ನಾಪೋಕ್ಲು, ಜೂ. ೧೪: ಕುಯ್ಯಂಗೇರಿ ಗ್ರಾಮದ ಚಿಲ್ಲನ ಕುಮಾರಪ್ಪ ಮಡಿಕೇರಿ ತಾಲೂಕಿನಲ್ಲಿ ಮೊದಲ ನಾಟಿ ಕಾರ್ಯವನ್ನು ಹಲವು ವರ್ಷಗಳಿಂದ ಕೈಗೊಳ್ಳುತ್ತಿದ್ದು, ತೋಡಿನ ನೀರಿನ ಸಹಾಯದಿಂದ ಭüತ್ತ ಭಿತ್ತನೆ ಕಾರ್ಯವನ್ನು ಮಾಡಿದರು. ಇವರು ಹಲವು ವರ್ಷಗಳಿಂದ ಭತ್ತ ಕೃಷಿ ಮಾಡುತ್ತಿದ್ದು, ಯಾವುದೇ ಯಂತ್ರವನ್ನು ಬಳಸದೇ ದನಗಳ ಸಹಾಯದಿಂದ ಉಳುಮೆ ಮಾಡಿ ನಾಟಿ ಕಾರ್ಯ ಕೈಗೊಳ್ಳುತ್ತಾರೆ. ಸೆಗಣಿ ಗೊಬ್ಬರದಿಂದ ಬೆಳೆಯನ್ನು ತೆಗೆಯುತ್ತಾರೆ.