ಗೋಣಿಕೊಪ್ಪಲು, ಜೂ. ೬: ವೀರಾಜಪೇಟೆ ತಾಲೂಕು ವಿವಿದೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘಕ್ಕೆ ೨೦೨೨-೨೦೨೭ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಲ್ಲೇಟೀರ ಪ್ರವಿ ಮೊಣ್ಣಪ್ಪ ಹಾಗೂ ಬಿ. ಶೆಟ್ಟಿಗೇರಿ ಗ್ರಾಮದ ಕಡೆಮಾಡ ಕುಸುಮ ಜೋಯಪ್ಪ ಅವಿರೋಧ ವಾಗಿ ಆಯ್ಕೆಗೊಂಡಿದ್ದಾರೆ.

ಗೋಣಿಕೊಪ್ಪಲುವಿನ ಸಂಘದ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಎಂ.ಎಸ್. ಮೋಹನ್ ಇವರನ್ನು ಮುಂದಿನ ೫ ವರ್ಷದ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾ ರೆಂದು ಸಂಘದ ನಿರ್ದೇಶಕರ ಸಮ್ಮುಖದಲ್ಲಿ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಚುನಾವಣಾ ಅಧಿಕಾರಿ, ತಾಲೂಕಿನಲ್ಲಿ ಮಹಿಳೆಯರಿಗಾಗಿಯೇ ಇರುವ ಏಕೈಕ ಮಹಿಳಾ ಸಹಕಾರ ಸಂಘವಾಗಿದೆ. ಇದನ್ನು ಅಭಿವೃದ್ಧಿಪಡಿಸಲು ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಮುಂದೆ ತರಲು ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಗುಂಪುಗಳಿಗೆ ಸಾಲವನ್ನು ನೀಡುವಂತೆ ಸಲಹೆ ನೀಡಿದರು.

ಅವಿರೋಧವಾಗಿ ಆಯ್ಕೆ ಗೊಂಡ ನೂತನ ಅಧ್ಯಕ್ಷೆ ಕುಲ್ಲೇಟೀರ ಪ್ರವಿ ಮೊಣ್ಣಪ್ಪ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಮಹಿಳೆ ಯರು ಸಂಘದಲ್ಲಿ ಸದಸ್ಯರಾಗಿ ನೋಂದಾವಣೆಯಾಗಿದ್ದಾರೆ. ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ೧೦ ಸಾವಿರಕ್ಕೂ ಅಧಿಕ ಮಹಿಳೆಯರನ್ನು ಸಂಘದ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಸಂಘದ ವತಿಯಿಂದ ವಿವಿಧ ಹಂತದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುವುದು. ಸಂಘವನ್ನು ಮಾದರಿ ಸಂಘವನ್ನಾಗಿ ಮಾಡಲು ಸರ್ವ ಪ್ರಯತ್ನ ನಡೆಸಲಾಗುವುದು, ಹಿರಿಯರು ೨೦೦೭ರಲ್ಲಿ ಹಾಕಿಕೊಟ್ಟ ಮಾರ್ಗದಂತೆ ಸಂಘವನ್ನು ಮುನ್ನಡೆಸಲಾಗುವುದು ಎಂದರು.

ನೂತನ ಉಪಾಧ್ಯಕ್ಷೆ ಕಡೇಮಾಡ ಕುಸುಮ ಜೋಯಪ್ಪ ಮಾತನಾಡಿ, ಸಂಘದ ಬೆಳವಣಿಗೆಗೆ ಮುಂದಿನ ದಿನದಲ್ಲಿ ಪಿಗ್ಮಿ ಸಂಗ್ರಹಣೆ ನಡೆಸಿ ಮಹಿಳೆಯರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ಮಂಜೂರು ಮಾಡಲಾಗುವುದು.

ಈ ವೇಳೆ ವೀರಾಜಪೇಟೆ ತಾಲೂಕು ವಿವಿದೊದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘದ ನೂತನ ನಿರ್ದೇಶಕಿ ಚೇಂದAಡ ಸುಮಿ ಸುಬ್ಬಯ್ಯ ಮಾತನಾಡಿದರು. ಆರಂಭದಲ್ಲಿ ಸಂಘದ ನಿರ್ದೇಶಕಿ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಕಾರ್ಯನಿರ್ವಾಹಣಾಧಿಕಾರಿ ಎ.ಟಿ. ಕಸ್ತೂರಿ ಸ್ವಾಗತಿಸಿದರು. ಎಂ. ಮಂಜುಳ, ಮಂಜು, ವರಲಕ್ಷಿö್ಮ, ಅನಿತಾ ಸುಬ್ಬಯ್ಯ, ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ, ಲಿಲ್ಲಿ ಅಂಥೋಣಿ, ಎಂ.ಕೆ. ಶೀಲಾ, ಹೆಚ್.ವಿ. ಸರೋಜ, ಸೇರಿದಂತೆ ಸಂಘದ ಕಾರ್ಯ ನಿರ್ವಾ ಹಣಾಧಿಕಾರಿ ಎ.ಟಿ. ಕಸ್ತೂರಿ, ಆಡಳಿತ ಅಧಿಕಾರಿ ಪಿ. ಆಶಾ, ಸಿಬ್ಬಂದಿಗಳಾದ ಹೆಚ್.ಎಲ್. ಪ್ರೇಮ ಪಿಗ್ನಿ ಸಂಗ್ರಹಕಾರರಾದ ಗಣೇಶ್, ಸುನಂದ, ತೀರ್ಥ, ಶೀಲಾ, ಮಾರಿಕಣ್ಣು ಮುಂತಾದವರು ಹಾಜರಿದ್ದರು.