ಮಡಿಕೇರಿ, ಜೂ. ೮: ಕುಶಾಲನಗರದ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ೬ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಡಿಕೇರಿಯ ೯ ವಿದ್ಯಾರ್ಥಿಗಳು ಭಾಗವಹಿಸಿ ೧೧ ಪದಕಗಳನ್ನು ಪಡೆದಿದ್ದಾರೆ. ಇವುಗಳಲ್ಲಿ ೫ ಚಿನ್ನ, ೩ ಬೆಳ್ಳಿ ಪದಕ ಒಳಗೊಂಡಿದೆ.
ಕಥಾ ವಿಭಾಗದಲ್ಲಿ ಇಂಪನಾ, ಆಲಿಷಾ, ಲೋಚನ್, ಕೌಶಿಕ್, ನಿಜಾಮುದ್ದೀನ್ ಚಿನ್ನ ಗೆದ್ದರೆ, ರಿತ್ವಿಕ್, ಅವಿನೇಶ್, ಮಿಥುನ್ ಬೆಳ್ಳಿ ಪದಕ ಪಡೆದರು. ಕುಮಿತೆ ವಿಭಾಗದಲ್ಲಿ ನಿಜಾಮುದ್ದೀನ್, ಆಲಿಷಾ, ಕೌಶಿಕ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ಕೊಡಗಿನ ತರಬೇತುದಾರರಾದ ಎನ್.ಎಸ್. ಅರುಣ್, ಸಲಾಹುದ್ದೀನ್, ಚಂದ್ರು ಮಾರ್ಗದರ್ಶನ ನೀಡಿದ್ದರು.