ಕುಶಾಲನಗರ: ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ಕೆ.ವಿ. ಶಿವರಾಂ ತಿಳಿಸಿದರು. ಅವರು ಕುಶಾಲನಗರದ ಅರಣ್ಯ ತಪಾಸಣಾ ಗೇಟ್ ಬಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅರಣ್ಯ ಇಲಾಖೆ, ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕ ಸಹಯೋಗದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸ್ವಚ್ಛತಾ ಮತ್ತು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರೂ ಪ್ರಕೃತಿಯ ಆರಾಧನೆ ಮೂಲಕ ವರ್ಷದ ಎಲ್ಲಾ ದಿನಗಳಲ್ಲಿಯೂ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯ ಭಾನು ಅವರು ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಸಮೃದ್ಧಿಯಾದ ಪರಿಸರ ಹಸ್ತಾಂತರ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನ ಪ್ರಾಂಶುಪಾಲೆ ಲಿಖಿತ ಮತ್ತು ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ರಾಷ್ಟಿçÃಯ ಸೇವಾ ಯೋಜನೆಯ ಶಿಬಿರಾಧಿಕಾರಿ ಮಂಜೇಶ್ ಅವರಿಗೆ ವಲಯ ಅರಣ್ಯ ಅಧಿಕಾರಿ ಶಿವರಾಂ ಗಿಡ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊಡಗು ಮೈಸೂರು ಸಂಪರ್ಕ ಕಲ್ಪಿಸುವ ಐತಿಹಾಸಿಕ ಕಾವೇರಿ ನದಿ ಹಳೆಯ ಸೇತುವೆ ಮೇಲೆ ಬೆಳೆದಿದ್ದ ಗಿಡಗಂಟೆಗಳನ್ನು ವಿದ್ಯಾರ್ಥಿಗಳು ಮತ್ತು ಸಂಘದ ಸದಸ್ಯರು ತೆರವುಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲಾಯಿತು. ಅರಣ್ಯ ಇಲಾಖೆ ಮೂಲಕ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎA. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಉಪಾಧ್ಯಕ್ಷ ಉದಯಕುಮಾರ್, ಪತ್ರಕರ್ತರ ಸಂಘದ ರಾಷ್ಟಿçÃಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರಾದ ಡಿ.ಎಸ್. ಸೋಮಶೇಖರ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಪದಾಧಿಕಾರಿಗಳಾದ ನಾಗರಾಜಶೆಟ್ಟಿ , ಕುಡೆಕಲ್ ಗಣೇಶ್, ನಿರ್ದೇಶಕರಾದ ಶಿವರಾಜ್, ಟಿ.ಆರ್. ಪ್ರಭುದೇವ್, ಕಾರ್ಯಕ್ರಮ ಸಂಯೋಜಕರಾದ ವಿನೋದ್, ಸಂಘದ ಸದಸ್ಯರು, ಎಂ.ಜಿ.ಎA. ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಇದ್ದರು.

ಹೊದ್ದೂರು ಶ್ರೀ ಶಾಸ್ತಾ-ಈಶ್ವರ ದೇಗುಲ ಆವರಣ ಹೊದ್ದೂರು: ಮಾನವನು ಪರಿಸರದೊಂದಿಗೆ ಅವಿನಾಭಾವ ಸಂಬAಧ ಹೊಂದಿರುವನು. ಈ ಹಿನ್ನೆಲೆಯಲ್ಲಿ ಪರಿಸರ ದಿನವನ್ನು ನಿತ್ಯೋತ್ಸವವನ್ನಾಗಿ ಆಚರಿಸುವ ಅಗತ್ಯವಿದೆ. ನೆಟ್ಟ ಗಿಡಗಳನ್ನು ಮಕ್ಕಳಂತೆ ಪೋಷಿಸಿ, ಬೆಳೆಸುವುದು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿ ಎಂದು ಹೊದ್ದೂರಿನ ಶ್ರೀ ಶಾಸ್ತಾ-ಈಶ್ವರ ದೇವಳ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಅಭಿಪ್ರಾಯಿಸಿದರು.

ಮೂರ್ನಾಡು ಸಮೀಪದ ಹೊದ್ದೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ಶಾಸ್ತಾ-ಈಶ್ವರ ದೇಗುಲದ ಆವರಣದಲ್ಲಿ ವಿವಿಧ ಹಣ್ಣಿನ ಸಸಿಗಳನ್ನು ನೆಟ್ಟು ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ದೇಗುಲದ ಆವರಣದ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿತವಾಗಿತ್ತು.

ಹವ್ಯಾಸಿ ಪತ್ರಕರ್ತ ಕೂಡಂಡ ರವಿ ಮಾತನಾಡಿ, ದೇವಾಲಯದ ಆವರಣದಲ್ಲಿ ಹಣ್ಣು ಮತ್ತು ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಊರಿನ ಮತ್ತು ಪರವೂರಿನ ಭಕ್ತಾದಿಗಳು, ಪರಿಸರ ಪ್ರಿಯರು ವಿವಿಧ ಜಾತಿಯ ಹೂವು-ಹಣ್ಣು ಮತ್ತು ಔಷಧೀಯ ಸಸ್ಯಗಳನ್ನು ದೇಣಿಗೆಯಾಗಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರುಗಳಾದ ಚೌರೀರ ರಮೇಶ್ ಕಾವೇರಪ್ಪ, ಅಮ್ಮಣಂಡ ಯು. ಪೂಣಚ್ಚ, ಕಾರ್ಯದರ್ಶಿ ಕೂಡಂಡ ಸಾಬಾ ಸುಬ್ರಮಣಿ, ಸಹ ಕಾರ್ಯದರ್ಶಿಗಳಾದ ಮೇಕಂಡ ಸುನಿಲ್, ಅಚ್ಚಪಂಡ ಮಂಜು ಮಾಚಯ್ಯ, ಖಜಾಂಚಿ ಚೆಟ್ಟಿಮಾಡ ಸುನಿ ಲಕ್ಷಣ್, ಸದಸ್ಯರುಗಳಾದ ವಾಂಚೀರ ರಾಜಾ ಅಪ್ಪಯ್ಯ, ಚೆಟ್ಟಿಮಾಡ ಗೋಪಾಲ್, ಭಗವಾನ್, ಕೋರನ ಪಚ್ಚು ದೇವಿಪ್ರಸಾದ್, ಮೇಕಂಡ ಗಣೇಶ್, ಪೆಮ್ಮಯ್ಯ, ಕೂಡಂಡ ವಸಂತ್, ಸೋಮಣ್ಣ, ನಾಣಯ್ಯ ಸೇರಿದಂತೆ ಗ್ರಾಮಸ್ಥರು, ಭಕ್ತಾಧಿಗಳು ಭಾಗವಹಿಸಿದ್ದರು.

ಈ ಸಂದರ್ಭ ದೇವಳದ ಆವರಣದಲ್ಲಿ ವಿವಿಧ ಹಣ್ಣಿನ ಮತ್ತು ಹೂವಿನ ಮತ್ತು ಕಾಡು ಜಾತಿಯ ಕಸಿಗಿಡಗಳನ್ನು ನೆಡಲಾಯಿತು. ತಮ್ಮ ಸಸ್ಯಗಾರ(ನರ್ಸರಿ)ಯಲ್ಲಿ ಬೆಳೆಸಲಾದ ಗಿಡಗಳನ್ನು ಕಾರ್ಯಕ್ರಮಕ್ಕೆ ಕೂಡಂಡ ರವಿ ಉಚಿತವಾಗಿ ನೀಡಿದರು.

ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಸಿಆರ್‌ಪಿ ಹಾಗೂ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಶಿಕ್ಷಕ ಎ.ಟಿ. ಸುಬ್ರಮಣಿ ಅವರು ಪರಿಸರದ ಸಂರಕ್ಷಣೆಯಾರ್ಥ ಶಾಲೆಗೆ ತೆಂಗಿನ ಸಸಿಗಳನ್ನು ವಿತರಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.