ದೇಶದಲ್ಲೇ ತಯಾರಾಗಲಿದೆ ೯೬ ಜೆಟ್ ವಿಮಾನಗಳು

ನವದೆಹಲಿ, ಜೂ. ೧೨: ಆತ್ಮನಿರ್ಭರ ಭಾರತಕ್ಕೆ ವಾಯುಸೇನೆ ಒತ್ತು ನೀಡುವ ನಿಟ್ಟಿನಲ್ಲಿ ವಾಯುಸೇನೆ ಸ್ವೀಕರಿಸಲಿರುವ ಯುದ್ಧ ವಿಮಾನಗಳ ಪೈಕಿ ಶೇ. ೯೦ರಷ್ಟು ಅಂದರೆ ೯೬ ಜೆಟ್ ಯುದ್ಧ ವಿಮಾನಗಳನ್ನು ದೇಶದಲ್ಲಿಯೇ ತಯಾರಾಗಲಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಗೆ ದೊಡ್ಡ ಉತ್ತೇಜನದ ನಡುವೆಯೇ, ಭಾರತೀಯ ವಾಯುಪಡೆಯು ೧೧೪ ಯುದ್ಧ ವಿಮಾನಗಳನ್ನು ಸೇನೆಗೆ ಸ್ವಾಧೀನಪಡಿಸಿಕೊಳ್ಳಲು ಯೋಜಿಸುತ್ತಿದ್ದು, ಈ ಪೈಕಿ ೯೬ ಜೆಟ್ ಯುದ್ಧ ವಿಮಾನಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಉಳಿದ ೧೮ ಯುದ್ಧ ವಿಮಾನಗಳನ್ನು ವಿದೇಶಿ ಮಾರಾಟಗಾರರಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ವಾಯುಸೇನೆ ಮೂಲಗಳು ತಿಳಿಸಿವೆ. ಭಾರತೀಯ ವಾಯುಪಡೆಯು ಬೈ ಗ್ಲೋಬಲ್ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ೧೧೪ ಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ಟ್ಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಹೊಂದಿದೆ, ಅದರ ಅಡಿಯಲ್ಲಿ ಭಾರತೀಯ ಕಂಪೆನಿಗಳು ವಿದೇಶಿ ಮಾರಾಟಗಾರರೊಂದಿಗೆ ಪಾಲುದಾರರಾಗಲು ಅವಕಾಶ ನೀಡುತ್ತವೆ. ಇತ್ತೀಚೆಗೆ, ಭಾರತೀಯ ವಾಯುಪಡೆಯು ವಿದೇಶಿ ಮಾರಾಟಗಾರರೊಂದಿಗೆ ಸಭೆಗಳನ್ನು ನಡೆಸಿದ್ದು, ಅವರು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಯುದ್ದ ವಿಮಾನಗಳನ್ನು ತಯಾರಿಸುವ ಪ್ರಸ್ತಾಪವಿದೆ ಎನ್ನಲಾಗಿದೆ. ಈ ಬಹು ಉದ್ದೇಶಿತ ಯೋಜನೆಯ ಪ್ರಕಾರ, ಆರಂಭಿಕ ೧೮ ವಿಮಾನಗಳನ್ನು ಆಮದು ಮಾಡಿಕೊಂಡ ನಂತರ, ಮುಂದಿನ ೩೬ ವಿಮಾನಗಳನ್ನು ದೇಶದೊಳಗೆ ತಯಾರಿಸಲಾಗುವುದು ಮತ್ತು ಪಾವತಿಗಳನ್ನು ಭಾಗಶಃ ವಿದೇಶಿ ಕರೆನ್ಸಿ ಮತ್ತು ಭಾರತೀಯ ಕರೆನ್ಸಿಯಲ್ಲಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಯೋಗಿ ಆದಿತ್ಯನಾಥ್ ಭದ್ರತೆಯಲ್ಲಿ ಲೋಪ: ೮ ಪೊಲೀಸರ ಅಮಾನತು

ಲಖನೌ, ಜೂ. ೧೨: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತೆಯಲ್ಲಿ ಲೋಪದ ನಂತರ ಓರ್ವ ಇನ್ಸ್ ಪೆಕ್ಟರ್ ಹಾಗೂ ಸಬ್‌ಇನ್ಸ್ಪೆಕ್ಟರ್ ಸೇರಿದಂತೆ ೮ ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸ್ವಾಗತಿಸಲು ಗೋರಕ್‌ಪುರ ವಿಮಾನ ನಿಲ್ದಾಣಕ್ಕೆ ಯೋಗಿ ಆದಿತ್ಯನಾಥ್ ಶುಕ್ರವಾರ ತೆರಳುತ್ತಿರುವಾಗ ಭದ್ರತೆಯಲ್ಲಿ ಲೋಪ ಉಂಟಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಶನಿವಾರ ಎಂಟು ಪೊಲೀಸರನ್ನು ಗೋರಕ್‌ಪುರ ಎಸ್‌ಎಸ್‌ಪಿ ವಿಪಿನ್ ತಾಡಾ ಅಮಾನತು ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ ೧೧.೨೮ರ ಸುಮಾರಿನಲ್ಲಿ ಜೆ.ಪಿ. ನಡ್ಡಾ ಅವರನ್ನು ಬರಮಾಡಿಕೊಳ್ಳಲು ಸಿಎಂ ಗೋರಕ್‌ಪುರ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕುಶ್ಮಾಹಿ ರಸ್ತೆಯಿಂದ ಅನೇಕ ವಾಹನಗಳು ಸಿಎಂ ಎದುರಿಗೆ ಬಂದಿದ್ದವು. ಈ ಘಟನೆ ಸಂಬAಧ ತನಿಖೆಗೆ ಆದೇಶಿಸಿದ್ದ ತಾಡಾ, ಲೋಪ ಕಂಡುಬAದ ಹಿನ್ನೆಲೆಯಲ್ಲಿ ೮ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ, ಜೂ. ೧೨: ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಭಾನುವಾರ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ಸೋನಿಯಾ ಗಾಂಧಿ ಅವರು ಕೋವಿಡ್ ಸಂಬAಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಭಯಪಡುವ ಅಗತ್ಯವಿಲ್ಲ.. ಅವರ ಆರೋಗ್ಯ ಸ್ಥಿರವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಆಸ್ಪತ್ರೆಯಲ್ಲಿ ವೀಕ್ಷಣೆಯಲ್ಲಿಡಲಾಗಿದೆ ಎಂದು ಹೇಳಿದರು.