ಕಣಿವೆ, ಜೂ. ೧೪: ಈ ಬಾರಿಯ ಮುಂಗಾರು ಮಳೆಗೆ ಕ್ಷಣಗಣನೆ ಶುರುವಾಗಿದೆ. ಆದರೆ ಈ ಬಾರಿಯೂ ಹಾರಂಗಿ ಜಲಾಶಯದ ಮುಖ್ಯ ಕಾಲುವೆಯ ಆಧುನೀಕರಣ ಕಾಮಗಾರಿಗೆ ಕಾಯಕಲ್ಪ ಸಿಗಲಿಲ್ಲ.

ಕಳೆದ ಎರಡು ವರುಷಗಳ ಹಿಂದೆಯೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾರಂಗಿ ಮುಖ್ಯ ಕಾಲುವೆಯ ದುರಸ್ತಿಗೆ ಕೋಟ್ಯಂತರ ರೂಪಾಯಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಕೂಡ ಇದುವರೆಗೂ ಚಿಕ್ಕಾಸು ಕೂಡ ಬಿಡುಗಡೆಯಾಗದ ಕಾರಣ ಕಾಲುವೆ ಆಧುನೀಕರಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ದಶಕಗಳ ಹಿಂದೆ ಮುಖ್ಯ ಕಾಲುವೆಯ ಎರಡೂ ಬದಿಗಳಲ್ಲಿ ಸೈಜು ಕಲ್ಲುಗಳಿಂದ ತಡೆಗೋಡೆ ಕಟ್ಟಿ ಸಿಮೆಂಟ್‌ನಿAದ ನಿರ್ಮಿಸಿದ್ದ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು, ಕಾಲುವೆ ಅಸ್ತಿಪಂಜರದAತೆ ಕಾಣುತ್ತಿದೆ. ಆದರೆ ಭವಿಷ್ಯದಲ್ಲಿ ಕಾಲುವೆಯ ಎರಡು ಕಡೆಗಳ ಮಣ್ಣಿನ ಪದರ ಕುಸಿತಗೊಂಡು ಅಥವಾ ಮೋಳೆ ಬಿದ್ದು ತಗ್ಗು ಪ್ರದೇಶದತ್ತ ನೀರು ಹರಿದು ಹಾನಿಯಾಗುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ.

ರೈತರ ಸಂಜೀವಿನಿಯಾದ ಹಾರಂಗಿ ಮುಖ್ಯ ಕಾಲುವೆ ಶಿಥಿಲಗೊಂಡು ಬೆಳೆ ನಷ್ಟವಾಗದ ಮುನ್ನ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದ ಹಿರಿಯ ಅಧಿಕಾರಿಗಳ ಕಣ್ಣು ತೆರೆಸಿ ಅಗತ್ಯವಾದ ಅನುದಾನ ತರುವಲ್ಲಿ ಇನ್ನಾದರೂ ಕಾರ್ಯಪ್ರವೃತ್ತರಾಗಬೇಕಿದೆ.

ಕಾಲುವೆಯೊಳಗೆ ಬೃಹತ್ ಗಿಡಮರಗಳು

ಹಾರಂಗಿ ಮುಖ್ಯ ಕಾಲುವೆಯ ಉದ್ದಕ್ಕೂ ಗಿಡ ಗಂಟಿಗಳು ಬೆಳೆದು ಬೃಹತ್ ಮರಗಳಾಗಿ ಬೆಳೆದು ನಿಂತಿವೆ. ಈ ಮರಗಳ ಬೇರುಗಳು ಕಾಲುವೆಯ ದಿಂಡುಗಳಲ್ಲಿ ನೀಳವಾಗಿ ಚಾಚುತ್ತಿದ್ದು ಕಾಲುವೆ ಬಿರುಕುಗೊಳ್ಳುವ ಅಪಾಯವೂ ಇದೆ. ಹಾಗಾಗಿ ಕಾಲುವೆಯೊಳಗೆ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಿ ಮರಗಳನ್ನು ಕಡಿದುರುಳಿಸಬೇಕು. ಹಾಗೆಯೇ ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಜಲಾಶಯ ತುಂಬಿದಾಗ ಕಾಡು ಕಡಿದು ಹೂಳು ತೆಗೆವ ಪ್ರಹಸನ...?

ಪ್ರತಿ ವರ್ಷ ಮುಂಗಾರು ಹಂಗಾಮಿಗೂ ಮುನ್ನ, ಅಂದರೆ ಜಲಾಶಯ ಭರ್ತಿಯಾಗಿ ಕಾಲುವೆಗಳಲ್ಲಿ ನೀರು ಹರಿಯದ ಮುನ್ನ ರೈತರ ಗದ್ದೆಗಳಿಗೆ ನೀರುಣಿಸುವ ಕಾಲುವೆ ಹಾಗೂ ಉಪಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯುವ ಕೆಲಸಗಳನ್ನು ನೀರಾವರಿ ನಿಗಮ ಮಾಡಬೇಕಿದ್ದರೂ ಕೂಡ ಮಳೆಗಾಲದಲ್ಲಿ ಜಲಾಶಯ ಭರ್ತಿಗೊಂಡು ನೀರು ಹರಿದು ಅಪವ್ಯಯವಾಗುವ ಸಂದರ್ಭ ಕಾಲುವೆಗಳ ಹೂಳು ತೆಗೆಯುವ ಪ್ರಹಸನಕ್ಕೆ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಹಾಗಾಗಿ ಇದು ತಪ್ಪಬೇಕು. ಪ್ರತೀ ವರ್ಷದ ಬೇಸಿಗೆ ಯಲ್ಲಿ ಕಾಲುವೆಗಳ ಹೂಳು ತೆಗೆ ಯುವ ಕಾಮಗಾರಿ ಪೂರ್ಣಗೊಳಿಸ ಬೇಕೆಂಬುದು ರೈತರ ಆಗ್ರಹವಾಗಿದೆ.

ಕಾಲುವೆಗಳ ದಂಡೆಯ ರಸ್ತೆಗಳು ಹಾಳು

ಹಾರಂಗಿ ಮುಖ್ಯ ಕಾಲುವೆಯ ಬದಿಯ ಸಾರ್ವಜನಿಕ ರಸ್ತೆಗಳು ಕೂಡ ಹಾಳಾಗಿದ್ದು ಪಾದಚಾರಿಗಳಿಗೆ, ದನಗಾಹಿಗಳಿಗೆ ಅಷ್ಟೇ ಏಕೆ ಕೃಷಿಕರ ಸಂಚಾರಕ್ಕೆ ಸಂಚ ಕಾರ ತಂದೊಡ್ಡಿವೆ. ಕೂಡಲೇ ಈ ರಸ್ತೆಗಳ ಸುಸ್ಥಿತಿಗೆ ಮುಂದಾಗಬೇಕೆAದು ರೈತರು ಒತ್ತಾಯಿಸಿದ್ದಾರೆ.

- ಕೆ.ಎಸ್. ಮೂರ್ತಿ