ಮಡಿಕೇರಿ, ಜೂ. ೧೪: ಪ್ರಸ್ತುತ ೨೦೨೨-೨೩ನೇ ಸಾಲಿನಲ್ಲಿ ಸಣ್ಣ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಕಾಫಿ ಬೆಳೆಗಾರರು (೧೦ ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) ಕೈಗೊಳ್ಳುವ ವಿವಿಧ ಚಟುವಟಿಕೆಗಳಿಗೆ ಕಾಫಿ ಮಂಡಳಿಯಿAದ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆದ್ದರಿಂದ ಸಾಮಾನ್ಯ ಬೆಳೆಗಾರರು ತಮ್ಮ ತೋಟಗಳಲ್ಲಿ ಕಾಫಿ ಮರು ನಾಟಿ, ಹೊಸದಾಗಿ ಕೆರೆ, ತೆರೆದ ಬಾವಿ ನಿರ್ಮಿಸಲು ಹಾಗೂ ತುಂತುರು ನೀರಾವರಿ (Sಠಿಡಿiಟಿಞಟeಡಿ), ಹನಿ ನೀರಾವರಿ (ಆಡಿiಠಿ iಡಿಡಿigಚಿಣioಟಿ) ಅಳವಡಿಸಿಕೊಳ್ಳಲು ಇಚ್ಛಿಸುವವರು ಸಹಾಯಧನ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಸಣ್ಣ ಕಾಫಿ ಬೆಳೆಗಾರರು, ಕಾಫಿ ಮರುನಾಟಿ ಮಾಡಲು, ಹೊಸದಾಗಿ ಕೆರೆ, ಪಲ್ಪರ್, ಕಾಫಿ ಕಣ, ಗೋದಾಮು ನಿರ್ಮಿಸಲು ಇಚ್ಛಿಸುವವರು ಅರ್ಜಿಗಳನ್ನು ಹತ್ತಿರದ ಕಾಫಿ ಮಂಡಳಿಯ ಕಚೇರಿಗಳಿಗೆ ಸಲ್ಲಿಸಬಹುದಾಗಿದೆ.

ಎಲ್ಲಾ ಕಾಫಿ ಬೆಳೆಗಾರರು ಸಹಾಯಧನದ ಸೌಲಭ್ಯಕ್ಕೆ ಅರ್ಜಿಗಳನ್ನು ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು.