ಪೊನ್ನಂಪೇಟೆ, ಜೂ. ೧೨: ಈ ಬಾರಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಕೊಡವ ಮುಸ್ಲಿಂ ಅಸೋಸಿಯೇಷನ್(ಕೆ.ಎಂ.ಎ.)ನ ಕಾರ್ಯಕಾರಿ ಮಂಡಳಿಯ ಇಬ್ಬರು ನಿರ್ದೇಶಕರನ್ನು ಗೌರವಿಸಿ ಬೀಳ್ಕೊಡಲಾಯಿತು.
ವೀರಾಜಪೇಟೆಯ ಕೆ.ಎಂ.ಎ. ಪ್ರಧಾನ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪರಿಶುದ್ಧ ಹಜ್ ಯಾತ್ರೆ ಕೈಗೊಳ್ಳಲಿರುವ ಕೆ.ಎಂ.ಎ. ನಿರ್ದೇಶಕರುಗಳಾದ ಹಳ್ಳಿಗಟ್ಟು ಗ್ರಾಮದ ಚಿಮ್ಮಿಚ್ಚೀರ ಇಬ್ರಾಹಿಂ (ಉಮ್ಮಣಿ) ಮತ್ತು ಕೊಂಡAಗೇರಿಯ ಕುಪ್ಪಂದಿರ ಯಹ್ಯ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಿ ಹಜ್ ಯಾತ್ರೆಗೆ ಬೀಳ್ಕೊಡುಗೆ ನೀಡಲಾಯಿತು.
ಹಿರಿಯ ಧಾರ್ಮಿಕ ವಿದ್ವಾಂಸರಾದ ಮತ್ತು ಸಂಸ್ಥೆಯ ಹಿರಿಯ ಸಲಹೆಗಾರರಾಗಿರುವ ಕುಂಜಿಲದ ಅಬುಸೈಯದ್ ಪಾಯಡತಂಡ ಹುಸೈನ್ ಮುಸ್ಲಿಯಾರ್ ಅಲ್ ಖಾಸಿಮಿ, ಕೆ.ಎಂ.ಎ.ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ, ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬೇಗೂರಿನ ಆಲೀರ ಅಹಮದ್ ಹಾಜಿ, ಹಿರಿಯ ನಿರ್ದೇಶಕರುಗಳಾದ ಚಿಮ್ಮಿಚ್ಚೀರ ಎ. ಅಬ್ದುಲ ಹಾಜಿ, ಪೇನತಂಡ ಅಬ್ದುಲ್ ರಹಿಮಾನ್ ಹಾಜಿ, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಹ ಕಾರ್ಯದರ್ಶಿ ಮಂಡೆAಡ ಎ. ಮೊಯಿದು, ಪದಾಧಿಕಾರಿಗಳಾದ ಮೀತಲತಂಡ ಎಂ. ಇಸ್ಮಾಯಿಲ್, ಕುಪ್ಪೋಡಂಡ ಅಬ್ದುಲ್ ರಶೀದ್, ಪುದಿಯಾಣೆರ ಹನೀಫ್, ಪುಡಿಯಂಡ ಹನೀಫ್, ದುದ್ದಿಯಂಡ ಹೆಚ್. ಮೊಯಿದು ಹಾಜಿ ಮೊದಲಾದವರು ಭಾಗವಹಿಸಿದ್ದರು.