ಸುಂಟಿಕೊಪ್ಪ, ಜೂ. ೧೮: ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರ ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪ ಸಮೀಪದ ಬಾಳೆಕಾಡುವಿನಲ್ಲಿ ನಡೆದಿದೆ.
ಚೆಟ್ಟಳ್ಳಿ ಸಮೀಪದ ಪೊನ್ನತ್‌ಮೊಟ್ಟೆ ಗ್ರಾಮದಿಂದ ಮಡಿಕೇರಿ ಸಮೀಪದ ಸ್ಯಾಂಡಲ್‌ಕಾಡುವಿಗೆ ತೆರಳುತ್ತಿದ್ದ ಹೀರೋ ಹೊಂಡ ಬೈಕ್ ಚಲಾಯಿಸುತ್ತಿದ್ದ ಅಶ್ರಫ್ (೪೦) ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ರಝಾಕ್ ಸಹ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾರಿಯನ್ನು ಹಿಂದಿಕ್ಕಿ ಹೋಗುವ ಭರದಲ್ಲಿ ಎದುರು ಭಾಗದಲ್ಲಿ ಕೆದಕಲ್‌ನಿಂದ ಸುಂಟಿಕೊಪ್ಪ ಕಡೆಗೆ ಆಗಮಿಸುತ್ತಿದ್ದ ಅಭಿಜಿತ್ ಎಂಬಾತ ಚಲಾಯಿಸುತ್ತಿದ್ದ ಪಲ್ಸರ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಅಭಿಜಿತ್ ಕೂಡ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ರಾಷ್ಟಿçÃಯ ಹೆದ್ದಾರಿಯಲ್ಲಿ ೧ ಗಂಟೆ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಎರಡು ಬೈಕ್‌ಗಳನ್ನು ತಮ್ಮ ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.