ಸೋಮವಾರಪೇಟೆ, ಜೂ. ೧೨: ಯುವ ಜನತೆ ದೇಶದ ಸಂಪತ್ತಾಗಿದ್ದು, ದೇಶಾಭಿಮಾನ ಮೂಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕೆಂದು ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಕರೆ ನೀಡಿದರು.
ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೭೫ನೇ ವರ್ಷದ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಮೃತ ಭಾರತಿಗೆ ಕನ್ನಡದಾರತಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತಿಹಾಸ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ಕಾಲಹರಣ ಮಾಡಬಾರದು. ನಾಯಕತ್ವದ ಗುಣಗಳೊಂದಿಗೆ ಸಮಾಜ ಸೇವಾ ಮನೋಭಾವನೆ ಯನ್ನು ಮೂಡಿಸಿಕೊಂಡು ಸಮಾಜಕ್ಕೆ ಉಪಯುಕ್ತ ಪ್ರಜೆಗಳಾಗಿ ಬಾಳಬೇಕು ಎಂದರು.
ಕವಿ ಪುಟ್ಟಮಾದಯ್ಯ ಮಾತನಾಡಿ ಭಾರತದ ಇತಿಹಾಸ ಭವ್ಯವಾದುದು. ೫೦೦೦ ವರ್ಷಗಳ ಇತಿಹಾಸವಿರುವ ಭಾರತ ದೇಶವು ಪ್ರಪಂಚಕ್ಕೆ ಮಾದರಿಯಾಗುವ ರೀತಿ ಮುಂದುವರೆಯಬೇಕು. ಆ ನಿಟ್ಟಿನಲ್ಲಿ ಎಂದರು.
ಕವಿ ಪುಟ್ಟಮಾದಯ್ಯ ಮಾತನಾಡಿ ಭಾರತದ ಇತಿಹಾಸ ಭವ್ಯವಾದುದು. ೫೦೦೦ ವರ್ಷಗಳ ಇತಿಹಾಸವಿರುವ ಭಾರತ ದೇಶವು ಪ್ರಪಂಚಕ್ಕೆ ಮಾದರಿಯಾಗುವ ರೀತಿ ಮುಂದುವರೆಯಬೇಕು. ಆ ನಿಟ್ಟಿನಲ್ಲಿ