ಮಡಿಕೇರಿ, ಜೂ. ೧೨: ವೀರಾಜಪೇಟೆ ಹಿರಿಯ ನಾಗರಿಕರ ವೇದಿಕೆಯ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಧ್ಯಕೆÀ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮಾತನಾಡಿದರು. ಮಹಾಸಭೆಯ ವರದಿ ಮತ್ತು ೨೦೨೧-೨೨ನೇ ಸಾಲಿನ ಜಮಾ ಖರ್ಚು ಮಂಡನೆಯನ್ನು ಗುಮಾಸ್ತೆ ಟೈನಿ ಬೋಪಣ್ಣ ಸಭೆಯ ಮುಂದಿಟ್ಟರು. ಕಾರ್ಯಕಾರಿ ಮಂಡಳಿಯ ವರದಿಯನ್ನು ಮುಲ್ಲೇರ ಪೊನ್ನಮ್ಮ ವಾಚಿಸಿದರು. ಹಾಗೆ ಈ ಕಾರ್ಯಕ್ರಮದಲ್ಲಿ ಮಾಸ್ಟರ್ಗೇಮ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದ ಚೇಮಿರ ಸೀತಮ್ಮ, ಮುಲ್ಲೇರ ಪೊನ್ನಮ್ಮ ಅವರನ್ನು ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ಕಾರ್ಯದರ್ಶಿ ಪುಲಿಯಂಡ ಪಿ.ಪೊನ್ನಪ್ಪ, ಸ್ಥಾಪಕ ಅಧ್ಯಕ್ಷ ನಾಯಡ ವಾಸು ನಂಜಪ್ಪ, ನಿರ್ದೇಶಕರುಗಳಾದ ಪಾಲೇಕಂಡ ನಂಜಪ್ಪ, ಮುಲ್ಲೇರ ಪೊನ್ನಮ್ಮ, ಕಂಬೀರAಡ ಕಸ್ತೂರಿ, ಮೇಕತಂಡ ಕಾವೇರಪ್ಪ, ರಾಷ್ಟಿçÃಯ ಹಿರಿಯ ನಾಗರಿಕರ ಸಹಾಯವಾಣಿಯ ಕ್ಷೇತ್ರಾಧಿಕಾರಿ ಭರತ್ ಮತ್ತು ಸರ್ವ ಸದಸ್ಯರು ಸಭೆಯಲ್ಲಿ ಹಾಜರಿದ್ದರು.