ಮಡಿಕೇರಿ, ಜೂ. ೧೪: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸೋಮವಾರಪೇಟೆ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಪ್ರಶಾಂತ್ ಬಜೆಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಂದಿರಾ ಮೊಣ್ಣಪ್ಪ, ಸಂಚಾಲಕರಾಗಿ ಬಿ.ಎಂ. ದಾಮೋದರ, ಉಪಾಧ್ಯಕ್ಷರಾಗಿ ಸುರೇಶ್ ಹಾಗೂ ಕಾರ್ಯದರ್ಶಿಯಾಗಿ ಬಿ.ನಿರೂಪ ನೇಮಕಗೊಂಡಿದ್ದಾರೆ.

ಸಲಹೆಗಾರರಾಗಿ ಮಂಜುನಾಥ್ ಚೌಟ, ರಮೇಶ್, ನಿರ್ದೇಶಕರುಗಳಾಗಿ ಪ್ರಶಾಂತ್, ಶಶಿಧರ್ ರೈ, ಹಂಸರಾಜ್ ಹಾಗೂ ಪುಷ್ಪ ನರೇಶ್ ಆಯ್ಕೆಯಾದರು.

ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಬಲವರ್ಧನೆಯ ಕುರಿತು ಚರ್ಚಿಸಲಾಯಿತು. ಎಲ್ಲಾ ತಾಲೂಕು ಸಮಿತಿ, ಹೋಬಳಿ, ಗ್ರಾಮ ಸಮಿತಿಯನ್ನು ರಚನೆ ಮಾಡುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಲು ತುಳು ಭಾಷಿಕರು ಕೈ ಜೋಡಿಸಬೇಕೆಂದು ಪ್ರಮುಖರು ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ವೈ.ಆನಂದ ರಘು, ನಿಕಟಪೂರ್ವ ಅಧ್ಯಕ್ಷ ಶೇಖರ್ ಭಂಡಾರಿ, ಖಜಾಂಚಿ ಪ್ರಭು ರೈ, ಸಂಘಟನಾ ಸಂಚಾಲಕ ರಾಜೀವ್ ಲೋಚನ, ನಿರ್ದೇಶಕ ಎಸ್.ಎನ್. ರಘು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಬಿ. ಶಿವಪ್ಪ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ನಿರೂಪಿಸಿ, ವಂದಿಸಿದರು.