ಮಡಿಕೇರಿ, ಜೂ. ೧೨: ಹಾಕತ್ತೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಕೆ.ಟಿ. ಉತ್ತಯ್ಯ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ಹಾಕತ್ತೂರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕಿ ಈ.ವಿ. ಅಂಜಲಿ, ಉತ್ತಯ್ಯ ಅವರು, ಸುದೀರ್ಘ ೩೭ ವರ್ಷಗಳು ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದು, ಗುರುಗಳಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಫಿ ಬೆಳೆಗಾರ ಉದ್ದಿಯಂಡ ವಿವೇಕ್ ಮಾತನಾಡಿ, ಉತ್ತಯ್ಯ ಅವರ ಸೇವೆಯನ್ನು ಸ್ಮರಿಸಿದರು.
ಶಾಖಾ ಸಹಾಯಕ ವ್ಯವಸ್ಥಾಪಕಿ ಪಿ.ಎಸ್. ಯಶೋಧ, ಸಿಬ್ಬಂದಿ ಹೆಚ್.ಆರ್. ಕುಮಾರ್ ಹಾಗೂ ರಾಜ್ಯ ಯುವ ಪ್ರಶಸ್ತಿ ವಿಜೇತ ಪಿ.ಪಿ. ಸುಕುಮಾರ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಎಸ್‌ಎಸ್‌ಎನ್ ನಿರ್ದೇಶಕಿ ಬಿದ್ದಂಡ ಗಂಗಮ್ಮ, ಗ್ರಾಹಕರಾದ ಅಮ್ಮಾಟಂಡ ಮಾದಪ್ಪ (ಸಂತೋಷ) ಅವರು ಉಪಸ್ಥಿತರಿದ್ದರು. ಪಿ.ಪಿ. ಸುಕುಮಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.