ಸೋಮವಾರಪೇಟೆ, ಜೂ. ೮: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ಆನ್‌ಲೈನ್ ತಂತ್ರಾAಶದಲ್ಲಿ ದಾಖಲಿಸುವುದು ಕಡ್ಡಾಯವಾಗಿದ್ದು, ತಕ್ಷಣ ಅಗತ್ಯ ದಾಖಲಾತಿಗಳನ್ನು ಪಟ್ಟಣ ಪಂಚಾಯಿತಿ ಕಚೇರಿಗೆ ಹಾಜರುಪಡಿಸಿ ಕೂಡಲೇ ತಂತ್ರಾAಶದಲ್ಲಿ ದಾಖಲಿಸಿಕೊಳ್ಳಬೇಕೆಂದು ಮುಖ್ಯಾಧಿಕಾರಿ ನಾಚಪ್ಪ ಸೂಚನೆ ನೀಡಿದ್ದಾರೆ.

ತಮ್ಮ ಆಸ್ತಿ ವಿವರಗಳನ್ನು ನೂತನ ತಂತ್ರಾAಶದಲ್ಲಿ ದಾಖಲಿಸುವ ಮೂಲಕ ನಮೂನೆ ೩ನ್ನು ಪಡೆದುಕೊಳ್ಳಬೇಕು. ಉದ್ದಿಮೆದಾರರು ಕೂಡಲೇ ಕಚೇರಿಯಿಂದ ಉದ್ದಿಮೆ ಪರವಾನಗಿ ಪಡೆಯಬೇಕು. ಮನೆ ಕಂದಾಯ, ನೀರಿನ ಕಂದಾಯ, ಮಳಿಗೆ ಬಾಡಿಗೆ ಪಾವತಿಸದವರು ತಕ್ಷಣ ಪಾವತಿ ಮಾಡಬೇಕು. ತಪ್ಪಿದಲ್ಲಿ ಪುರಸಭಾ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.