ಮಡಿಕೇರಿ, ಜೂ. ೯: ಕೊಡಗಿನಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯ ಗಳನ್ನು ನಿಭಾಯಿಸುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಈ ಬಾರಿಯೂ ಜಿಲ್ಲೆಗೆ ರಾಷ್ಟಿçÃಯ ವಿಪತ್ತು ನಿರ್ವಹಣಾ ಘಟಕ (ಎನ್.ಡಿ.ಆರ್.ಎಫ್.) ತಂಡವನ್ನು ಕರೆಸಿಕೊಳ್ಳಲಾಗಿದೆ.
(ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಸಿದ್ಧತೆ ನಡೆಸಲಾಗಿದೆ. ವಿಜಯವಾಡದಿಂದ ಎನ್.ಡಿ.ಆರ್.ಎಫ್.ನ ಸುಮಾರು ೨೨ ಪರಿಣಿತರನ್ನು ಒಳಗೊಂಡ ತಂಡ ಜಿಲ್ಲೆಗೆ ಆಗಮಿಸಲಿದ್ದು, ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾರ್ಯಾಚರಿಸಲಿದೆ.
ಅಪಾಯಕಾರಿ ಸ್ಥಳಗಳ ಪರಿವೀಕ್ಷಣೆಯೊಂದಿಗೆ ಈ ತಂಡ ಅಗತ್ಯ ಸಿದ್ಧತೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮಾಡಿಕೊಳ್ಳಲಿದೆ.