ಗೋಣಿಕೊಪ್ಪಲು, ಜೂ. ೧೫: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು ಇದರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗುತ್ತಿದೆ. ವಾಹನ ಚಾಲನೆಯಲ್ಲಿನ ನಿರ್ಲಕ್ಷö್ಯತೆ ಇದಕ್ಕೆ ಮೂಲ ಕಾರಣವೆಂದು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ. ಅಯ್ಯಪ್ಪ ಕಳವಳ ವ್ಯಕ್ತಪಡಿಸಿದರು.

ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಹಾಗೂ ನಾಗರಿಕರಿಗೆ ಬಂದೂಕು ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ೧೮ ರಿಂದ ೩೫ ವರ್ಷದೊಳಗಿನ ಯುವಕರು ಮೃತಪಟ್ಟಿರುವ ಬಗ್ಗೆ ಪೊಲೀಸ್ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ನಾಗರಿಕರಲ್ಲಿ ಅರಿವು ಮೂಡಿಸುವುದು ಇಲಾಖೆಯ ಮೂಲ ಉದ್ದೇಶವೆಂದ ಅವರು, ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಮುಕ್ತ ಚರ್ಚೆ ನಡೆಸಿ ಅಭಿಪ್ರಾಯಗ ಳನ್ನು ಕ್ರೋಢಿಕರಿಸಲಾಗುವುದು. ಯುವಕರು ಹೆಲ್ಮೆಟ್ ಧರಿಸದೆ, ಮೊಬೈಲ್‌ನಲ್ಲಿ ಮಾತನಾಡಿಕೊಂಡು, ಸೀಟ್‌ಬೆಲ್ಟ್ ಇಲ್ಲದೆ, ಅತೀ ವೇಗವಾಗಿ ವಾಹನ ಚಾಲಿಸುವುದರಿಂದ ಇಂತಹ ಅಪಘಾತಗಳು ವರದಿಯಾಗುತ್ತಿವೆ.

ಲೈಸನ್ಸ್ ಹಾಗೂ ವಿಮೆಯನ್ನು ಹೊಂದದೆ ವಾಹನ ಚಾಲಿಸುವುದು ಹಾಗೂ ಮಕ್ಕಳಿಗೆ ವಾಹನಗಳನ್ನು ಪೋಷಕರು ನೀಡುತ್ತಿರುವುದು ಅಪಘಾತಕ್ಕೆ ಮತ್ತೊಂದು ಕಾರಣ ವಾಗಿದೆ. ಅತ್ಯಂತ ಜಾಗೃತೆಯಿಂದ ರಸ್ತೆ ನಿಯಮಗಳನ್ನು ಪಾಲಿಸಿ ವಾಹನವನ್ನು ಚಾಲಿಸಬೇಕು. ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ನಾಗರಿಕನು ರಸ್ತೆ ನಿಯಮಗಳನ್ನು ಪಾಲಿಸುವಂತೆ ಈ ವೇಳೆ ಕರೆ ನೀಡಿದರು.

ನಿಯಮ ಉಲ್ಲಂಘಿಸಿದ್ದಲ್ಲಿ ಇಲಾಖೆ ಇಂತಿಷ್ಟು ದಂಡ ವಿಧಿಸುವ ನಿಯಮವಿದೆ ಆದರೆ ನಾಗರಿಕರು ಸ್ವ ಇಚ್ಚೆಯಿಂದ ನಿಯಮಗಳನ್ನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸಬೇಕು. ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ವೀರಾಜಪೇಟೆ ತಾಲೂಕು ಉಪ ಅಧೀಕ್ಷಕ ಎನ್. ನಿರಂಜನ್ ರಾಜೇ ಅರಸ್ ಮಾತನಾಡಿ, ನಿಯಮಗಳನ್ನು ಪಾಲಿಸುವ ಮೂಲಕ ವಾಹನ ಚಾಲಿಸಬೇಕು. ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿರುವ ಕಾವೇರಿ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿ ಗಳ ಆಗಮನ ಹಾಗೂ ತೆರಳುವ ವೇಳೆ ತಾತ್ಕಾಲಿಕ ಬ್ಯಾರಿಕೇಡನ್ನು ಅಳವಡಿಸಿ ಅಪಘಾತಗಳು ನಡೆಯದಂತೆ ಮುಂಜಾಗ್ರತೆ ಕೈಗೊಳ್ಳುತ್ತೇವೆ.

ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳು ತಮ್ಮ ರಿಕ್ಷಾಗಳಲ್ಲಿ ಚಾಲಕನ ಮೊಬೈಲ್ ಸಂಖ್ಯೆ ಸೇರಿದಂತೆ ಆತನ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ತಮ್ಮ ರಿಕ್ಷಾಗಳಲ್ಲಿ ಅಳವಡಿಸಬೇಕು. ರಸ್ತೆಯಲ್ಲಿ ಸಂಚರಿಸುವ ವೇಳೆ ನಾಗರಿಕರು ತಮ್ಮ ಬಲಭಾಗದಲ್ಲಿ ಸಂಚಾರ ಮಾಡಿದರೆ ಮುಂದೆ ಬರುವ ವಾಹನಗಳನ್ನು ಗಮನಿಸಿ ರಸ್ತೆ ಬದಿಗೆ ಸರಿಯಬಹುದು ಎಂದು ತಿಳುವಳಿಕೆ ನೀಡಿದರು. ಅಲ್ಲದೆ ಸ್ಲೆöÊಡ್ ಶೋ ಮೂಲಕ ರಸ್ತೆ ಅಪಘಾತಗಳ ಮಾಹಿತಿಗಳನ್ನು ನಾಗರಿಕರಿಗೆ ಒದಗಿಸಿದರು. ಇಲಾಖೆಯು ನೀಡುವ ಬಂದೂಕು ತರಬೇತಿಯ ಪ್ರಯೋಜನವನ್ನು ಪ್ರತಿ ನಾಗರಿಕನು ಪಡೆಯಲು ಇಲಾಖೆ ಮೂಲಕ ತರಬೇತಿ ಹಮ್ಮಿಕೊಳ್ಳ ಲಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ, ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಶರತ್‌ಕಾಂತ್, ಹಿರಿಯ ನಾಗರಿಕ ಅಬ್ದುಲ್ ಸಮ್ಮದ್ ಸೇರಿದಂತೆ ಇನ್ನಿತರ ಪ್ರಮುಖರು ವಾಹನ ಸಂಚಾರದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಿದರು. ಇವುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಡಿವೈಎಸ್ಪಿ ಭರವಸೆ ನೀಡಿದರು. ವೇದಿಕೆಯಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ, ಬಂದೂಕು ತರಬೇತುದಾರರ ವೆಂಕಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪೊಲೀಸ್ ಸಿಬ್ಬಂದಿ ಪೂವಣ್ಣ ಕಾರ್ಯಕ್ರಮ ನಿರೂಪಿಸಿ, ಗೋಣಿಕೊಪ್ಪಲುವಿನ ವೃತ್ತ ನಿರೀಕ್ಷಕ ಗೋವಿಂದರಾಜ್ ಸ್ವಾಗತಿಸಿ, ಮಡಿಕೇರಿ ವೃತ್ತ ನಿರೀಕ್ಷಕ ನಾಯಕ್ ವಂದಿಸಿದರು. ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು, ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ದರು.