ಕುಶಾಲನಗರ, ಜೂ. ೧೭: ಕುಶಾಲನಗರ ತಾಲೂಕು ಆಡಳಿತದ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನ ಆಚರಣೆ ಸಂಬAಧ ಪೂರ್ವಭಾವಿ ಸಭೆ ನಡೆಯಿತು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಯೋಗ ದಿನ ಯಶಸ್ವಿಗೊಳಿಸಲು ಸಲಹೆ ಸೂಚನೆಗಳನ್ನು ಪಡೆದು ಚರ್ಚಿಸಲಾಯಿತು.

ತಾ. ೨೧ ರಂದು ಕುಶಾಲನಗರದ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬೆಳಿಗ್ಗೆ ೫.೩೦ ಕ್ಕೆ ತಾಲೂಕು ಆಡಳಿತ ಸಿಬ್ಬಂದಿ ವರ್ಗ ಸೇರಿದಂತೆ ವಿವಿಧ ಇಲಾಖೆ ಪ್ರತಿನಿಧಿಗಳು, ಶಾಲಾ ವಿದ್ಯಾರ್ಥಿಗಳು ಯೋಗದಲ್ಲಿ ಪಾಲ್ಗೊಳ್ಳುವ ಬಗ್ಗೆ ಸಭೆ ತೀರ್ಮಾನಿಸಿತು. ಈ ಸಂದರ್ಭ ಪಪಂ ಆರೋಗ್ಯಾಧಿಕಾರಿ ಉದಯ್ ಕುಮಾರ್, ಆರೋಗ್ಯ ಇಲಾಖೆಯ ಡಾ. ಸೌಪರ್ಣಿಕ, ಹೆಚ್.ಕೆ. ಶಾಂತಿ, ನೀರಾವರಿ ನಿಗಮದ ಸಿದ್ದರಾಜು, ಉಪನ್ಯಾಸಕಿ ಲತಾ, ಶಿಕ್ಷಕರಾದ ಉ.ರಾ. ನಾಗೇಶ್, ಭಾರತಿ, ರಾಜು, ಯೋಗ ಶಿಕ್ಷಕ ಮಧುಸೂದನ್, ಕೃಷಿ ಅಧಿಕಾರಿ ಬೋಪಯ್ಯ, ಲೋಕೇಶ್ ಮತ್ತಿತರರು ಇದ್ದರು.