ಚೆಟ್ಟಳ್ಳಿ, ಜೂ. ೧೧: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ಆಶ್ರಯದಲ್ಲಿ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆದ ೧೮ ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ೮ನೇ ಬಾರಿ ಫ್ರೀಡಮ್ ಬಾಯ್ಸ್ ಹುಂಡಿ ತಂಡ ಪಡೆದುಕೊಂಡಿತು. ಮಡಿಕೇರಿ ಬ್ಯಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಫೈನಲ್ ಪಂದ್ಯವು ಫ್ರೀಡಮ್ ಬಾಯ್ಸ್ ಹುಂಡಿ ಹಾಗೂ ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡಗಳ ನಡುವೆ ನಡೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡವು ಅಸ್ಪಾನ್‌ರವರ ೨೯ ರನ್‌ಗಳ ನೆರವಿನಿಂದ ಆರು ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೪೯ ರನ್ ಕಲೆ ಹಾಕಿತು.

೫೦ ರನ್‌ಗಳ ಗುರಿಯನ್ನು ಬೆನ್ನಟ್ಟಿದ ಫ್ರೀಡಮ್ ಬಾಯ್ಸ್ ಹುಂಡಿ ತಂಡವು ರಫೀಕ್‌ರವರ ೨೪ ರನ್‌ಗಳ ಬ್ಯಾಟಿಂಗ್ ಪ್ರದರ್ಶನದಿಂದ ೮ ವಿಕೆಟ್‌ಗಳ ಅಂತರದಿAದ ಗೆದ್ದು ೧೮ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಪಡೆಯಿತು.

ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಫ್ರೀಡಮ್ ಬಾಯ್ಸ್ ಹುಂಡಿ ಹಾಗೂ ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಫ್ರೀಡಮ್ ಬಾಯ್ಸ್ ಹುಂಡಿ ತಂಡವು ಆರು ಓವರ್ ಗಳಲ್ಲಿ ತಂಡದ ನಾಯಕ ರಿಯಾಸ್ ಇಯ್ಯಾರವರ ೬೭ ರನ್‌ಗಳ ನೆರವಿನಿಂದ ಒಂದು ವಿಕೆಟ್ ನಷ್ಟಕ್ಕೆ ೧೦೨ ರನ್ ಕಲೆ ಹಾಕಿತು.

೧೦೩ ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡದ ಯುವ ಆಟಗಾರ ಶಾಹುಲ್‌ರವರು ೫೧ ರನ್ ಗಳಿಸಿದರು ಸಹಾ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಿಲ್ಲ. ಅಂತಿಮವಾಗಿ ಫ್ರೀಡಮ್ ಬಾಯ್ಸ್ ಹುಂಡಿ ತಂಡವು ೧೮ ರನ್‌ಗಳ ನೆರವಿನಿಂದ ಗೆದ್ದು ಫೈನಲ್ ಪ್ರವೇಶಿಸಿತು.

ದ್ವಿತೀಯ ಸೆಮಿಫೈನಲ್ ಪಂದ್ಯವು ಬ್ಯಾರಿ ವಾರಿಯರ್ಸ್ ಮಡಿಕೇರಿ ಹಾಗೂ ಕೆವೈಸಿಸಿ ಕಡಂಗ ತಂಡಗಳ ನಡುವೆ ನಡೆಯಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡವು ಹ್ಯಾರಿಸ್‌ರವರ ೩೮ ರನ್‌ಗಳ ನೆರವಿನಿಂದ ಆರು ಓವರ್‌ನಲ್ಲಿ ಆರು ವಿಕೆಟ್ ನಷ್ಟಕ್ಕೆ ೮೯ ರನ್ ಗಳಿಸಿತು.

(ಮೊದಲ ಪುಟದಿಂದ) ೯೦ ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆವೈಸಿಸಿ ತಂಡವು ೧೨ ರನ್‌ಗಳಿಂದ ವಿರೋಜಿತ ಸೋಲು ಕಂಡಿತು. ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡವು ಫೈನಲ್ ಪ್ರವೇಶಿಸಿತು.

ತೃತೀಯ ಸ್ಥಾನಕ್ಕಾಗಿ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ಕೆವೈಸಿಸಿ ಕಡಂಗ ಹಾಗೂ ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡಗಳ ನಡುವೆ ನಡೆಯಿತು.

ಟಾಸ್ ಗೆದ್ದು ಬ್ಯಾಟ್ ಮಾಡಿದ ಕೆವೈಸಿಸಿ ಕಡಂಗ ತಂಡವು ಮೂರು ಓವರ್‌ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ೩೫ ರನ್ ಕಲೆ ಹಾಕಿತು.

೩೬ ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಬ್ರದರ್ಸ್ ತಂಡವು ೧೩ ರನ್‌ಗಳಿಂದ ಸೋಲು ಕಂಡಿತು.

ಕೆವೈಸಿಸಿ ಕಡಂಗ ತಂಡವು ತೃತೀಯ ಹಾಗೂ ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡವು ನಾಲ್ಕನೇ ಸ್ಥಾನವನ್ನು ಪಡೆಯಿತು.

ಬೆಸ್ಟ್ ಟೀಮ್ ಆಫ್ ದಿ ಟೂರ್ನಮೆಂಟ್ ಬ್ಲಾö್ಯಕ್ ಸ್ಟೋನ್ ಕೂಡಿಗೆ, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಫ್ರೀಡಮ್ ಬಾಯ್ಸ್ ತಂಡದ ರಫೀಕ್ ಹುಂಡಿ, ಬೆಸ್ಟ್ ಫೀಲ್ಡರ್ ಲಕ್ಕಿ ಬಾಯ್ಸ್ ಕುಂಜಿಲ ತಂಡದ ಶಫೀಕ್, ಉದಯೋನ್ಮುಖ ಆಟಗಾರ ಕ್ರೌನ್ ವೀರಾಜಪೇಟೆ ತಂಡದ ಅಫ್ರಾನ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಕೆವೈಸಿಸಿ ಕಡಂಗ ತಂಡದ ಅಸ್ಕರ್, ಬೆಸ್ಟ್ ಬೌಲರ್ ಬ್ಲಾö್ಯಕ್ ಕೋಬ್ರಾ ವೀರಾಜಪೇಟೆ ತಂಡದ ಇಚ್ಚಾವು, ಮ್ಯಾನ್ ಆಫ್ ಸೀರಿಯಸ್ ಫ್ರೀಡಮ್ ಬಾಯ್ಸ್ ಹುಂಡಿ ತಂಡದ ರಿಯಾಸ್ ಪಡೆದುಕೊಂಡರು.

ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಸಂಸ್ಥಾಪಕ ಕುಪ್ಪೋಡಂಡ ರಶೀದ್ ಎಡಪಾಲ ಹಾಗೂ ಕೊಡಗಿನ ಹಿರಿಯ ಆಟಗಾರ ಮುಜೀಬ್ ಮೂರ್ನಾಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತೀರ್ಪುಗಾರರಾಗಿ ಮದನ್ ಯಾಲದಾಳು, ದಿವಿನ್ ರೈ ಗಾಳಿಬೀಡು, ವೀಕ್ಷಕ ವಿವರಣೆಗಾರನಾಗಿ ದಿವಾಕರ್ ಉಪ್ಪಳ, ಕಾರ್ಯನಿರ್ವಹಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಆರ್.ಎಸ್. ಮೂರ್ನಾಡು ಅಧ್ಯಕ್ಷ ಜಾಸಿರ್ ಮೂರ್ನಾಡು ವಹಿಸಿದ್ದರು. ಫೈನಲ್ ಪಂದ್ಯದ ಉದ್ಘಾಟನೆಯನ್ನು ಮುಸ್ಲಿಂ ಕ್ರಿಕೆಟ್ ಸಂಸ್ಥಾಪಕ ರಶೀದ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಯುವ ಮುಖಂಡ ಡಾ. ಮಂಥರ್ ಗೌಡ, ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಧ್ಯಕ್ಷ ಇಸ್ಹಾಕ್ ಖಾನ್, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಖಲೀಲ್ ಮಡಿಕೇರಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ, ಮತೀನ್, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್, ಯುವ ಮುಖಂಡ ಮೈಸಿ ಕತ್ತಣಿಯರ್, ಜೆಡಿಎಸ್ ಮುಖಂಡ ಮನ್ಸೂರ್ ನಾಪೋಕ್ಲು ಇದ್ದರು.

-ಕೆ.ಎಂ. ಇಸ್ಮಾಯಿಲ್ ಕಂಡಕೆರೆ