧೨ ಸ್ಥಳಕ್ಕೆ ತೆರಳಿ ಡೀಸೆಲ್ ಸೋರಿಕೆಯಾದ ಸ್ಥಳದಲ್ಲಿ ಮಣ್ಣನ್ನು ಹಾಕಿ ಅನಾಹುತ ಸಂಭವಿಸದAತೆ ಕ್ರಮಕೈಗೊಂಡಿತು.