ಮಡಿಕೇರಿ, ಜೂ. ೧೮: ಕೇಂದ್ರ ಸರಕಾರ ಘೋಷಿಸಿರುವ ನೂತನ ಅಗ್ನಿಪಥ ಯೋಜನೆಯು ಯುವಜನತೆಯ ಮೂಲಕ ಸೇನೆಯ ಬಲ ಹೆಚ್ಚಿಸಲು ರೂಪಿಸಿರುವ ಯೋಜನೆಯಾಗಿದೆ. ಯೋಜನೆಯ ಮೂಲಕ ಸೇನೆಗೆ ಸೇರುವ ಅತ್ಯುತ್ತಮ ಯುವಜನತೆ (ಅಗ್ನಿವೀರರನ್ನು)ಯನ್ನು ಸೇನೆಯಲ್ಲಿ ಉಳಿಸಿಕೊಳ್ಳಲಾಗುತ್ತದೆ ಹೊರತು ಸರಕಾರದ ಹಣಕಾಸು ಉಳಿಸುವ ಯೋಜನೆಯಲ್ಲ ಎಂದು ಜಿಲ್ಲೆಯವರಾದ ಭಾರತೀಯ ಭೂಸೇನೆಯ ಅಡ್ಜುಟೆಂಟ್ ಜನರಲ್ ಆಗಿರುವ ಲೆಫ್ಟಿನೆಂಟ್ ಜನರಲ್ ಚೆನ್ನೀರ ಬನ್ಸಿ ಪೊನ್ನಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿ.ವಿ ವಾಹಿನಿಯ ಸಂದರ್ಶನವೊAದರಲ್ಲಿ ಮಾತನಾಡಿದ ಅವರು, ೪ ವರ್ಷ ಸೇವೆ ಸಲ್ಲಿಸಿದ ಬಳಿಕ ಶೇ.೨೫ ರಷ್ಟು ಮಂದಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಗುತ್ತದೆ. ಉಳಿದ ಶೇ. ೭೫ ರಷ್ಟು ಹೊರ ಉಳಿಯುವ ಅಗ್ನಿವೀರರು ಸಮಾಜಕ್ಕೆ ಹಿಂತೆರಳಿ ಖಾಸಗಿ, ಸರಕಾರಿ ನೌಕರಿಗಳಿಗೆ ಸೇರ್ಪಡೆಗೊಳ್ಳಲು ಹಾಗೂ ಅವರದ್ದೇ ಆದ ನೂತನ ಸಂಸ್ಥೆಗಳನ್ನು ಸ್ಥಾಪಿಸಲು ಕೇಂದ್ರವು ಕ್ರಮವಹಿಸಲಿದೆ. ಇದಕ್ಕೆ ಸಹಾಯ ಮಾಡುವ ಸಲುವಾಗಿ ಇಂತಹ ಅಗ್ನಿವೀರರಿಗೆ ಸೇವಾ ನಿಧಿ ಪ್ಯಾಕೇಜ್ ಮೂಲಕ ರೂ.೧೨ ಲಕ್ಷ ನೀಡಲಾಗುತ್ತದೆ. ಈ ಅಗ್ನಿವೀರರ ಮುಂದಿನ ಭವಿಷ್ಯಕ್ಕಾಗಿ ಕೂಡ ಸರಕಾರ ಕ್ರಮ ವಹಿಸಲಿದೆ. ಹೆಚ್ಚುವರಿ ವಿದ್ಯಾಭ್ಯಾಸ ಮಾಡಲಿಚ್ಚಿಸುವವರಿಗೆ ಕ್ರೆಡಿಟ್‌ಗಳನ್ನು ನೀಡಲಾಗುತ್ತದೆ, ಖಾಸಗಿ ಸಂಸ್ಥೆಗಳಿಗೆ ಸೇರಲಿಚ್ಚಿಸುವವರಿಗೆ ಕೌಶಲ್ಯ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಸೇನಾ ಜಗತ್ತಿನ ಹೊರಗೆಯೂ ಉತ್ತಮ ಜೀವನ

(ಮೊದಲ ಪುಟದಿಂದ) ನಡೆಸಲು ಸಹಕಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಗ್ನಿಪಥ ಮೂಲಕ ೪ ವರ್ಷ ಸೇವೆ ಸಲ್ಲಿಸಿ ಹೊರಗುಳಿಯುವ ಅಗ್ನಿವೀರರಿಗೆ ಸಿ.ಎ.ಪಿ.ಎಫ್. (ಅeಟಿಣಡಿಚಿಟ ಂಡಿmeಜ Poಟiಛಿe ಈoಡಿಛಿe)ನಲ್ಲಿ ಶೇ. ೧೦ ರÀಷ್ಟು ಮೀಸಲಾತಿ ಕಲ್ಪಿಸುವುದಾಗಿಯೂ ಕೇಂದ್ರ ಗೃಹ ಮಂಡಳಿ ನಿರ್ಧರಿಸಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಲೈನ್ ಆಫ್ ಕಂಟ್ರೋಲ್ ಹಾಗೂ ಆಂತರಿಕ ಭದ್ರತಾ ವಿಭಾಗಗಳಲ್ಲಿ ಕಿರಿಯ ವಯಸ್ಸಿನ ಅಗ್ನಿವೀರರಿಂದಾಗಿ ಯಾವುದೇ ರೀತಿಯಲ್ಲಿ ಸೇನೆಯ ಸಾಮರ್ಥ್ಯ ಕುಗ್ಗುವ ಪ್ರಶ್ನೆಯೇ ಇಲ್ಲ. ಅಗ್ನಿವೀರರು ನಮ್ಮಲ್ಲಿ ಈಗಾಗಲೇ ಇರುವ ಅತ್ಯಾಧುನಿಕ ಯುದ್ಧ ಪರಿಕರಗಳ ಬಳಕೆಯಲ್ಲಿ ಸಮರ್ಥರಾಗಲಿದ್ದಾರೆ. ತಾಂತ್ರಿಕ ಪರಿಕರಗಳ ಉಪಯೋಗವನ್ನು ಯುವಜನತೆ ಸುಲಭವಾಗಿ ನಿಭಾಯಿಸುವ ಮೂಲಕ ಸೇನೆಯ ಶಕ್ತಿ ಹೆಚ್ಚಿಸಲಿದ್ದಾರೆ. ೪ ವರ್ಷಗಳಲ್ಲಿ ಅಗ್ನಿವೀರರು ಪ್ರದರ್ಶಿಸಲಿರುವ ಸಾಮರ್ಥ್ಯ ಕ್ಕನುಗುಣವಾಗಿ ಶೇ. ೨೫ ರಷ್ಟು ಅಗ್ನಿವೀರರಿಗೆ ಅವರುಗಳು ಸೇನೆಯಲ್ಲಿಯೇ ಮುಂದುವರಿಯು ವಂತಹ ಅವಕಾಶ ನೀಡಲಾಗುವುದಾಗಿ ತಿಳಿಸಿದ್ದಾರೆ.

ತರಬೇತಿ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ

ಪ್ರಸ್ತುತ ವಾರ್ಷಿಕ ೬೦,೦೦೦ ಮಂದಿಗೆ ಭಾರತೀಯ ಸೇನೆ ತರಬೇತಿ ನೀಡಲು ಸಾಮರ್ಥ್ಯ ಹೊಂದಿದೆ. ಆದರೆ ಸುಮಾರು ೪೦,೦೦೦ದಷ್ಟು ಮಂದಿ ಮಾತ್ರ ವಾರ್ಷಿಕವಾಗಿ ಈ ತರಬೇತಿ ಪಡೆಯುತ್ತಿದ್ದಾರೆ. ಅಗ್ನಿಪಥ್ ಮೂಲಕ ಹೆಚ್ಚುವರಿ ತರಬೇತಿದಾರರು ಆಗಮಿಸಿದರೆ, ವಾರ್ಷಿಕ ೧ ಲಕ್ಷದಷ್ಟು ಮಂದಿಗೆ ತರಬೇತಿ ನೀಡುವಷ್ಟು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಇದಕ್ಕಿಂತಲೂ ಹೆಚ್ಚು ಮಂದಿ ಬಂದರೆ ಸರಕಾರದ ಸಹಾಯದಿಂದ ಸೇನೆಗಿರುವ ಮೂಲಸೌಕರ್ಯ ಗಳನ್ನು ಹೆಚ್ಚಿಸುವ ಹೆಜ್ಜೆ ಇಡಲಾಗುತ್ತದೆ ಎಂಬುದಾಗಿ ಪೊನ್ನಪ್ಪ ಅವರು ಮಾಹಿತಿ ಇತ್ತಿದ್ದಾರೆ.