ವೀರಾಜಪೇಟೆ, ಜೂ. ೧೪: ೨೦೨೧-೨೨ನೇ ಸಾಲಿನ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಸಿ.ಎನ್. ನದೀಮ ಪ್ರಥಮ, ನಬೀಲ ಸಿ.ಎನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳು. ಹನೀಫ್ ಫೈಜಿ ಇವರ ಗುರುಗಳಾಗಿದ್ದಾರೆ. ಇವರು ಕಲ್ಲುಬಾಣೆಯ ಸಿ.ಎಂ. ನೌಶಾದ್ ಹಾಗೂ ಸಿ.ಎನ್. ಬುಶ್ರಾ ಅವರ ಮಕ್ಕಳು.