ಕೋವರ್‌ಕೊಲ್ಲಿ ಇಂದ್ರೇಶ್

ಮಡಿಕೇರಿ, ಜೂ. ೧೨: ದೇಶದ ಸರ್ವೋಚ್ಚ ನ್ಯಾಯಾಲಯವು ವೇಶ್ಯೆಯರನ್ನು ಬಂಧಿಸುವAತಿಲ್ಲ ಎಂದು ಆದೇಶಿಸಿದ ಬೆನ್ನಲ್ಲೇ ಲೈಂಗಿಕ ಸೇವೆ ಒದಗಿಸುವ ಹೆಸರಿನಲ್ಲಿ ಆನ್‌ಲೈನ್ ವಂಚನೆ ತಲೆ ಎತ್ತಿದೆ.

ಕಳೆದ ವಾರ ಲೈಂಗಿಕ ಸೇವೆ ಪಡೆಯಲು ಹೋಗಿದ್ದ ಸ್ಥಳೀಯ ಯುವಕನೊಬ್ಬನಿಗೆ ೧೫೦೦ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಮಡಿಕೇರಿ ನಗರದಲ್ಲೇ ನಡೆದಿದೆ. ಖ್ಯಾತ ಜಾಗತಿಕ ಡೇಟಿಂಗ್ ವೆಬ್ ಸೈಟ್ ಆಗಿರುವ ತಿತಿತಿ.ಟoಛಿಚಿಟಿಣo.ಛಿom ಮೂಲಕ ಅಲ್ಲಿ ನೀಡಲಾಗಿದ್ದ ಸಂಖ್ಯೆಗೆ ಕರೆ ಮಾಡಿದ ಯುವಕನ ಮೊಬೈಲ್‌ಗೆ ೮-೧೦ ಸುಂದರ ಯುವತಿಯರ ಫೋಟೋ ಕಳಿಸಿದ್ದಾರೆ. ನಂತರ ಯುವತಿಯನ್ನು ಆಯ್ಕೆ ಮಾಡಲು ಹೇಳುತ್ತಾರೆ. ಸುಂದರ ಯುವತಿಯ ಫೋಟೋ ನೋಡಿ ಮರುಳಾದ ಯುವಕನಿಗೆ ಅಪರಿಚಿತ ವ್ಯಕ್ತಿಯು ಅರ್ಧ ಘಂಟೆ ಸೇವೆಗೆ ಮೊದಲಿಗೆ ಬುಕಿಂಗ್ ಮಾಡಲು ೫೦೦ ರೂಪಾಯಿಗಳನ್ನು xxxxxxx೧೬೯ ನಂಬರಿಗೆ ಗೂಗಲ್ ಪೇ ಮಾಡಲು ತಿಳಿಸಿದ್ದಾನೆ.

ಗೂಗಲ್ ಪೇ ಮಾಡಿದ ನಂತರ ಆತ ಇನ್ನೊಂದು ಸಂಖ್ಯೆಯಿAದ ಮಾತನಾಡಿ ಮೇಡಂ ಮಾತಾಡುತ್ತಾರೆ ಮತ್ತು ನಿಮಗೆ ಸೇವೆ ಕುರಿತು ಮಾತಾಡುತ್ತಾರೆ ಎಂದು ಹೇಳಿದ್ದಾನೆ.

ಅಪರಿಚಿತ ಮಹಿಳೆಯ ಸಂಖ್ಯೆಗೆ ಕರೆ ಮಾಡಿದಾಗ ಬುಕ್ಕಿಂಗ್ ಆಗಿದೆ, ಸೇವೆ ನೀಡಬೇಕಾದರೆ ಮೊದಲು ೧೦೦೦ ರೂಪಾಯಿಗಳನ್ನು xxxxxxx೧೪೬ ನಂಬರಿಗೆ ಗೂಗಲ್ ಪೇ ಮಾಡುವಂತೆ ತಿಳಿಸಿದ್ದಾಳೆ. ಅದರಂತೆ ಯುವಕ ಅದೇ ನಂಬರ್‌ಗೆ ಗೂಗಲ್ ಪೇ ಮಾಡಿದಾಗ ಲೊಕೇಷನ್ ಕಳಿಸಿ ಅಲ್ಲಿಗೆ ಬರಲು ಹೇಳಿದ್ದಾರೆ. ಯುವಕನು ಲೊಕೇಷನ್ ಹುಡುಕಿಕೊಂಡು ಹೋದಾಗ ಅದು ಸ್ಟುವರ್ಟ್ ಹಿಲ್‌ಗೆ ಕರೆದೊಯ್ದಿದ್ದು, ಯುವಕನು ಪುನಃ ಕರೆ ಮಾಡಿದಾಗ ಹುಡುಗಿಯರು ಹಣ ಕೇಳುತ್ತಿದ್ದಾರೆ, ಅವರಿಗೆ ನೀಡಲು ೨೦೦೦ ರೂಪಾಯಿ ಗೂಗಲ್ ಪೇ ಮಾಡಿ ಅಂದಿದ್ದಾಳೆ. ಇದು ಮೋಸ ಎಂದು ಅರಿತ ಯುವಕ ವಾಪಾಸ್ ಬಂದಿದ್ದಾನೆ. ಪುನಃ ಅದೇ ನಂಬರ್‌ಗೆ ಕರೆ ಮಾಡಿದಾಗ ಇಲ್ಲದ ಸಬೂಬು ಹೇಳಿ ಕಾಲ ಕಳೆಯುತ್ತಿದ್ದಾರೆ.

ಕನ್ನಡದಲ್ಲೇ ಮಾತಾಡಿರುವುದರಿಂದ ಇದು ಹೊರ ಜಿಲ್ಲೆಯ ಖದೀಮರ ಗ್ಯಾಂಗ್ ಆಗಿದ್ದು ಇವರ ಬಳಿ ಯುವತಿಯರು ಇರೋದೆ ಇಲ್ಲ. ಆದರೆ ತಮ್ಮ ವಾಟ್ಸ್ ಅಪ್ ನಲ್ಲಿ ಸುಂದರ ಯುವತಿಯ ಫೋಟೋ ಹಾಕಿಕೊಂಡಿರುತ್ತಾರೆ. ಬರೀ ಫೋಟೋ ತೋರಿಸಿ ಕಾಮನೆ ಕೆರಳಿಸಿ ಹಣ ಮಾಡುವಲ್ಲಿ ತೊಡಗಿದ್ದಾರೆ. ಬಹುತೇಕ ಈ ಲೊಕ್ಯಾಂಟೋ ಸೈಟ್ ನಲ್ಲಿ ಮಾತಾಡುವವರೆಲ್ಲ ಹಿಂದಿ ಭಾಷಿಕರಾಗಿದ್ದು ಇವರು ಉತ್ತರ ಭಾರತದ ಊರುಗಳಲ್ಲಿರುತ್ತಾರೆ. ಆದರೆ ಎಲ್ಲಾ ನಗರಗಳಲ್ಲಿಯೂ ಸೇವೆ ಇದೆ ಎಂದು ಹಾಕಿಕೊಂಡಿರುವುದರಿAದ ಬಹಳಷ್ಟು ಜನರು ಮೋಸ ಹೋಗುತ್ತಿದ್ದಾರೆ. ಇವರು ಅರ್ಧ ಘಂಟೆ ಸೇವೆಗೆ ೨ -೩ ಸಾವಿರ ರೂಪಾಯಿ ದರ ಹಾಕಿಕೊಂಡಿದ್ದು ರಾತ್ರಿಗೆ ೫ ರಿಂದ ೧೦ ಸಾವಿರ ದರ ಹಾಕಿಕೊಂಡಿರುತ್ತಾರೆ.

ಕಳೆದುಕೊಳ್ಳುವುದು ಸಣ್ಣ ಮೊತ್ತವಾದ ಕಾರಣ ಮತ್ತು ದೂರು ನೀಡಲು ಗೌರವ ಅಡ್ಡಿ ಆಗುವುದರಿಂದ ಯಾರೂ ಇಂತಹ ಪ್ರಕರಣಗಳಿಗೆ ಪೊಲೀಸ್ ದೂರು ನೀಡಲು ಹೋಗುವುದಿಲ್ಲ. ೫ ದಿನಗಳ ಹಿಂದಷ್ಟೇ ಇದೇ ರೀತಿಯ ಸೇವೆ ಒದಗಿಸುವುದಾಗಿ ವೆಬ್‌ಸೈಟ್ ನಲ್ಲಿ ಜಾಹೀರಾತು ನೀಡಿ ಸೇವೆಯ ಅರ್ಧದಷ್ಟನ್ನು ಮುಂಗಡ ಪಡೆದುಕೊಂಡು ೮೦ ರಿಂದ ೧೦೦ ಜನರ ಬಳಿ ಬರೋಬ್ಬರಿ ೮ ಲಕ್ಷ ರೂಪಾಯಿಗಳನ್ನು ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

ಲೊಕ್ಯಾAಟೋ ವೆಬ್‌ಸೈಟ್‌ನಲ್ಲಿ ಮೊದಲಿನಿಂದಲೂ ಲೈಂಗಿಕ ಸೇವೆಯು ನಡೆಯುತ್ತಿತ್ತು. ಈಗ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ತೀರ್ಪಿನ ಪ್ರಕಾರ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯನ್ನು ಪೊಲೀಸರು ಬಂಧಿಸುವAತಿಲ್ಲ, ಮೊಕದ್ದಮೆ ದಾಖಲು ಮಾಡುವಂತಿಲ್ಲ. ಆದರೆ ಪೋಲೀಸರು ಧಾಳಿ ನಡೆಸಿದಾಗ ಹೋಟೆಲ್, ಲಾಡ್ಜ್ , ಹೋಂ ಸ್ಟೇ ಗಳಲ್ಲಿ ಲೈಂಗಿಕ ಸೇವೆ ಪತ್ತೆ ಆದಲ್ಲಿ ಅದರ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಬಹುದಾಗಿದೆ.

ಸಂವಿಧಾನದ ಪರಿಚ್ಚೇದ ೨೧ ರ ಪ್ರಕಾರ ಮಹಿಳೆಯು ಗೌರವಯುತ ಜೀವನ ನಡೆಸುವ ಹಕ್ಕನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟು ಹೆಣ್ಣು ಮಕ್ಕಳ ಶೋಷಣೆ ತಪ್ಪಿಸಲೆಂದೇ ಹೊಸ ಆದೇಶ ಹೊರಡಿಸಿದೆ. ಆದರೆ ಬ್ಯಾಂಕ್ ಮ್ಯಾನೇಜರ್‌ರಂತೆ ಫೋನ್ ಮಾಡಿ ಎಟಿಎಮ್ ಪಿನ್ ನಂಬರ್ ಪಡೆಯುವ, ಓಎಲ್‌ಎಕ್ಸ್ನಲ್ಲಿ ಆರ್ಮಿ ಅಧಿಕಾರಿಯ ಫೋಟೋ ಹಾಕಿಕೊಂಡು ಕಾರು ಬೈಕುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುವ ನೆಪದಲ್ಲಿ ವಂಚಿಸುವ , ಸ್ನಾಪ್ ಡೀಲ್, ಅಮೆಜಾನ್ ನಲ್ಲಿ ನಿಮಗೆ ಟಿವಿ , ಮೊಬೈಲ್ ಬಹುಮಾನ ಬಂದಿದೆ ಎಂದು ಮನೆ ವಿಳಾಸಕ್ಕೆ ಅರ್ಜಿ ಕಳಿಸಿ ವಂಚಿಸುವ ಖದೀಮರ ಗ್ಯಾಂಗ್ ಇದೀಗ ಸುಂದರ ಹುಡುಗಿಯರ ಫೋಟೋ ತೋರಿಸಿ ವಂಚಿಸಲು ಮುಂದಾಗಿದ್ದು ಯುವಜನಾಂಗ ಇಂತಹ ಖದೀಮರ ಬಲೆಗೆ ಬೀಳದಂತೆ ಜಾಗ್ರತೆ ವಹಿಸಬೇಕಿದೆ.