ಕಾವೇರಿ ನದಿ ನೀರಿನ ಹಂಚಿಕೆಯು ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಗಂಭೀರ ಸಂಘರ್ಷದ ಮೂಲವಾಗಿದೆ. ಈ ಸಂಘರ್ಷದ ಮೂಲ ೧೮೯೨ ಮತ್ತು ೧೯೨೪ ರಲ್ಲಿ ವiದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಾಮ್ರಾಜ್ಯದ ನಡುವಿನ ಎರಡು ಒಪ್ಪಂದಗಳಲ್ಲಿ ನಿಂತಿದೆ. ಸರಿ ಸುಮಾರು ೫೦೦ ಮೈಲಿಗಳ ಉದ್ದ ಹರಿಯುವ ಕಾವೇರಿ ನದಿಯು, ತಮಿಳುನಾಡಿನಲ್ಲಿ ೪೪,೦೦೦ ಕಿ.ಮೀ., ಕರ್ನಾಟಕದಲ್ಲಿ ೩೨೦೦೦ ಕಿ.ಮೀ. ಜಲಾನಯನ ಪ್ರದೇಶವನ್ನು ಹೊಂದಿದೆ. ಕರ್ನಾಟಕದಿಂದ ೪೨೫ ಟಿ.ಎಂ.ಸಿ. ಅಡಿ ಒಳಹರಿವು ಇದ್ದರೆ, ತಮಿಳುನಾಡಿನಿಂದ ೨೫೨ ಟಿ.ಎಂ.ಸಿ. ಒಳ ಹರಿವು ಇದೆ. ಈ ಒಂದು ಒಳ ಹರಿವಿನ ಆಧಾರದ ಮೇಲೆ ಕರ್ನಾಟಕವು ತನ್ನ ನದಿ ನೀರಿನ ಪಾಲನ್ನು ಕೇಳುತ್ತಿದೆ. ಸ್ವಾತಂತ್ರ ಪೂರ್ವದ ಒಪ್ಪಂದಗಳು ಅಮಾನ್ಯವಾಗಿದೆ, ಇವೆಲ್ಲದರ ನಡುವೆ ತಮಿಳುನಾಡು ಈಗಾಗಲೇ ಸುಮಾರು ೩೦೦೦೦೦೦, ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿದೆ. ಇದರ ಪರಿಣಾಮವಾಗಿ ತಮಿಳುನಾಡು ಕಾವೇರಿ ನದಿ ನೀರನ್ನು ಬಹಳ ಅವಲಂಭಿತವಾಗಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆಗಳಾದಲ್ಲಿ ಲಕ್ಷಗಟ್ಟಲೆ ರೈತರ ಬಾಳು ನಾಶವಾಗುತ್ತದೆ ಎಂಬ ವಾದ ತಮಿಳುನಾಡಿನದು. ಸ್ವಾತಂತ್ರö್ಯ ಬಂದ ನಂತರ ಮೈಸೂರು ಸಾಮ್ರಾಜ್ಯ ಹಾಗೂ ವiದ್ರಾಸ್ ಪ್ರೆಸಿಡೆನ್ಸಿಗಳ ನಡುವೆ ನಡೆದ ಒಪ್ಪಂದದಲ್ಲಿ ದಕ್ಷಿಣ ಕನ್ನಡದ ಕೇಲವು ಭಾಗಗಳನ್ನು ಸೇರಿಸಲಾಯಿತು. ವಿಪರ್ಯಾಸವೆಂದರೆ ಕೊಡಗು ರಾಜ್ಯ ಕರ್ನಾಟಕದೊಂದಿಗೆ ವಿಲೀನಗೊಂಡಿದ್ದರೂ “ಕೊಡಗಿನ” ಹೆಸರು ಎಲ್ಲೂ ಕೂಡ ಉಲ್ಲೇಖವಾಗಿಲ್ಲದಿರುವುದು! ಕಾವೇರಿ ನದಿ ನಮ್ಮಲ್ಲೇ ಹುಟ್ಟಿ ಹರಿಯುತ್ತಿದ್ದರೂ ನಮ್ಮನ್ನು ಕಡೆಗಣಿಸಿ ಒಪ್ಪಂದಗಳು ನಡೆದವು. ನಾವು ಕೇವಲ ಆಟಕ್ಕುಂಟು- ಲೆಕ್ಕಕ್ಕಿಲ್ಲದ ಕುಕ್ಕೇದಾಸರಂತಾದೆವು! ಅಂದಿನ ಯಾವ ನಾಯಕರು ಕೂಡ ಇದನ್ನು ಪ್ರಶ್ನೆ ಮಾಡಲೇ ಇಲ್ಲ! ಆದರೆ ೯೦ರ ದಶಕದಲ್ಲಿ ಪ್ರತ್ಯೇಕ ಕೊಡಗು ರಾಜ್ಯದ ಕಾವು ಹೆಚ್ಚಾದಂತೆಲ್ಲ ಕರ್ನಾಟಕದ ವಿಧಾನ ಸೌಧದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದವು. ಕೆಲವು ರಾಜಕೀಯ ಮುಖಂಡರು ಇದೇ ಬಿಸಿಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಕೆಲವು ಪ್ರಸಿದ್ಧ ಸಾಹಿತಿಗಳು ಇದರ ವಿರುದ್ಧ ಎದ್ದು ನಿಂತರು. ಕೊಡಗು ಕರ್ನಾಟಕದ ಮುಕುಟ ಮಣಿ ಎಂದರು. ಯಾವಾಗ ಪ್ರತ್ಯೇಕ ಕೊಡಗು ರಾಜ್ಯದ ಹೋರಾಟದ ದಾರಿ ತಪ್ಪಿತೋ, ಕರ್ನಾಟಕ ರಾಜ್ಯದ ಮಂತ್ರಿ ಮಂಡಲದವರು ಕೂಡ ಕೊಡಗಿನ ದಾರಿ ಮರೆತರು! ಇನ್ನು ಕೆಲವರು ದಾರಿ ಕಳೆದುಕೊಂಡರು! ಇಂದಿಗೂ (ಕೊಡಗು) ಕರ್ನಾಟಕ ರಾಜ್ಯದ ನಿರ್ಲಜ್ಜೆತನ ನೀತಿ ನಿಯಮಗಳಿಗೆ ಬಲಿಯಾಗುತ್ತಿದೆ- ಅವಿಭಾಜ್ಯ ಅಂಗ - ಅಂಗವಿಕಲವಾಗುತ್ತಿದೆ.
ಸ್ವಾತಂತ್ರö್ಯದ ನಂತರ ೨೦ನೇ ಶತಮಾನದಲ್ಲಿ ತಮಿಳುನಾಡು ಸರ್ಕಾರದ ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟಿನ ನಿರ್ಮಾಣಗಳನ್ನು ವಿರೋಧಿಸುತ್ತಲೇ ಬಂತು. ೧೯೭೪ ರಲ್ಲಿ ಹಿಂದಿನ ೫೦ ವರ್ಷಗಳ ಅವಧಿಯ ಒಪ್ಪಂದ ಮುಗಿದಿದೆ ಮತ್ತು ಕಾವೇರಿ ನದಿಯು ಕರ್ನಾಟಕದಲ್ಲಿ ಹುಟ್ಟುವುದರಿಂದ ಅದನ್ನು ಪರಿಗಣಿಸಿ ನಮಗೆ ನದಿಯ ಮೇಲೆ ಹೆಚ್ಚಿನ ಹಕ್ಕು ಬೇಕು ಎಂದು ಕರ್ನಾಟಕ ಸರ್ಕಾರವು ವಾದ ಮಂಡನೆ ಮಾಡಿತು. (ಇಲ್ಲೂ ಕೂಡ ಕೊಡಗಿನ ಹೆಸರು ಪ್ರಸ್ತಾಪವಾಗಲಿಲ್ಲ) ಇದೇ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಸಂಬAಧಿಸಿದAತೆ ಕಾವೇರಿ ನದಿ ನೀರಿನ ಮೇಲೆ ತಮಿಳುನಾಡಿಗೆ ಪರಂಪರಾನುಗತ ಹಕ್ಕು ಇರಲಿಲ್ಲ. ಪರಂಪರಾನುಗತ ಹಕ್ಕು ಇಲ್ಲದಿರುವ ಕಾರಣ ತಮಿಳುನಾಡು ಕೃಷಿ ಜಮೀನು ವಿಸ್ತರಿಸಬಾರದು ಎಂದು ಕಾವೇರಿ ನ್ಯಾಯಮಂಡಳಿ ತಿಳಿಸಿತು. ೧೯೭೬ ರಲ್ಲಿ ಪ್ರತಿಯೊಂದು ರಾಜ್ಯವು ತಮ್ಮ ಹಿಂದಿನ ಬಳಕೆಯ ಪ್ರಕಾರ ನೀರನ್ನು ಬಳಸಿಕೊಂಡು ಮುಂದುವರಿಯತಕ್ಕದ್ದು ಎಂಬ ತೀರ್ಮಾನಕ್ಕೆ ಸತ್ಯ ಶೋಧನÀ ಸಮಿತಿ ಬಂದು, ಉಳಿದ ೧೨೫ ಟಿ.ಎಂ.ಸಿ ನೀರನ್ನು ಮತ್ತೆ ಮರು ಹಂಚಿಕೆ ಮಾಡಬೇಕೆಂದು ತೀರ್ಮಾನಿಸಲಾಯಿತು. ಇದರಲ್ಲಿ ಶೇ. ೬ ರಷ್ಟು ನೀರನ್ನು ಕೇರಳಕ್ಕೆ ಹಾಗೂ ಪುದುಚೇರಿಗೆ ಹಂಚಿದರು. (ಕೊಡಗನ್ನು ಹಾಗೇಯೇ ಬಿಟ್ಟರು) ೧೯೮೬ ರಲ್ಲಿ ತಮಿಳುನಾಡು, ತಂಜಾವೂರು ರೈತರ ಸಂಘ ಸುಪ್ರಿಂಕೋರ್ಟ್ಗೆ ತೆರೆಳಿತು. ಕಾವೇರಿ ನೀರು ವಿವಾದಕ್ಕೆ ಒಂದು ಪ್ರತ್ಯೇಕ ನ್ಯಾಯ ಮಂಡಳಿ ನೇಮಿಸಬೇಕು ಹಾಗೂ ಕಾವೇರಿ ನದಿ ನೀರಿನ ಬಳಕೆಯಲ್ಲಿ ಯಥಾಸ್ಥಿತಿ ಕಾಯಬೇಕು ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ವಕ್ರದೃಷ್ಟಿ ಬಿದ್ದದ್ದು ‘ಬರಪೊಳೆ ಅಣೆಕಟ್ಟು ಯೋಜನೆ’ ಮೇಲೆ ಕೊಡಗು ಮುಳುಗಿದರೂ ಪರವಾಗಿಲ್ಲ ನಾವು ಬದುಕಬೇಕು ಎಂಬ ಧ್ಯೇಯವಾಕ್ಯದೊಂದಿಗೆ ಒಂದು ನೀಲಿ ನಕ್ಷೆ ತಯಾರಾಯಿತು. ಅಂದು ಕೂಡ ನಮ್ಮ ಕೆಲವು ಕುರ್ಚಿ ನಾಯಕರು ಇದನ್ನು ಬೆಂಬಲಿಸಿದರು! ಆದರೆ ಅಂದಿನ ನಮ್ಮ ಹಿರಿಯರ ಹೋರಾಟದ ಕಿಚ್ಚಿಗೆ ಹೆದರಿದ ಸರ್ಕಾರ “ನಾವು ಕೇವಲ ಸರ್ವೆ ಕಾರ್ಯ ಮಾಡುತ್ತೇವೆ, ಅಣೆಕಟ್ಟು ಕಟ್ಟುವುದಿಲ್ಲ” ಎಂದು ಸುಳ್ಳು ಹೇಳಿ ಜಾರಿಕೊಂಡಿತು. ಇಂದಿಗೂ ಈ ಪ್ರಸ್ತಾವನೆ ಸರ್ಕಾರದ ಕಡತದಲ್ಲಿ ಹಾಗೆಯೇ ಉಳಿದಿದೆ! ೧೯೯೧ ರಲ್ಲಿ ಕಾವೇರಿ ನ್ಯಾಯ ಮಂಡಳಿ ಅಂತಿಮ ಅನುದಾನದಲ್ಲಿ ತಮಿಳುನಾಡಿನ ೨೮ ಲಕ್ಷ ಎಕರೆಯಿಂದ ೨೪ ಲಕ್ಷ ಎಕರೆಗೆ ತಗ್ಗಿಸಲಾಯಿತು. ಕರ್ನಾಟಕಕ್ಕೆ ೧೧ ಲಕ್ಷ ಎಕರೆವರೆಗೆ ಹೆಚ್ಚುವರಿ ನೀರು ಲಭ್ಯವಾಯಿತು. ಇದನ್ನು ಕಬ್ಬಿನ ಪ್ರದೇಶಕ್ಕೆಂದು ಮೀಸಲಿಟ್ಟರು ವಿನಃ ಕೊಡಗಿಗೆ ಏನೂ ಇಲ್ಲ! ೧೯೯೮ ರಲ್ಲಿ ಪ್ರಧಾನಿ ಅಧ್ಯಕ್ಷರಾಗಿ ಹಾಗೂ ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳ ಸದಸ್ಯರನ್ನೊಳಗೊಂಡ ಕಾವೇರಿ ನದಿ ಪ್ರಾಧಿಕಾರವನ್ನೂ (ಅಚಿuveಡಿಥಿ ಡಿiveಡಿ ಚಿuಣhoಡಿiಣಥಿ ಅಖಂ) ರಚಿಸಲಾಯಿತು. ಅದಾದ ೧೬ ವರ್ಷಗಳ ನಂತರ ಅಂದರೆ ೨೦೦೭ ರಲ್ಲಿ ಕಾವೇರಿ ನ್ಯಾಯಾಧೀಕರಣ (ಅಚಿuveಡಿಥಿ ತಿಚಿಣeಡಿ ಜisಠಿuಣes ಣಡಿibuಟಿಚಿಟ ಅWಆಖಿ) ತಮ್ಮ ಅಂತಿಮ ತೀರ್ಪು ನೀಡಿತು. ಇದರಂತೆ ತಮಿಳುನಾಡಿಗೆ ೪೧೯ ಟಿ.ಎಂ.ಸಿ, ಕರ್ನಾಟಕಕ್ಕೆ ೨೭೦ ಟಿ.ಎಂ.ಸಿ, ಕೇರಳಕ್ಕೆ ೩೦ ಟಿ.ಎಂ.ಸಿ, ಪುದುಚೇರಿಗೆ ೭ ಟಿ.ಎಂ.ಸಿ. ಕರ್ನಾಟಕದ ೨೭೦ ಟಿ.ಎಂ.ಸಿ. ನೀರಿನಲ್ಲಿ ನಮ್ಮ ಪಾಲು ಶೂನ್ಯದಲ್ಲಿ ಶೂನ್ಯ! ೨೦೧೩ ರಲ್ಲಿ ಕೇಂದ್ರ ನ್ಯಾಯ ಮಂಡಳಿಯು ಇದನ್ನು ಗೆಜೆಟ್ ಪ್ರಕಟಣೆಯಲ್ಲಿ ಹಾಕಿತು. ಕಾವೇರಿ ಹುಟ್ಟುವ ನಾಡಿನಲ್ಲಿ ಇಂದಿಗೂ ಶೇ. ೮೦ ರಷ್ಟು ಜನರು ಕಾವೇರಿ ನೀರು ಎಂದರೆ ವರ್ಷಕ್ಕೊಮ್ಮೆ ‘ಕಾವೇರಿ ಚಂಗ್ರಾAದಿ’ಯAದು ತಲಕಾವೇರಿಯಲ್ಲಿ ಮುಳುಗಿ ಏಳುವುದು ಎಂದು ಮಾತ್ರ ತಿಳಿದು ಕೊಂಡAತಿದೆ. ಮಡಿಕೇರಿ ನಗರದಲ್ಲಿ ಬೇಸಿಗೆ ಬಂತೆAದರೆ ಕುಡಿಯುವ ನೀರಿನ ಹಾಹಾಕಾರ. ರೂ. ೨೩೦ ಕೋಟಿ ವೆಚ್ಚದ ಹಾರಂಗಿ ಅಣೆಕಟ್ಟೆಯ ನೀರಿನ ಪ್ರಯೋಜನ ಮೈಸೂರು ಮತ್ತು ಹಾಸನ ಜಿಲ್ಲೆಗೆ. ಕೊಡಗು ಕಳೆದುಕೊಂಡದ್ದು ೬೦೭ ಹೆಕ್ಟೇರ್ ಪ್ರದೇಶ, ಸುಮಾರು ೧೩ ಗ್ರಾಮಗಳು ಮುಳುಗಡೆಗೊಂಡವು. ೧೯೦೦ ಎಕರೆ ಕೃಷಿ ಪ್ರದೇಶ ಮಾಯವಾಯಿತು! ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತದೆ. ಕೊಡಗಿನ ಹಲವಾರು ರಸ್ತೆಗಳು, ಮನೆಗಳು ಮುಳುಗುತ್ತವೆ. ಜನರು ತಮ್ಮ ಆಸ್ತಿ, ಪಾಸ್ತಿ, ಪ್ರಾಣ ಕಳೆದುಕೊಳ್ಳುತ್ತಾರೆ. ಇಷ್ಟೆಲ್ಲ ಅನಾಹುತಗಳು ನಡೆದರೂ ಬೇಸಿಗೆಯಲ್ಲಿ ಹೊಟ್ಟೆ ತುಂಬಾ ಕುಡಿಯಲು ಕೊಡಗಿನ ಹಲವು ನಗರಗಳಲ್ಲಿ ಯೋಗ್ಯವಾದ ನೀರಿಲ್ಲ! ಅಭಿವೃದ್ಧಿಯ ಹೆಸರಲ್ಲಿ ಮರಗಳನ್ನು ನಾಶಮಾಡುತ್ತಾರೆ. ಮರಳು ಗಣಿಗಾರಿಕೆಯಿಂದ ಹೊಳೆಯ ಹರಿವು ನಾಡಿನೊಳಗೆ ಬರುತ್ತಿದೆ. ಮೈಸೂರು-ಕೊಯಿಕೋಡ್ ೪೦೦ ಕೆ.ವಿ.ಎ. ವಿದ್ಯುತ್ ಮಾರ್ಗ ನಿರ್ಮಾಣದಿಂದ ಸುಮಾರು ೫೫ ಸಾವಿರ ಮರಳು ನಾಶವಾದವು. ಈಗ ಮತ್ತೆ ರೈಲು, ನಾಲ್ಕು ಪಥದ ಹೆದ್ದಾರಿ ನಿರ್ಮಾಣಗೊಂಡರೆ ಜಿಲ್ಲೆಯ ಗತಿಯೇನು? ಕೊಡಗಿನಲ್ಲಿ ಟಿಂಬರ್-ಗಣಿ ಮಾಫಿಯಾಗಳೂ ರಾಜಕಾರಣಿಗಳ ಬೆನ್ನೆಲುಬು..! ಸಾಮಾನ್ಯ ಕೃಷಿಕನ ಗೊಳು ಕೇಳುವವರಿಲ್ಲ..! ಕೊಡಗು ಕೊಡಗಾಗಿಯೇ ಉಳಿಯಬೇಕು ಎನ್ನುವವರೆಲ್ಲ, ಡೋಂಗಿ ಪರಿಸರವಾದಿಗಳು..! ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ ಎಲ್ಲೆಲ್ಲಿ ಏನೇನು ಅನಾಹುತಗಳಾಗುತ್ತವೋ ಗೊತ್ತಿಲ್ಲ..! ಅಧಿಕಾರದಲ್ಲಿ ಇರುವವರು ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವಂತಾಗಲಿ ಎಂದು ಆ ಕಾವೇರಿ ತಾಯಿಯನ್ನು ಪ್ರಾರ್ಥಿಸಿಕೊಳ್ಳೊಣ. - ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ