ಮಡಿಕೇರಿ, ಜೂ. ೯: ಇಲ್ಲಿಗೆ ಸನಿಹದ ತಣ್ಣಿಮಾನಿ ಗ್ರಾಮದ ನಿವಾಸಿ ಕುದುಕುಳಿ ಡ್ಯಾನಿ ಎಂಬಾತನನ್ನು ಕೊಲೆ ಮಾಡಿದ ಆತನ ತಂದೆ ಸುಗುಣ ಹಾಗೂ ಡ್ಯಾನಿಯ ಪತ್ನಿ ಅನುಪ್ರಿಯ ಅವರುಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
ಸAಶಯಾಸ್ಪದವಾಗಿದ್ದ ಈ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಅಧೀಕ್ಷಕ ಎಂ.ಎ. ಅಯ್ಯಪ್ಪ ಹಾಗೂ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.