ಮಡಿಕೇರಿ, ಜೂ. ೧೧ : ಮಡಿಕೇರಿಯಲ್ಲಿ ರೋಟರಿ ಸಂಸ್ಥೆಯ ಮೂರನೇ ಕ್ಲಬ್ ರೋಟರಿ ‘ಮಡಿಕೇರಿ ವುಡ್ಸ್’ ಹೆಸರಿನಲ್ಲಿ ಇದೇ ತಾ. ೧೫ ರಂದು ಉದ್ಘಾಟನೆಯಾಗಲಿದೆ ಎಂದು ರೋಟರಿ ವಲಯ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.
ರೋಟರಿ ಮಡಿಕೇರಿ ವುಡ್ಸ್ ಹೆಸರಿನ ನೂತನ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಎಸ್.ಎಸ್. ಸಂಪತ್ ಕುಮಾರ್, ಕಾರ್ಯದರ್ಶಿಯಾಗಿ ಕೆ. ವಸಂತ್ ಕುಮಾರ್ ಆಯ್ಕೆ ಯಾಗಿದ್ದಾರೆ. ನೂತನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ತಾ. ೧೫ ರಂದು ಸಂಜೆ ೭ ಗಂಟೆಗೆ ಮಡಿಕೇರಿ ಗೌಡ ಸಭಾಂಗಣದಲ್ಲಿ ನೆರವೇರಲಿದೆ. ನೂತನ ರೋಟರಿ
(ಮೊದಲ ಪುಟದಿಂದ) ಸಂಸ್ಥೆಯನ್ನು ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಉದ್ಘಾಟಿಸಲಿದ್ದು, ರೋಟರಿ ಕ್ಲಬ್ ವಿಸ್ತರಣಾ ಸಮಿತಿ ಜಿಲ್ಲಾಧ್ಯಕ್ಷ ಡಾ. ಕೇಶವ್, ರೋಟರಿ ವಲಯ ಉಪರಾಜ್ಯಪಾಲ ಅನಿಲ್ ಎಚ್.ಟಿ., ನೂತನ ಕ್ಲಬ್‌ನ ಗೌರವ ಮಾರ್ಗದರ್ಶಿ ಬಿ.ಜಿ. ಅನಂತಶಯನ, ರೋಟರಿ ವಲಯ ಕಾರ್ಯದರ್ಶಿ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಜಗದೀಶ್ ಪ್ರಶಾಂತ್ ಪಾಲ್ಗೊಳ್ಳುತ್ತಿದ್ದಾರೆ.
ರೋಟರಿ ಮಿಸ್ಟಿ ಹಿಲ್ಸ್ ತನ್ನ ೧೭ ನೇ ವರ್ಷದಲ್ಲಿ ಹೊಸ ರೋಟರಿ ಸಂಸ್ಥೆಯನ್ನು ಪ್ರಾಯೋಜಿಸಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ರೋಟರಿ ವುಡ್ಸ್ನಲ್ಲಿ ೨೬ ಸದಸ್ಯರ ತಂಡವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರೋಟರಿ ವುಡ್ಸ್ ಉಪಾಧ್ಯಕ್ಷರಾಗಿ ಪದ್ಮ ಗಿರಿ, ಖಜಾಂಚಿಯಾಗಿ ಕವಿತಾ ರಾಮ್, ಜಂಟಿ ಕಾರ್ಯದರ್ಶಿಯಾಗಿ ಹರೀಶ್ ಕಿಗ್ಗಾಲು, ವಾರ್ತಾ ಸಂಚಿಕೆ ಸಂಪಾದಕರಾಗಿ ಪ್ರಜ್ಞಾ ರಾಜೇಂದ್ರ, ಜಿ.ಆರ್. ಪ್ರಜ್ವಲ್, ನಿರ್ದೇಶಕರಾಗಿ ರಂಜಿತ್ ಕಿಗ್ಗಾಲು, ಭಗತ್ ರಾಜ್ ಎಂ.ವಿ., ಸತೀಶ್ ರೈ, ಎಂ.ಸಿ. ರವಿಕುಮಾರ್, ಡಾ. ಅನುಶ್ರೀ ಎ., ಎಂ.ಕೆ. ಅರುಣ್ ಕುಮಾರ್, ಪದ್ಮನಾಭ ಶೆಟ್ಟಿ, ಡಾ. ಹರ್ಷ ಸಿ.ಆರ್., ಡಾ. ಅದಿತಿ ಪಿ. ಭಟ್, ಎಸ್.ಡಿ. ಪ್ರಶಾಂತ್, ಧನಂಜಯ್ ಶಾಸ್ತಿçÃ, ಅಜ್ಜೇಟಿರ ಲೋಕೇಶ್, ಕೆ. ರವೀಂದ್ರ, ಪ್ರಮೀಳಾ ಶೆಟ್ಟಿ, ಪ್ರಕೃತಿ ಸುರೇಶ್, ರಫೀಕ್, ಸಿ.ವಿ. ವಿಶ್ವನಾಥ್ ನೇಮಕಗೊಂಡಿದ್ದಾರೆ.