ಮಡಿಕೇರಿ, ಜೂ. ೧೮: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕೊಡಗು ಜಿಲ್ಲೆ ಶೇ. ೭೩.೨೨ ರಷ್ಟು ಫಲಿತಾಂಶದೊAದಿಗೆ ರಾಜ್ಯಕ್ಕೆ ೬ನೇ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದು, ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.೨೦೨೦ರ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ಶೇ.೮.೩೧ ರಷ್ಟು ಕುಸಿತಗೊಂಡಿದೆ.
ಜಿಲ್ಲೆಯಲ್ಲಿ ೫,೪೨೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ೩,೯೬೯ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ೧,೨೪೫ ವಿದ್ಯಾರ್ಥಿಗಳ ಪೈಕಿ ೭೦೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೫೬.೨೨ ರಷ್ಟು ಫಲಿತಾಂಶ ಬಂದಿದೆ.
(ಮೊದಲ ಪುಟದಿಂದ) ವಾಣಿಜ್ಯ ವಿಭಾಗದಲ್ಲಿ ೨,೯೧೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೨,೧೮೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.೭೫.೦೭ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ೧,೨೬೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧,೦೮೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.೮೫.೬೮ ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ ಮಡಿಕೇರಿ ತಾಲೂಕಿನ ಮದೆ ಗ್ರಾಮದ ಮದೆಮಹೇಶ್ವರ ಪದವಿ ಪೂರ್ವ ಕಾಲೇಜಿನ ಕುಷನ್ ಕೆ.(೫೬೯) ಜಿಲ್ಲೆಗೆ ಪ್ರಥಮ ಸ್ಥಾನ, ನೆಲ್ಲಿಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತೇಜ ಎಂ.ಎಸ್.(೫೬೫) ದ್ವಿತೀಯ, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಕ್ಷಿತ ಕೆ.ಎಸ್.(೫೫೫) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸುಂಟಿಕೊಪ್ಪದ ಸಂತ ಮೇರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಯೇಷ ಸುನೇಹ (೫೯೧) ಪ್ರಥಮ, ಮೂರ್ನಾಡು ಪದವಿ ಪೂರ್ವ ಕಾಲೇಜಿನ ಹರ್ಷಿತ್ ಎಂ.ಸಿ. (೫೮೯) ದ್ವಿತೀಯ, ಕೊಡ್ಲಿಪೇಟೆಯ ಎಸ್.ಸದಾಶಿವ ಸ್ವಾಮೀಜಿ ಪದವಿ ಪೂರ್ವ ಕಾಲೇಜಿನ ಸುಕನ್ಯ ವಿ.ಆರ್. (೫೮೯) ಹಾಗೂ ಹಳ್ಳಿಹಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಪಿಯು ಕಾಲೇಜಿನ ನಿಖಿತ ಪಿ.ಮೇದಪ್ಪ (೫೮೯) ದ್ವಿತೀಯ, ಕುಶಾಲನಗರ ಐಶ್ವರ್ಯ ಪಿಯು ಕಾಲೇಜಿನ ತೇಜಸ್ವಿನಿ ಪ್ರಭು ಬಿ.(೫೮೮) ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ಕವಿನ ಎ.ಸಿ(೫೯೨) ಪ್ರಥಮ, ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿಯು ಕಾಲೇಜಿನ ತೀರ್ಥ ಕಾವೇರಪ್ಪ ಎಂ.ಜಿ.(೫೮೬) ದ್ವಿತೀಯ, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಸ್ಟನ್ ಗೊನ್ಸಾಲ್ವಸ್(೫೮೬) ದ್ವಿತೀಯ, ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿಯು ಕಾಲೇಜಿನ ಭುವನ್ ಎಂ.ಎA.(೫೮೫), ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನ ಹಿತೇಶ್ ಎಸ್.ಟಿ.(೫೮೫) ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಪುಟ್ಟರಾಜು ಅವರು ತಿಳಿಸಿದ್ದಾರೆ.