ಚೆಟ್ಟಳ್ಳಿ, ಜೂ. ೧೨: ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆ ಕಾನೂನಿನ ಅರಿವಿನ ಮೂಲಕ ಸಾಧ್ಯವೆಂದು ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ ವಿವರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಸ್ತಿçà ಒಕ್ಕೂಟ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯವರ ಸಂಯುಕ್ತ ಆಶ್ರಯದಲ್ಲಿ ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಮಹಿಳೆಯರಿಗಾಗಿ ಚೆಟ್ಟಳ್ಳಿ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ದೌರ್ಜನ್ಯ ಮುಕ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಚೆಟ್ಟಳ್ಳಿ ಉಪ ಪೊಲೀಸ್ ಠಾಣಾ ಎಎಸ್‌ಐ ಶ್ರೀನಿವಾಸ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಮಾಲಾಶ್ರೀ, ಮಾಜಿ ಸದಸ್ಯೆ ಸುಲೋಚನ, ಸ್ನೇಹ ಒಕ್ಕೂಟದ ಅಧ್ಯಕ್ಷೆ ಸರೋಜ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಮ್ಯ ಪ್ರಾರ್ಥಿಸಿ, ಸ್ತಿçà ಶಕ್ತಿ ಒಕ್ಕೂಟದ ಹಾಲಿ ನಿರ್ದೇಶಕಿ ಮೇರಿ ಅಂಬುದಾಸ್ ಸ್ವಾಗತಿಸಿ, ಧನಲಕ್ಷಿö್ಮ ವಂದಿಸಿದರು.