ಮಡಿಕೇರಿ, ಜೂ. ೧೮: ಅರೆಭಾಷೆಯ ಅಭಿವೃದ್ಧಿಗೆ ಪೂರಕವಾಗಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಡೆಮಿಯು ಅಸಮರ್ಪಕ ವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂರನೇ ಅವಧಿಯಲ್ಲಿ ೧೮ ತಿಂಗಳಲ್ಲಿ ೧೮ ಕೃತಿ ಬಿಡುಗಡೆಯಾಗಿಲ್ಲ. ೧೮ ತಿಂಗಳಲ್ಲಿ ೧೧ ಕೃತಿಗಳು ಮಾತ್ರ ಪ್ರಕಟವಾಗಿದ್ದು, ಉಳಿದವು ಅಕಾಡೆಮಿ ಪ್ರಕಟ ಮಾಡುವ ಹಿಂಗಾರ ತ್ರೆöÊಮಾಸಿಕ ಸಂಚಿಕೆಯಾಗಿದೆ. ಪ್ರಸ್ತುತ ತನ್ನ ಅವಧಿಯಲ್ಲಿ ೭ ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಉಳಿದ ೮ ಪುಸ್ತಕಗಳು ಪ್ರಕಟಕ್ಕೆ ತಯಾರಿಯಲ್ಲಿವೆ ಎಂದರು.
೩ ವರ್ಷಗಳ ಹಿಂದೆ ಫೆಲೋಶಿಪ್ನ ೧೦ ಅಧ್ಯಯನ ಗ್ರಂಥಗಳು ಸಿದ್ಧಗೊಂಡ್ದಿದವು ಎಂದು ಆರೋಪಿಸಲಾಗಿದೆ. ೩ ವರ್ಷದ ಹಿಂದೆಯೇ ಸಿದ್ಧಗೊಂಡಿದ್ದರೆ ಆ ಸಮಯದಲ್ಲೇ ಪ್ರಕಟಿಸಬಹುದಿತ್ತು. ನಮ್ಮ ನಾಲ್ಕನೇ ಅವಧಿಯ ತಂಡ ಅಧಿಕಾರಕ್ಕೆ ಬಂದು ೨.೫ ವರ್ಷಗಳು ಮಾತ್ರವಾಗಿದ್ದು, ಹಿಂದಿನ ಫೆಲೋಶಿಪ್ನ ಅವಧಿ ೦೧.೦೨.೨೦೧೯ಕ್ಕೆ ಆರಂಭವಾಗಿ ೦೧.೦೮.೨೦೧೯ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಯಾವುದೇ ಅಧ್ಯಯನ ಗ್ರಂಥಗಳು ಅಕಾಡೆಮಿಗೆ ಸಲ್ಲಿಕೆ ಆಗಿರುವುದಿಲ್ಲ. ೨೦೧೯ರ ಅಕ್ಟೋಬರ್ನಲ್ಲಿ ನಮ್ಮ ತಂಡ ಅಧಿಕಾರ ವಹಿಸಿಕೊಂಡು ಹಿಂದಿನ ಕ್ರಿಯಾ ಯೋಜನೆಯಲ್ಲಿದ್ದ ಫೆಲೋಶಿಪ್ ವಿಷಯವನ್ನು ಮುಂದುವರಿಸಿದೆ. ಆದರೂ ೨೦೨೦ರ ಮಾರ್ಚ್ ೩೧ರ ಒಳಗಡೆ ೧೦ರಲ್ಲಿ ಕೇವಲ ೧ ಫೆಲೋಶಿಪ್ ಮಾತ್ರ ಸಲ್ಲಿಕೆ ಆಗಿದ್ದು, ಉಳಿದ ೯ ಬಾಕಿ ಉಳಿದಿದೆ. ಈ ಕಾರಣದಿಂದ ೨೦೨೦-೨೧ರ ಸಾಲಿನಲ್ಲಿ ಮತ್ತೆ ನಮ್ಮ ತಂಡ ಉಳಿದ ೯ ಫೆಲೋಶಿಪ್ಗಳಿಗೆ ಕ್ರಿಯಾ ಯೋಜನೆಯಲ್ಲಿ ಹಣ ಉಳಿಸಿದ್ದು, ೬ ತಿಂಗಳಲ್ಲಿ ಸಲ್ಲಿಕೆ ಆಗಬೇಕಿದ್ದ ಫೆಲೋಶಿಪ್ಗಳು ೨.೫ ವರ್ಷಗಳವರೆಗೆ ಮುಂದುವರೆದಿದೆ.
ಸಾಹೇಬ್ರು ಬಂದವೆ ನಾಟಕಕ್ಕೆ ೧೦.೩೭ ಲಕ್ಷ ಖರ್ಚು ಮಾಡಿರುವ ಬಗ್ಗೆ ಪ್ರಶ್ನೆ ಮಾಡಿರುವ ಸಂಬAಧ ಪ್ರತಿಕ್ರಿಯಿಸಿದ ಅವರು, ನಾಟಕದ ತರಬೇತಿ ಪ್ರಥಮ ಹಂತದಲ್ಲಿ ೪೦ ದಿನದ ಅವಧಿಯಲ್ಲಿ ಪೂರ್ಣಗೊಂಡು ಪ್ರದರ್ಶನಕ್ಕೆ ತಯಾರಿ ನಡೆಸುತ್ತಿದ್ದ ಸಂದರ್ಭ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ಘೋಷಣೆ ಆಗಿ ಮತ್ತೆ ಹಲವು ತಿಂಗಳ ನಂತರ ೨ನೇ ಬಾರಿಗೆ ತರಬೇತಿಗಾಗಿ ಮತ್ತೆ ೩೦ ದಿನಗಳನ್ನು ತೆಗೆದು ಕೊಳ್ಳಲಾಗಿದೆ. ಈ ಕಾರಣದಿಂದ ಕೋವಿಡ್ನಿಂದಾಗಿ ಸ್ವಲ್ಪ ಹೆಚ್ಚುವರಿ ಖರ್ಚಾಗಿದೆ. ಆದರೂ ಕೋವಿಡ್ ನಂತರ ರಾಜ್ಯದ ಪ್ರತಿಷ್ಠಿತ ರಂಗ ಭೂಮಿ ವೇದಿಕೆ ಮೇಲೆ ಈ ನಾಟಕ ೧೬ ಕಡೆಗಳಲ್ಲಿ ಜನ ಮೆಚ್ಚುಗೆ ಗಳಿಸಿದೆ. ನಾಟಕ, ಯಕ್ಷಗಾನ, ಚಿತ್ರಕಲೆ ಡಾಕ್ಯುಮೆಂಟರಿ, ಸುಗಮ ಸಂಗೀತ, ಗಮಕ, ಡಿಜಿಟಲ್ ಪುಸ್ತಕಗಳು ಇಂತಹ ಚಟುವಟಿಕೆಯನ್ನು ಅರೆಭಾಷೆಯಲ್ಲಿ ಮಾಡಲಾಗಿದೆ. ಅರೆಭಾಷೆಗೆ ಐಎಸ್ಓ ಸ್ಥಾನಮಾನವನ್ನು ಒದಗಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳನ್ನು ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಲಕ್ಷಿö್ಮನಾರಾಯಣ ಕಜೆಗದ್ದೆ ಹೇಳಿದರು.
ಕಳೆದ ಎರಡುವರೆ ವರ್ಷದಿಂದ ಐಎಸ್ಓ ಸ್ಥಾನಮಾನಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದೆ. ಈ ಸ್ಥಾನಮಾನ ಬರಬೇಕಾದಲ್ಲಿ ಹಲವು ಮಾಧ್ಯಮ ಗಳಲ್ಲಿ ಸಾಹಿತ್ಯ ರಚನೆಯ ದಾಖಲೆಗಳನ್ನು ಒದಗಿಸಿಕೊಡ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಅರೆಭಾಷೆಯಲ್ಲಿ ರಚನೆಯಾಗಬೇಕಾದ, ಬೇರೆ ಬೇರೆ ಪ್ರಕಾರಗಳಲ್ಲಿ ಸಾಹಿತ್ಯದ ರಚನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುವುದನ್ನು ಅರೆಭಾಷಿಕರು ಗಮನದಲ್ಲಿರಿಸಿ ಕೊಳ್ಳಬೇಕು. ಹಾಗಾಗಿ ಅರೆಭಾಷೆಯಲ್ಲಿ ಪ್ರಕಟವಾಗಿರುವ ೫೦ಕ್ಕಿಂತ ಹೆಚ್ಚು ಡಾಕ್ಯುಮೆಂಟ್ ತಯಾರಿಯ ಆಲೋಚನೆಯನ್ನು ಹಮ್ಮಿಕೊಳ್ಳ ಲಾಯಿತು. ಅರೆಭಾಷೆ ಪಠ್ಯಪುಸ್ತಕ, ನಾಟಕ, ಡಾಕ್ಯುಮೆಂಟರಿ, ಯಕ್ಷಗಾನ, ಸುಗಮಸಂಗೀತ, ಗಮಕ, ಚಿತ್ರಕಲಾ ಶಿಬಿರ ಪತ್ರಿಕೆಗಳಲ್ಲಿ ವಿವಿಧ ಲೇಖನಗಳ ತಯಾರಿ, ಇಂಗ್ಲೀಷ್, ಕನ್ನಡ ವಿಕಿಪೀಡಿಯದಲ್ಲಿ ಅರೆಭಾಷೆ ಭಾಷೆ, ಸಂಸ್ಕೃತಿ, ಸಾಹಿತ್ಯದ ಪುಸ್ತಕಗಳ, ಡಿಜಿಟಲ್ ಪುಸ್ತಕಗಳ ಉಲ್ಲೇಖ ಇತ್ಯಾದಿಗಳಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ವನ್ನು ಸ್ಥಾಪಿಸಲು ವಿಶ್ವವಿದ್ಯಾನಿಲಯ ಆಡಳಿತ ವರ್ಗ ಮತ್ತು ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ಆ ಪ್ರಯುಕ್ತ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಟ್ವಿಟರ್, ಫೇಸ್ಬುಕ್ಗಳಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದು ಲಕ್ಷಿö್ಮನಾರಾಯಣ ಕಜೆಗದ್ದೆ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಧನಂಜಯ ಅಗೋಳಿಕಜೆ, ಬೈತಡ್ಕ ಜಾನಕಿ, ಸ್ಮಿತಾ ಅಮೃತರಾಜ್, ಕಿರಣ್ ಕುಂಬಳಚೇರಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಉಪಸ್ಥಿತರಿದ್ದರು.