ಕಣಿವೆ, ಜೂ. ೧೭: ಕೊಡಗು ಜಿಲ್ಲೆ ಮಾತ್ರವಲ್ಲ ನೆರೆಯ ಮೈಸೂರು ಹಾಗೂ ಮಂಗಳೂರು ಸೇರಿದಂತೆ ಮೂರು ಜಿಲ್ಲೆಗಳ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೊಡಗಿನ ಕುಶಾಲ ನಗರದ ಏಕೈಕ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಮೂಲ ಸೌಲಭ್ಯಗಳ ಕೊರತೆಯಲ್ಲಿ ಸಿಲುಕಿದೆ.
ಕಳೆದ ೧೩ ವರ್ಷಗಳ ಹಿಂದೆ ಅಂದರೆ ೨೦೦೭ ರಲ್ಲಿ ಆರಂಭವಾದ ಈ ಇಂಜಿನಿಯರಿAಗ್ ಕಾಲೇಜಿಗೆ ಸರ್ಕಾರದಿಂದ ದೊರಕಬೇಕಾದ ಸವಲತ್ತುಗಳನ್ನು ದೊರಕಿಸುವಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು, ಅಷ್ಟೇ ಏಕೆ ಅಧಿಕಾರಿಗಳ ನಿರಾಸಕ್ತಿ ಹಾಗೂ ದೂರದೃಷ್ಟಿಯ ಕೊರತೆ ಯಿಂದಾಗಿ ಕಾಲೇಜು ಸಮಸ್ಯೆಗಳ ಸುಳಿಯಲ್ಲಿದೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅಧೀನದಲ್ಲಿನ ೫೦ ಎಕರೆಗೂ ಹೆಚ್ಚು ವಿಸ್ತೀರ್ಣ ಜಾಗದ ಪೈಕಿ ಕೇವಲ ೧೨.೫೯ ಎಕರೆ ಜಾಗದಲ್ಲಿ ತಲೆ ಎತ್ತಿ ನಿಂತಿರುವ ಇಂಜಿನಿಯರಿAಗ್ ಕಾಲೇಜಿನಲ್ಲಿ ಇದೀಗ ೮೪೨ ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆದಿದ್ದಾರೆ.
ಹಾಸ್ಟೆಲ್ ಕೊರತೆ
ಕಾಲೇಜು ಆವರಣದಲ್ಲಿ ತಲೆಎತ್ತಿ ನಿಂತಿರುವ ೧೬೦ ರಿಂದ ೨೦೦ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಒದಗಿಸಬೇಕಾದ ವಿವಿಧ ಮೂರು ಹಾಸ್ಟೆಲ್ ಕಟ್ಟಡಗಳು ಕೋಟ್ಯಾಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಲಾಗಿದೆ. ಆದರೆ ಆ ಕಟ್ಟಡಗಳಲ್ಲಿ ಹಾಸ್ಟೆಲ್ಗೆ ಬೇಕಾದ ಅಡುಗೆ ಮನೆ ಪರಿಕರಗಳು, ದಿಂಬು, ಹಾಸಿಗೆ, ಡೈನಿಂಗ್ ಪರಿಕರಗಳು ಸೇರಿದಂತೆ ಇತರೇ ಮೂಲ ಸೌಕರ್ಯಗಳನ್ನು ಇದುವರೆಗೂ ಪೂರೈಸದ ಕಾರಣ ವಿದ್ಯಾರ್ಥಿನಿಯರ ಎರಡು ಹಾಗೂ ಬಾಲಕರ ಒಂದು ವಸತಿ ನಿಲಯದ ಕಟ್ಟಡಗಳು ನೆನೆಗುದಿಗೆ ಬಿದ್ದಿವೆ.
ಕೂಡಲೇ ಜಿಲ್ಲಾಡಳಿತ ಈ ವಸತಿ ನಿಲಯದ ಕಟ್ಟಡಗಳನ್ನು ಸಂಬAಧಿಸಿದ ಸಮಾಜ ಕಲ್ಯಾಣ ಇಲಾಖೆ ಅಥವಾ ಹಿಂದುಳಿದ ವರ್ಗಗಳ ಇಲಾಖೆಗೆ ವಹಿಸಿಕೊಡುವ ಮೂಲಕ ಆದಷ್ಟು ಬೇಗ ಹಾಸ್ಟೆಲ್ ಸೌಲಭ್ಯ ಇಂಜಿನಿಯ ರಿಂಗ್ ಕಾಲೇಜಿನ ಬಡ ವಿದ್ಯಾರ್ಥಿ ಗಳಿಗೂ ತಲುಪುವ ಕ್ರಮವಾಗಬೇಕಿದೆ.
ಖಾಯಂ ನೌಕರರ ಕೊರತೆ
ಇಂಜಿನಿಯರಿAಗ್ ಕಾಲೇಜು ಆರಂಭವಾದ ಅಂದಿನಿAದ ಇಂದಿನವರೆಗೂ ಅಗತ್ಯವಾದ ಬೋಧಕ ಸಿಬ್ಬಂದಿಗಳು ಹಾಗೂ ಇತರೇ ನೌಕರರ ನೇಮಕಾತಿ ಸಾಧ್ಯವಾಗಿಲ್ಲ. ಹಾಗಾಗಿ ಹೊರಗುತ್ತಿಗೆ ಆಧಾರದಲ್ಲಿ ಪ್ರತೀ ವರ್ಷವೂ ಶೇ.೫೦ರಷ್ಟು ನೌಕರರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಬೋಧಿಸಲಾಗುತ್ತಿದೆ ಎಂದು ಪ್ರಾಂಶುಪಾಲ ಡಾ.ಸೀನಪ್ಪ ಹೇಳುತ್ತಾರೆ.
ಕುಡಿಯುವ ನೀರಿಲ್ಲ
ಕಾಲೇಜಿನಲ್ಲಿ ವ್ಯಾಸಂಗ ಮಾಡುವ ೮೪೦ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೇ ನೌಕರ ಸಿಬ್ಬಂದಿಗಳಿಗೆ ಕುಡಿಯಲು ಪರಿಶುದ್ಧವಾದ ನೀರಿನ ಘಟಕ ಇಲ್ಲದ ಕಾರಣ ಪ್ರಾಂಶುಪಾಲರು ಸ್ವತಃ ವೆಚ್ಚ ಭರಿಸಿ ದಿನಂಪ್ರತೀ ಹತ್ತು ನೀರಿನ ಕ್ಯಾನ್ಗಳನ್ನು ತರಿಸಿ ಕುಡಿಯುವ ನೀರು ಪೂರೈಸುತ್ತಿದ್ದಾರೆ.
ಹಾಗಾಗಿ ಕಾಲೇಜಿಗೆಂದೇ ಪ್ರತ್ಯೇಕವಾದ ಶುದ್ಧ ಕುಡಿಯುವ ನೀರಿನ ಘಟಕದ ಅಗತ್ಯವಿದೆ.
ಆಡಿಟೋರಿಯಂ ಇಲ್ಲ
ಸುತ್ತಲಿನ ಮೂರು ಜಿಲ್ಲೆಗಳ ಏಕೈಕ ಸರ್ಕಾರಿ ಇಂಜಿನಿಯರಿAಗ್ ಕಾಲೇಜಾಗಿರುವ ಇಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಕಾಲೇಜು ಆವರಣದಲ್ಲಿ ಅತೀ ಅಗತ್ಯವಾಗಿ ಆಡಿಟೋರಿಯಂ ನಿರ್ಮಾಣವಾಗ ಬೇಕಿದೆ. ಜೊತೆಗೆ ಕ್ರೀಡಾ ಪರಿಕರಗಳ ಪೂರೈಕೆಯಾಗಬೇಕಿದೆ. ಅಂದರೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಬೌದ್ಧಿಕ ವಿಕಸನಕ್ಕೆ ಇದು ಅಡಿಪಾಯವಾಗುತ್ತದೆ ಎಂಬುದು ಪ್ರಾಂಶುಪಾಲರ ಅಂಬೋಣ.
ಕರ್ನಾಟಕ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯಂತಹ ಏಳು ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳು ರಾಜ್ಯದಲ್ಲಿದ್ದು, ಈ ಏಳರ ಪೈಕಿ ಕುಶಾಲನಗರದ ಇಂಜಿನಿಯರಿAಗ್ ಕಾಲೇಜನ್ನು ಮಾಡಬೇಕೆಂಬ ಹಂಬಲ ಪ್ರಾಂಶುಪಾಲ ಡಾ. ಸೀನಪ್ಪ ಅವರದ್ದಾಗಿದೆ.
ವಿದ್ಯಾರ್ಥಿಗಳ ಒಳಿತಿಗೆ ಕ್ರಮ
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುಣಮಟ್ಟ ಸುಧಾರಿಸಿಕೊಂಡು ಮುಂದಿನ ಯಶಸ್ವಿ ಹೆಜ್ಜೆ ಇಡಲು ಅನುವಾಗುವಂತೆ ಜೆಇಇ, ಮೈನ್ಸ್, ನೀಟ್, ಐಐಟಿ ಮೊದಲಾದ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಇದೇ ಕಾಲೇಜಿನಲ್ಲಿ ಆ ಒಂದು ಅನುಕೂಲ ಒದಗಿಸುವ ಕನಸು ನನ್ನದಾಗಿದೆ ಎಂದು ಹೇಳುವ ಪ್ರಾಂಶುಪಾಲ ಡಾ.ಸೀನಪ್ಪ, ಕೊಡಗಿನ ಮಕ್ಕಳು ಬೇರೆ ಜಿಲ್ಲೆಗಳಿಗೆ ಹೋಗದೆ ಕೊಡಗು ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯುವಂತೆ ಕುಶಾಲನಗರದ ಇಂಜಿನಿಯರಿAಗ್ ಕಾಲೇಜಿನಲ್ಲಿ ಸುಸಜ್ಜಿತ ಪರೀಕ್ಷಾಂಗಣ ಕೊಠಡಿಯನ್ನು ನಿರ್ಮಿಸುವ ಗುರಿಯೂ ತಮ್ಮ ಮುಂದಿದೆ ಎನ್ನುತ್ತಾರೆ.
ಪ್ರಾಂಶುಪಾಲರು ಈ ಕಾಲೇಜಿಗೆ ಬರುವ ಮುನ್ನ ಕಾಲೇಜು ಕ್ಯಾಂಪಸ್ ಸೂರ್ಯಾಸ್ತವಾದೊಡೆ ಕತ್ತಲಿನಲ್ಲಿ ಕೂಡುತ್ತಿದ್ದುದನ್ನು ಮನಗಂಡು ವಿಶೇಷ ಆಸಕ್ತಿ ವಹಿಸಿ ಕಾಲೇಜು ಸುತ್ತಲೂ ವಿದ್ಯುಧೀಕರಣ ಗೊಳಿಸಿದ್ದಲ್ಲದೇ, ಹೆದ್ದಾರಿಯಲ್ಲಿ ಸಾಗುವವರಿಗೆ ಇಂಜಿನಿಯರಿAಗ್ ಕಾಲೇಜು ಗೊತ್ತಾಗಲಿ ಎಂದು ತಮ್ಮ ಹಣ ವ್ಯಯ ಮಾಡಿ ಹೊಸ ನಾಮಫಲಕಗಳನ್ನು ಅಳವಡಿಸಿದ ಕೀರ್ತಿ ಪ್ರಾಂಶುಪಾಲ ಡಾ. ಸೀನಪ್ಪ ಅವರಿಗೆ ಸಲ್ಲುತ್ತದೆ. ಹಾಗೆಯೇ ಇವರ ವಿಶೇಷ ಪ್ರಯತ್ನದಿಂದ ಕಳೆದ ವರ್ಷ ಕಾಲೇಜಿನಲ್ಲಿ ಶೇ. ೧೦೦ ಫಲಿತಾಂಶ ಬಂದಿದೆ. ಅಲ್ಲದೇ ಕಂಪ್ಯೂಟರ್ ಸೈನ್ಸ್ನ ೨೬, ಎಲೆಕ್ಟಾçನಿಕ್ಸ್ನ ೨೦, ಮೆಕ್ಯಾನಿಕಲ್ನ ೧೬ ಹಾಗೂ ಸಿವಿಲ್ನ ೬ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿದೆ.
ಶಾಸಕರು ಮನಸ್ಸು ಮಾಡಬೇಕಿದೆ
ಜಿಲ್ಲೆಯ ಏಕೈಕ ಸರ್ಕಾರಿ ಇಂಜಿನಿಯರಿAಗ್ ಕಾಲೇಜಾದ ಕುಶಾಲನಗರದ ಇಂಜಿನಿಯರಿAಗ್ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರಾದ ಅಪ್ಪಚ್ಚು ರಂಜನ್ ಇನ್ನಾದರೂ ಟೊಂಕ ಕಟ್ಟಿ ನಿಲ್ಲಲೇಬೇಕಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಇವರದೇ ಸರ್ಕಾರ ಇರುವ ಕಾರಣ, ಕಾಲೇಜಿಗೆ ಪೂರಕವಾದ ಅನುದಾನ ಹಾಗೂ ಅಭಿವೃದ್ಧಿಗಳನ್ನು ತರಲು ಸರ್ಕಾರದೊಂದಿಗೆ ವ್ಯವಹಾರ ನಡೆಸಿ ಕಾಲೇಜನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂಬುದು ವಿದ್ಯಾರ್ಥಿಗಳ ಕೋರಿಕೆಯಾಗಿದೆ.
ಸನಿಹವೇ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವ್ಯಾಪ್ತಿಯಲ್ಲಿರುವ ವಿಶಾಲ ಜಾಗದ ಪೈಕಿ ಇನ್ನೊಂದಷ್ಟು ಜಾಗವನ್ನು ಇಂಜಿನಿಯರಿAಗ್ ಕಾಲೇಜಿಗೆ ವಹಿಸುವ ಮೂಲಕ ಕಾಲೇಜಿನ ಇತರೇ ಚಟುವಟಿಕೆಗಳು ಹಾಗೂ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ವಿದ್ಯಾರ್ಥಿಗಳ ಪೋಷಕರ ಆಗ್ರಹವಾಗಿದೆ.
- ಕೆ.ಎಸ್. ಮೂರ್ತಿ