ಶ್ರೀ ಮಾತೆ ಕಾವೇರಿ ಸನ್ನಿಧಿ ಯಲ್ಲಿ ನಾನು ನೋಡಿದ ಅನುಭವ ವನ್ನು ತಿಳಿಸಲು ವಿಷಾದಿಸುತ್ತೇನೆ. ಕೊಡವರಿಗೆ ಕುಲದೇವತೆಯಾಗಿದ್ದು, ಕೊಡಗಿನ ಎಲ್ಲಾ ಮೂಲ ನಿವಾಸಿ ಗಳಿಗೆ ಶ್ರೀ ಮಾತೆ ಕಾವೇರಿಯು ಕಣ್ಮಣಿಯಾಗಿದ್ದು, ಇಡೀ ಕೊಡಗನ್ನೇ ಮಳೆ, ಬೆಳೆ ಹಾಗೂ ಇತರ ಸಂಪತ್ತಿನ ಧಾರೆಯನ್ನೆರೆದು ಎಲ್ಲರನ್ನೂ ಸುಖ - ಸಂತೋಷದಿAದ ಇರಲು ಕಾಪಾಡುವ ಮಾತೆ. ಮಾನವ ಏನೇ ತಪ್ಪು ಮಾಡಿದರು ಅದಕ್ಕೆ ಅವನು ಪಶ್ಚಾತಾಪಪಟ್ಟು ಕಾವೇರಿಯ ಸನ್ನಿಧಾನದಲ್ಲಿ ಹರಿಯುವ ನೀರಿನಲ್ಲಿ ಮುಳುಗಿ ಮೈ ತೊಳೆದರೆ ಅವನು ಮಾಡಿದ ಪಾಪವು ಪರಿಹಾರ ವಾಗುತ್ತದೆಂಬ ನಂಬಿಕೆ ಈಗಲೂ ಇದೆ. ಹಾಗೆಯೇ ದಂಪತಿಗಳಿಗೆ ಮಕ್ಕಳಾಗದಿದ್ದರೆ ಇಬ್ಬರೂ ತಾಯಿಯಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಮುಂದೆ ಮಕ್ಕಳಾಗಿ ಸುಖ - ಸಂತೋಷದಿAದ ಜೀವಿಸು ತ್ತಾರೆಂಬ ನಂಬಿಕೆ. ಹಾಗೆಯೇ ಅಂಗಹೀನರು ಸಹ ತಾಯಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ತಾಯಿಯು ಫಲವನ್ನು ನೀಡುತ್ತಾಳೆ.
ಪ್ರತಿಯೊಬ್ಬರು ಲಗ್ನವಾದ ಮೇಲೆ ದಂಪತಿಗಳಾಗಿ ಭಾಗ ಮಂಡಲ ಮತ್ತು ತಲಕಾವೇರಿಗೆ ತೆರಳಿ ಕೈಕೈ ಹಿಡಿದು ನೀರಲ್ಲಿ ಮುಳುಗಿ ಸ್ನಾನ ಮಾಡಿ ತಾಯಿಗೆ ನಮಸ್ಕರಿಸಿ ಅಡ್ಡ ಬಿದ್ದು ಬೇಡಿ ಪೂಜೆ ಪುನಸ್ಕಾರವನ್ನು ಮಾಡಿ ತಾಯಿಯ ಆಶೀರ್ವಾದ ದೊಂದಿಗೆ ಮರಳುವುದು ವಾಡಿಕೆ. ಸತ್ತವರಿಗೆ ಸಂಬAಧಿಕರು ೪೦ ದಿವಸಗಳ ಕಾಲ ವ್ರತವನ್ನು ಆಚರಿಸಿ ಸತ್ತವರ ಆತ್ಮಕ್ಕೆ ಶಾಂತಿ ಕೋರಲು ಭಕ್ತಿಯಿಂದ ತಾಯಿಯ ಸನ್ನಿಧಿಗೆ ಹೋಗಿ ಮುಡಿಯನ್ನು ತೆಗೆದು ನೀರಿನಲ್ಲಿ ಮಿಂದು ಸತ್ತವರ ಹೆಸರಿ ನಲ್ಲಿ ಪಿಂಡ ಪ್ರದಾನ ಮಾಡಿದರೆ ಸತ್ತವರ ಆತ್ಮಕ್ಕೆ ಚಿರಶಾಂತಿ ಸಿಗುವುದೆಂಬ ನಂಬಿಕೆ ಈಗಲೂ ಇದೆ. ಇದನ್ನು ಈಗಲೂ ಪ್ರತಿ ಯೊಬ್ಬರು ಪಾಲಿಸಿಕೊಂಡು ಬರುತ್ತಾರೆ.
ಪ್ರತೀವರ್ಷ ತುಲಾ ಸಂಕ್ರಮಣದ ಪುಣ್ಯ ದಿನದಂದು ತೀರ್ಥರೂಪಿಣಿಯಾಗಿ ಕಾಣಿಸಿ ಕೊಳ್ಳುವ ಕಾವೇರಿ ಮಾತೆಯನ್ನು ದರ್ಶನ ಮಾಡಲು ಕೊಡಗಿನ ಎಲ್ಲಾ ಮೂಲೆಗಳಿಂದ ಜಾತಿ ಭೇದವಿಲ್ಲದೆ ರಾತ್ರಿ ಹಗಲೆನ್ನದೆ ಸನ್ನಿಧಿಯಲ್ಲಿ ಭಕ್ತಿಯಿಂದ ಕಾದು ತಾಯಿಯ ದರ್ಶನ ಪಡೆಯುತ್ತಾರೆ. ಅದೇ ರೀತಿ ತಾಯಿಯು ತನ್ನ ಸರ್ವ ಭಕ್ತರನ್ನು ಹರಸುತ್ತಾಳೆಯೆಂಬ ನಂಬಿಕೆಯಿದೆ. ಇಡೀ ದೇಶವೇ ಶ್ರೀ ಕಾವೇರಿ ಮಾತೆಯ ಕೊಡುಗೆಯನ್ನು ಇಂದೂ ಸ್ಮರಿಸುತ್ತಾರೆ. ಕೋಟಿ ಕೋಟಿ ಜನರಿಗೆ ನೀರುಣಿಸುವ ಮತ್ತು ಬೆಳೆಯುವ ಆಹಾರ ಪದಾರ್ಥಗಳಿಗೆ ನೀರನ್ನು ಹರಿಸಿ ಹಚ್ಚಹಸಿರಾಗಿ ಬೆಳೆಗಳನ್ನು ತುಂಬಿಕೊಡುವುದಲ್ಲದೆ ಕರ್ನಾಟಕದ ಉಸಿರಾಗಿ ಹರಿಯುತ್ತಾಳೆ. ಒಂದುವೇಳೆ ಕಾವೇರಿ ಹರಿಯದಿದ್ದರೆ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ನಿವಾಸಿಗಳು ನೀರಿಗೆ ಆಕಾಶಕ್ಕೆ ಮುಖ ಮಾಡಬೇಕಾಗಿತ್ತು. ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಹರಿದು ರೈತರ ಪಾಲಿಗೆ ಅಮೃತ ವರ್ಷಿಣಿಯಾಗಿ ಕಾಣಿಸಿಕೊಂಡಿದ್ದಾಳೆ.
ಆದರೆ ಇಂದು ಕಾವೇರಿ ಮಾತೆಯ ಸನ್ನಿಧಾನವಾದ ಭಾಗಮಂಡಲ ಮತ್ತು ತಲಕಾವೇರಿ ಯನ್ನು ನೋಡಿದಾಗ ಇದು ಪವಿತ್ರ ಪುಣ್ಯ ಕ್ಷೇತ್ರವಾ ಅಥವಾ ಜಾತ್ರೆ ಮೇಳವಾ ಎನ್ನುವ ಭಾವನೆ ಮೂಡುತ್ತದೆ. ತಿಂಗಳ ಹುಣ್ಣಿಮೆ, ಅಮಾವಾಸ್ಯೆ ಇತರ ಶುಭ ದಿನಗಳಲ್ಲಿ ತಾಯಿಯ ದರ್ಶನಕ್ಕೆ ಹೋಗುವ ಭಕ್ತಾದಿಗಳು ಕಡಿಮೆಯಾಗಿ ವಾರದ ಕೊನೆಯ ದಿವಸಗಳಲ್ಲಿ ಜನರು ತಮ್ಮ ಮೋಜು ಮಸ್ತಿಗಾಗಿ ಕಾಲ ಕಳೆಯಲು ಬರುವುದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ತಮಗೆ ಇಷ್ಟಬಂದ ಉಡುಪುಗಳಲ್ಲಿ ಬಂದು ದೇವಿಯ ಆವರಣದಲ್ಲಿ ತಮಗೆ ಇಷ್ಟಬಂದ ಜಾಗದಲ್ಲಿ ಕುಳಿತು, ನಿಂತು, ತಬ್ಬಿಕೊಂಡು ತಮ್ಮ ಮೊಬೈಲ್‌ನಲ್ಲಿ ಭಾವಚಿತ್ರವನ್ನು ಸೆರೆಹಿಡಿಯುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಚಲನಚಿತ್ರ ತಂಡದವರು ಚಿತ್ರೀಕರಣ ನಡೆಸುವಂತೆ ಮೈಮರೆತು ಕುಣಿಯುತ್ತಾರೆ. ತಲಕಾವೇರಿ ಯಲ್ಲಿಯೂ ವಾಹನಗಳಿಂದ ಇಳಿದ ಕೂಡಲೇ ಒಬ್ಬರನೊಬ್ಬರು ಹೆಗಲಿನ ಮೇಲೆ ಕೈ ಹಾಕಿಕೊಂಡು ಮದ್ಯ ಸೇವನೆ ಮಾಡಿದವರ ಹಾಗೆ ತೂರಾಡಿಕೊಂಡು ನಡೆಯುವುದನ್ನು ನೋಡಿದಾಗ ಮದುವೆಯ ಸಂಭ್ರಮದ ಹಾಗೆ ಭಾಸವಾಯಿತು. ತಾಯಿಗೆ ಕೈಮುಗಿಯುವ ಬದಲು ಆ ಬೆಟ್ಟ ಈ ಬೆಟ್ಟ, ಆ ಗದ್ದೆ, ಈ ತೋಟವೆಂದು ತನ್ನ ಕೈಯಲ್ಲಿರುವ ಮೊಬೈಲಿನಲ್ಲಿ ಕ್ಲಿಕ್ಕಿಸಿಕೊಂಡು ಅದನ್ನು ನೋಡುತ್ತ ಮೈಮರೆಯುತ್ತಾರೆ. ಪೂಜೆಯ ಸಮಯದಲ್ಲಿಯೂ ಸಹ ದೇವಿಯ ಧ್ಯಾನವನ್ನು ಬಿಟ್ಟು ದೇವಿಯ ರೂಪವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ ತಾಯಿಯು ಒಂದು ದಿವಸ, ೨ ವರ್ಷದ ಹಿಂದೆ ಆದ ಪ್ರಕೃತಿ ವಿಕೋಪವನ್ನು ಮತ್ತೆ ಮರುಕಳಿ ಸುವಂತೆ ಮಾಡುವುದು ಖಂಡಿತ.
ನಿರ್ಬAಧಿಸಬೇಕಾದವುಗಳು: ನನ್ನ ಅನುಭವವನ್ನು ತಿಳಿಸುವುದೇನೆಂದರೆ ಮೊದಲಾಗಿ ಭಾಗಮಂಡಲ ಮತ್ತು ತಲಕಾವೇರಿಗೆ ಆಗಮಿಸುವ ಭಕ್ತರು ಅಥವಾ ಪ್ರವಾಸಿಗರಿಗೆ ಅಲ್ಲಿಯ ಸ್ಥಳೀಯರು ಮೋಜು ಮಸ್ತಿಗೆ ಅವಕಾಶ ಕೊಡಬಾರದು. ಮಾಂಸ ಮತ್ತು ಮದ್ಯವನ್ನು ಆದಷ್ಟು ದೂರದಲ್ಲಿಡಲು ಪ್ರಯತ್ನಿಸಬೇಕು. ಸನ್ನಿಧಿಗೆ ಹೋಗುವಾಗ ಧಾರ್ಮಿಕ ಉಡುಪನ್ನು ಧರಿಸಿ ಬರುವಂತೆ ನಿಯಮವನ್ನು ಜಾರಿಗೆ ತರಲು ಪ್ರಯತ್ನಿಸಬೇಕು.
ದೇವಸ್ಥಾನದ ಆಡಳಿತವನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಿ ಕೊಡವರು ಮತ್ತು ಸ್ಥಳೀಯರು ಆಡಳಿತ ನಡೆಸಲು ಆದ್ಯತೆ ನೀಡಬೇಕು. ಹಿಂದಿನ ಕಾಲದಲ್ಲಿ ಹಿರಿಯರು ಮಾಡಿದ ಕಟ್ಟುಪಾಡುಗಳನ್ನು ತಪ್ಪದೆ ಪಾಲಿಸುವಂತೆ ಕ್ರಮಕ್ಕೆ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಈ ಎರಡು ಕ್ಷೇತ್ರವು ಪ್ರವಾಸಿಗರ ತಾಣವಾಗಬಾರದು. ನೈಜ ಭಕ್ತರಿಗೆ ಮೊದಲು ಪೂಜೆ ಪುನಸ್ಕಾರ ಮಾಡಲು ಆದ್ಯತೆ ನೀಡುವಂತಾಗ ಬೇಕು. ಅವಶ್ಯವಿಲ್ಲದ ಕಟ್ಟಡ, ವಿಶ್ರಾಂತಿ ಗೃಹಗಳನ್ನು ತೆರವುಗೊಳಿಸುವುದು. ಯಾವಾಗಲೂ ಪ್ರಶಾಂತ ತಾಣವಾಗಿ ಮಾಡಲು ಯೋಜನೆಗಳನ್ನು ತಯಾರಿಸಿ ಕಾಮಗಾರಿಗಳನ್ನು ಜಾಗ್ರತೆಯಿಂದ ಮಾಡುವುದು. ಅನೈತಿಕ ಚಟುವಟಿಕೆ ಮತ್ತು ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲು ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವುದು. ಎಲ್ಲಾ ಪೂಜೆ ಪುನಸ್ಕಾರಗಳನ್ನು ತಾಯಿಗೆ ಸಮರ್ಪಕವಾಗಿ ಅರ್ಚಕರು ಶ್ರದ್ಧಾಭಕ್ತಿಯಿಂದ ಮಾಡುವಂತಾಗ ಬೇಕು. ತಲಕಾವೇರಿಗೆ ಮಧ್ಯಾಹ್ನದ ಮೇಲೆ ದರ್ಶನಕ್ಕೆ ಅವಕಾಶ ಕೊಡದಂತೆ ನಿಯಮವನ್ನು ರೂಪಿಸುವುದು, ದಾರಿಯುದ್ದಕ್ಕೂ ಅಲ್ಲಲ್ಲಿ ಸೂಚನಾ ಫಲಕವನ್ನು ಅಳವಡಿಸಿ ತಾಯಿಯ ಕಟ್ಟುಪಾಡು ಗಳನ್ನು ಕನ್ನಡ, ಇಂಗ್ಲಿಷ್, ಹಿಂದಿ, ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಮೂದಿಸಿ ಸರಿಯಾದ ಸ್ಥಳದಲ್ಲಿ ಇಡುವುದು, ರಾಜಕೀಯ ಮತ್ತು ವರ್ಣಭೇದ ಇಲ್ಲದಂತೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಬೇಕು. ಸರಿಯಾದ ಸಂಸ್ಕೃತಿಯ ಮತ್ತು ಆಚಾರ ವಿಚಾರದ ಬಗ್ಗೆ ಅರಿವು ಇರುವವರಿಗೆ ಆಡಳಿತದ ಸಮಿತಿಯಲ್ಲಿ ಅವಕಾಶ ಕಲ್ಪಿಸುವುದು.
ಕೊನೆಯದಾಗಿ ಬರೆಯಲು ಇಚ್ಚಿಸುವುದೇನೆಂದರೆ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಕಾವೇರಿ ಮಹಿಮೆಯ ಬಗ್ಗೆ ಹಲವಾರು ತಿಂಗಳ ವಾರದ ಭಾನುವಾರ ದಿವಸ ತಮ್ಮ ಪತ್ರಿಕೆಯಲ್ಲಿ ಲೇಖನವನ್ನು ಪ್ರಕಟಿಸಿ ಕೊಡಗಿನ ಸರ್ವ ಜನಾಂಗದವರಿಗೆ ಮನಮುಟ್ಟುವಂತೆ ಬಹಳ ವಿಸ್ತಾರವಾಗಿ ಪ್ರಕಟಿಸಿದ್ದಕ್ಕೆ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆ ಹಾಗೂ ಧನ್ಯವಾದಗಳು. ಕೊಡಗಿನ ಎಲ್ಲರೂ ಒಂದಾಗಿ ಶ್ರೀ ಕಾವೇರಿ ಮಾತೆಯ ಪಾವಿತ್ರö್ಯತೆ ಯನ್ನು ಕಾಪಾಡಲು ಭೇದ ಭಾವವಿಲ್ಲದೆ ನೈಜ ಭಕ್ತಿಯಿಂದ ಶ್ರಮಿಸೋಣ. ಶ್ರೀ ಮಾತೆಯ ಆಶೀರ್ವಾದ ಎಲ್ಲರಿಗೂ ಸಿಗಲಿ.
- ಪಾಡೆಯಂಡ ಜಿ. ಮುತ್ತಪ್ಪ, ನಿವೃತ್ತ ವಲಯ ಅರಣ್ಯಾಧಿಕಾರಿ, ಮೂರ್ನಾಡು.
ಮೊ. ೯೪೪೯೦೭೭೪೯೧