ಮಡಿಕೇರಿ, ಜೂ. ೧೪: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಲಲಿತ ಪ್ರಬಂಧ, ಕಥೆ ಮತ್ತು ಕವಿತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ನಿಮ್ಮ ಸ್ವಂತ ರಚನೆಯಾಗಿರಲಿ, ಪ್ರಕಟಿತ ಮತ್ತು ಅನುವಾದಿತ ಬರಹಗಳಿಗೆ ಅವಕಾಶವಿಲ್ಲ. ಕಥೆ, ಲಲಿತ ಪ್ರಬಂಧ ಒಂದು ಸಾವಿರ ಪದಗಳು ಮೀರದಂತಿರಲಿ, ಕವಿತೆ ೩೦ ಸಾಲುಗಳ ಮಿತಿಯಲ್ಲಿರಲಿ. ಹೊಸ ಆಲೋಚನೆ, ಹೊಸ ಹೊಳಹುಗಳ ಬರಹವಾಗಿರಬೇಕು.

ಕಥೆ, ಕವಿತೆ, ಪ್ರಬಂಧ ವಿಭಾಗದಲ್ಲಿ ವಿಜಯಶಾಲಿಯಾದವರಿಗೆ ಪ್ರಥಮ ರೂ. ೩ ಸಾವಿರ, ದ್ವಿತೀಯ ರೂ. ೨ ಸಾವಿರ, ತೃತೀಯ ರೂ. ೧ ಸಾವಿರವನ್ನು ಬಹುಮಾನವಾಗಿ ನೀಡಲಾಗುವುದು. ಒಬ್ಬರೇ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಬರಹ ಕಳಿಸಲು ಜುಲೈ ೧೫ ಕೊನೆ ದಿನವಾಗಿದ್ದು, ನಂತರ ಬಂದ ಬರಹಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಾಸೀಟ್ ರಸ್ತೆ, ಮಡಿಕೇರಿ. ಮೊ. ೬೩೬೨೫೨೨೬೭೭ ಸಂಪರ್ಕಿಸಬಹುದು ಅಥವಾ ಚಿಡಿebಚಿseಚಿಛಿಚಿಜemಥಿ @gmಚಿiಟ.ಛಿomಗೆ ಮಿಂಚAಚೆ ಮಾಡುವಂತೆ ಪ್ರಕಟಣೆ ತಿಳಿಸಿದೆ.