ಗೋಣಿಕೊಪ್ಪಲು, ಜೂ. ೧೯: ಕೇರಳ ರಾಜ್ಯದಿಂದ ಕೊಡಗಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಆಗಮಿಸಿದ ಯುವಕರ ತಂಡದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

ಕೇರಳದಿಂದ ರಾತ್ರಿ ವೇಳೆ ಪ್ರಯಾಣ ಬೆಳೆಸಿದ್ದ ಯುವಕರ ತಂಡ ಮುಂಜಾನೆ ವೇಳೆ ತಿತಿಮತಿ ಸಮೀಪದ ಭದ್ರಗೋಳ ಬಳಿ ತಲುಪುತ್ತಿದ್ದಂತೆ ಚಾಲಕ ನಿದ್ರೆಗೆ ಜಾರಿದ್ದಾನೆ. ಇದರಿಂದ ಕಾರು ಅವಘಡಕ್ಕೀಡಾಗಿ ಮಗುಚಿಕೊಂಡಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಯುವಕರಿಗೆ ಯಾವುದೇ ತೊಂದರೆ ಆಗದೆ ಪಾರಾಗಿದ್ದಾರೆ. ಕಾರು ಸಂಪೂರ್ಣ ಜಖಂಗೊAಡಿದೆ.

ತಿತಿಮತಿ ಔಟ್ ಪೋಸ್ಟ್ನ ಎ.ಎಸ್.ಐ. ವೆಂಕಟೇಶ್, ಸಿಬ್ಬಂದಿ ಶಿವಚರಣ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

- ಹೆಚ್.ಕೆ. ಜಗದೀಶ್