ಮಡಿಕೇರಿ: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನ್ಯಾಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಎಸೋಸಿಯೇಷನ್‌ನ ಕೊಡಗು ಜಿಲ್ಲಾ ಶಾಖೆಯು ಪೊಲೀಸ್ ಇಲಾಖೆಗೆ ಔಷಧೀಯ ಮಹತ್ವದ ಸಿಮರೂಬಾ (ಲಕ್ಷಿö್ಮÃ ತರು), ಕರಂಜ, ಜಂಬೂ ಮೊದಲಾದ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ದಿನವನ್ನು ಆಚರಿಸಿತು. ಇಲಾಖೆಯ ಪರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯಪ್ಪ ಅವರು ಇವುಗಳನ್ನು ವಿವಿಧ ಠಾಣೆಗಳಲ್ಲಿ ಬೆಳೆಸುವ ಭರವಸೆಯಿತ್ತರು. ನಿಮಾ ಕೊಡಗು ಅಧ್ಯಕ್ಷ ಡಾ. ರಾಜಾರಾಮ್, ನಿಮಾ ಸಂಪರ್ಕಾಧಿಕಾರಿ ಡಾ. ಉದಯ ಶಂಕರ್, ಮಹಿಳಾ ವಿಭಾಗದ ಕಾರ್ಯದರ್ಶಿ ಡಾ. ಸೌಮ್ಯ ಗಣರಾಜ್ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ: ದಾರುಲ್ ಇಸ್ಲಾಂ ಮದ್ರಾಸ ಕಲ್ಲುಬಾಣೆ ವೀರಾಜಪೇಟೆ ಇವರ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಲ್ಲಿನ ಗ್ರಾಮ ಪಂಚಾಯಿತಿಯ ಯೋಜನಾ ಅಧಿಕಾರಿ ಮಣಿಯವರು ಬದ್ರಿಯಾ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಣೆ ಮಾಡಲಾಯಿತು.
ನಂತರ ಮಾತನಾಡಿದ ಯೋಜನ ಅಧಿಕಾರಿ ಮಣಿ, ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಸ್ತೆಯಲ್ಲಿ ಕಸವನ್ನು ಹಾಕಬಾರದು. ಮನೆಯ ಶೌಚಾಲಯದ ನೀರನ್ನು ಮನೆಯ ಪಕ್ಕದ ಕೆರೆ, ಕಾಲುವೆ, ಸೇತುವೆಗಳಿಗೆ ಬಿಡಬಾರದು. ಮನೆಯಲ್ಲಿ ಇಂಗುಗುAಡಿ ಮಾಡಿಕೊಳ್ಳಬೇಕು ಅದಕ್ಕೆ ಬೇಕಾದ ವ್ಯವಸ್ಥೆ ಸರ್ಕಾರದ ವತಿಯಿಂದ ದೊರೆಯುತ್ತದೆ ಎಂದರು.
ವಾಹನಗಳಿAದ ಪರಿಸರ ಮಾಲಿನ್ಯವಾಗುತ್ತಿದೆ ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರಲಿವೆ. ಆಗ ಸ್ವಲ್ಪಮಟ್ಟಿಗೆ ಮಾಲಿನ್ಯ ಸುಧಾರಣೆ ಆಗಬಹುದು ಎಂದು ತಿಳಿಸಿದರು.
ಪಿಡಿಓ ಶಫೀಕ್ ಪರಿಸರ ದಿನಾಚರಣೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಕಳೆದ ಬಾರಿ ಪರಿಸರ ದಿನದಲ್ಲಿ ನೆಟ್ಟ ಗಿಡಗಳನ್ನು ಪೋಷಣೆ ಮಾಡುತ್ತಿರುವ ಕಲ್ಲುಬಾಣೆಯ ಶಫೀ ಅವರಿಗೆ ಸನ್ಮಾನ ಮಾಡಲಾಯಿತು. ಮದ್ರಾಸದ ಹನೀಫ್ ಫೈಸಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ. ಬಷೀರ್, ಶಹದೀರ್ ಆಲಿ, ಮದ್ರಾಸ ಆಡಳಿತ ಮಂಡಳಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭ ಹಾಜರಿದ್ದರು.ಮುಳ್ಳೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಮಾರು ಐದು ವರ್ಷಗಳಿಂದ ‘ವೃಕ್ಷ ಕ್ರಾಂತಿ ಶೀರ್ಷಿಕೆಯಡಿಯಲ್ಲಿ ಹಣ್ಣಿನ ಮರಗಳ ಬೀಜಗಳನ್ನು ಶಾಲೆಯಲ್ಲಿ ಸ್ಥಾಪಿತವಾಗಿರುವ ಬೀಜ ಭಂಡಾರದಲ್ಲಿ ಸಂಗ್ರಹಿಸಿ ಜೂನ್ ತಿಂಗಳಲ್ಲಿ ಅವುಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿದ್ದಾರೆ.
ವರ್ಷಪೂರ್ತಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ದೊರೆಯುವ ಹಣ್ಣಿನ ಬೀಜಗಳನ್ನು ಸಂಗ್ರಹಿಸಿ ತಂದು ಶಾಲೆಯಲ್ಲಿರುವ ಬೀಜ ಭಂಡಾರದಲ್ಲಿ ಹಾಕುತ್ತಾರೆ. ಇಲ್ಲಿ ಮಾವು, ಹಲಸು, ಬೈನೆ ಬೀಜ, ನೇರಳೆ, ಪನ್ನೇರಳೆ, ಸೀಬೆ, ಸಪೋಟ, ರಾಂಫಲ ಬಕ್ಕುಲದ ಹಣ್ಣು, ಚೊಟ್ಟೆ ಹಣ್ಣು ಹೀಗೆ ನಾನಾ ಬಗೆಯ ಹಣ್ಣಿನ ಬೀಜಗಳನ್ನು ಸಂಗ್ರಹಿಸಲಾಗುತ್ತದೆ. ಅದರಲ್ಲೂ ಕಾಡು ಹಣ್ಣಿನ ಮರಗಳಿಗೆ ಹೆಚ್ಚು ಒತ್ತು ನೀಡಿ ಬೀಜಗಳನ್ನು ಸಂಗ್ರಹಿಸಲಾಗುತ್ತಿದೆ. ಇವುಗಳನ್ನು ಮಣ್ಣಿನ ಉಂಡೆಗಳಾಗಿ ಮಾಡಿ ಅವುಗಳೊಳಗೆ ಸೇರಿಸಿ, ಒಣಗಿಸಿ, ಬೀಜದುಂಡೆಗಳನ್ನಾಗಿ ತಯಾರು ಮಾಡಲಾಗುತ್ತದೆ. ಜೂನ್ ಮೊದಲ ವಾರ ಅಥವಾ ಮಳೆ ಪ್ರಾರಂಭವಾಗುವುದನ್ನು ಗಮನಿಸಿ ಈ ಬೀಜದುಂಡೆಗಳನ್ನು ಬಯಲು ಪ್ರದೇಶಗಳ ರಸ್ತೆಯ ಎರಡು ಬದಿಗಳಲ್ಲಿ ಹಾಗೂ ಅರಣ್ಯ ಸಿಬ್ಬಂದಿಗಳ ಸಹಾಯದಿಂದ ಅರಣ್ಯದೊಳಗೆ ಬಿತ್ತುವ ಕಾರ್ಯವನ್ನು ಮಾಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಶಿಕ್ಷಕ ಸತೀಶ್, ಹಣ್ಣಿನ ಮರಗಳನ್ನು ಬೆಳೆಯುವುದರ ಮುಖಾಂತರ ವೇಗವಾಗಿ ಅರಣ್ಯೀಕರಣ ಮಾಡಲು ಸಾಧ್ಯವಿದೆ. ಹಣ್ಣುಗಳನ್ನು ತಿನ್ನುವ ಪಕ್ಷಿಗಳು ಹಿಕ್ಕೆಗಳನ್ನು ಎಲ್ಲೆಂದರಲ್ಲಿ ಹಾಕುವುದರ ಮೂಲಕ ಅಲ್ಲಲ್ಲಿ ಮರ ಗಿಡಗಳು ಬೆಳೆದು ತನ್ಮೂಲಕ ಅರಣ್ಯ ತನ್ನಿಂದ ತಾನೇ ವೃದ್ಧಿಯಾಗುತ್ತದಲ್ಲದೆ ಹಣ್ಣಿನ ಮರಗಳು ಬೆಳೆಸುವುದರಿಂದ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಆಹಾರ ದೊರೆತಂತಾಗುತ್ತದೆ ಈ ದೃಷ್ಟಿಯಿಂದ ನಾವು ಹೆಚ್ಚಿನ ಕಾಡು ಹಣ್ಣಿನ ಮರಗಳನ್ನು ಬೆಳೆಯುವ ಉದ್ದೇಶದಿಂದ ಈ ಕಾರ್ಯಗಳನ್ನು ಸುಮಾರು ಐದು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು.ಮರಗೋಡು: ವಿಶ್ವ ಪರಿಸರ ದಿನಾಚರಣೆ ಮತ್ತು ರಾಷ್ಟಿçÃಯ ಪೋಷಣ ಅಭಿಯಾನದ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಮರಗೋಡು ಗ್ರಾ.ಪಂ. ವತಿಯಿಂದ ಗ್ರಾಮದ ಜನತಾ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮ ಮಾತನಾಡಿ, ನಮಗೆ ಒಳ್ಳೆಯ ಆರೋಗ್ಯ ಬೇಕಾದರೆ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಬೇಕು ಹಾಗೂ ಮಕ್ಕಳಿಗೆ ಹಣ್ಣಿನ ಗಿಡಗಳ ಪ್ರಾಮುಖ್ಯತೆಯನ್ನು ವಿವರಿಸಿದರು.
ಗ್ರಾ.ಪಂ. ಸದಸ್ಯ ಪರಿಚನ ಸತೀಶ್ ಮಾತನಾಡಿ, ಪೋಷಕರು ಮಕ್ಕಳಲ್ಲಿ ಪ್ರಸ್ತುತ ಆಗುತ್ತಿರುವ ಮಾಲಿನ್ಯದ ಬಗ್ಗೆ ತಿಳಿ ಹೇಳಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟು ಮಕ್ಕಳಿಂದಲೇ ಗಿಡಗಳಿಗೆ ನೀರುಣಿಸಲಾಯಿತು. ಈ ದಿನ ಬಾಲ ವಿಕಾಸ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ. ಸಿಬ್ಬಂದಿ ವೇತನ್, ಪೋಷಕರು, ಗುಡ್ಡೆಮನೆ ರೋಹಿಣಿ ಚಂದ್ರಶೇಖರ್, ಅಂಗನವಾಡಿ ಸಹಾಯಕಿ ರಮ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ಸ್ವಾಗತಿಸಿ, ವಂದಿಸಿದರು.*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಎಂ.ಸಿ. ಮಾದಪ್ಪ ಪೆಟ್ರೋಲಿಯಂ ಸಹಯೋಗದಲ್ಲಿ ಬಂಕ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸುಮಾರು ೩೪೫ ಕಾಡು ಮರಗಳ ಗಿಡ ವಿತರಣೆ ಮಾಡಲಾಯಿತು. ಮಹಾಗನಿ, ನೆಲ್ಲಿಕಾಯಿ, ಸೀಬೆ, ನೇರಳೆ, ಹಲಸು ಗಿಡಗಳನ್ನು ವಿತರಿಸಲಾಯಿತು. ಹಿರಿಯ ಪಶು ವೈದ್ಯ ಕಂಜಿತAಡ ಚಿಣ್ಣಪ್ಪ, ಉದ್ಯಮಿ ಮಚ್ಚಮಾಡ ಪಾರ್ವತಿ, ಹಿಂದು ಕಾರ್ಯಕರ್ತ ಸುಬ್ರಮಣಿ, ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕರ ದರ್ಶನ್ ದೇವಯ್ಯ, ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಪಾರುವಂಗಡ ಬೋಸ್ ಪೆಮ್ಮಯ್ಯ ಸಾರ್ವಜನಿಕರಿಗೆ ಸಸಿ ವಿತರಿಸಿದರು.೭ನೇ ಹೊಸಕೋಟೆ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ತಾ. ೫ ರಂದು ೭ನೇ ಹೊಸಕೋಟೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಔಷಧೀಯ ಗಿಡ ನೆಟ್ಟು ಮಾತನಾಡಿದ ಚೆಟ್ಟಳ್ಳಿಯ ಲಕ್ಷಿö್ಮ ಕ್ಲಿನಿಕ್‌ನ ವೈದ್ಯ ಅಸೋಸಿಯೇಷನ್‌ನ ಸದಸ್ಯ ಡಾ. ಮಹೇಶ್ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿ ಸಮೀಪದ ದೊಡ್ಡಮ್ಮ ತಾಯಿ ದೇವಾಲಯ ಆವರಣದಲ್ಲಿ ಕೂಡುಮಂಗಳೂರು ಬಿ.ಜೆ.ಪಿ. ಕಾರ್ಯಕರ್ತರ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಗಿಡಗಳನ್ನು ನೆಟ್ಟು ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಕೂಡುಮಂಗಳೂರು ಬಿ.ಜೆ.ಪಿ. ಬೂತ್ ಅಧ್ಯಕ್ಷರುಗಳಾದ ಮಂಜುನಾಥ, ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ಭೋಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನು ನಂಜುAಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಜಿಲ್ಲಾ ಎಸ್.ಟಿ. ಘಟಕದ ಕಾರ್ಯದರ್ಶಿ ಪ್ರಭಾಕರ್, ಬಿ.ಜೆ.ಪಿ.ಯ ವಿವಿಧ ಘಟಕಗಳ ಪ್ರಮುಖರಾದ ಪವಿತ್ರ, ಕನಕ ಸೇರಿದಂತೆ ಕೂಡುಮಂಗಳೂರು ವ್ಯಾಪ್ತಿಯ ಬಿ.ಜೆ.ಪಿ. ಪಕ್ಷದ ಪ್ರಮುಖರು ಹಾಜರಿದ್ದರು.ನಾಪೋಕ್ಲು: ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಸಮೀಪದ ಚೆರಿಯಪರಂಬು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡಲಾಯಿತು.
ಈ ಸಂದರ್ಭ ನಾಪೋಕ್ಲು ನೋಡೆಲ್ ಅಧಿಕಾರಿ ಜೀವನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸದಸ್ಯ ಕುಶು ಕುಶಾಲಪ್ಪ, ಸಾಬಾ ತಿಮ್ಮಯ್ಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯೆ ಬಾಳೆಯಡ ದಿವ್ಯಾ, ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.ಗುಡ್ಡೆಹೊಸೂರು: ಇಲ್ಲಿನ ಗೌಡ ಸಮಾಜದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೊಳ್ಳುರು ಗ್ರಾಮದ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಗಿಡ ನೆಡಲಾಯಿತು. ಈ ಸಂದರ್ಭ ಸಮಾಜದ ಅಧ್ಯಕ್ಷ ನಡುಗಲ್ಲು ಬಾಲಕೃಷ್ಣ, ಉಪಾಧ್ಯಕ್ಷ ಗುಡ್ಡೆಮನೆ ವಿಶುಕುಮಾರ್, ಕಾರ್ಯದರ್ಶಿ ಅಚ್ಚಾಂಡಿರ ತಾರ ಹೇಮರಾಜ್, ಮತ್ತು ಖಜಾಂಚಿ ಕುಡೆಕಲ್ ರೂಪ ನಿತ್ಯಾನಂದ, ಬೊಮ್ಮುಡಿ ಬಾಲಕೃಷ್ಣ ಮತ್ತು ಸದಸ್ಯರು ಹಾಜರಿದ್ದರು.ವೀರಾಜಪೇಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವೀರಾಜಪೇಟೆ ಹೊರವಲಯದ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ನಾಂಗಾಲ ಬಳಿಯ ತೋತೆರಿ ಈಶ್ವರ ದೇವಾಲಯದಲ್ಲಿ ಗಿಡ ನೆಡಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಧರ್ಮಸ್ಥಳ ಸಂಘದ ನಾಗರಾಜು, ರೇಖಾ ಗಣೇಶ್, ಸ್ವಯಂ ಸೇವಕರಾದ ಸಬಿತಾ, ಅರುಣಾ, ಮೋಹನ್, ರಂಜನ್, ಕಿರಣ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರುಸುಂಟಿಕೊಪ್ಪ: ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ಪಂಪ್‌ಹೌಸ್ ರಸ್ತೆಯ ೧ನೇ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ನಂತರ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಯ ಬೇಕಾದರೆ ಮರ ಗಿಡಗಳನ್ನು ನಾವು ಪೋಷಣೆ ಮಾಡುವ ಮೂಲಕ ಪರಿಸರ ಉಳಿಸಲು ಪಣತೊಡಬೇಕೆಂದು ಹೇಳಿದರು.
ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ರಫೀಕ್ ಖಾನ್, ರೇಷ್ಮ, ಅಂಗನವಾಡಿ ಕಾರ್ಯಕರ್ತರುಗಳಾದ ವಿಜಯ, ಸರಳ, ಸೇಲಿನಾ, ಶೋಭಾ, ಸಗಾಯಮೇರಿ, ಪಂಚಾಯಿತಿ ಸಿಬ್ಬಂದಿಗಳಾದ ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು, ಆಶಾಕಾರ್ಯಕರ್ತೆ ಪಾರ್ವತಿ ಹಾಗೂ ಸ್ತಿçÃಶಕ್ತಿ ಸಂಘದ ಸದಸ್ಯರುಗಳು ಇದ್ದರು.ಕುಶಾಲನಗರ: ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ವಲಯ ಅರಣ್ಯಾಧಿಕಾರಿ ಶಿವರಾಂ ಉಪವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್, ಸಿಬ್ಬಂದಿಗಳು ಮತ್ತು ಪ್ರವಾಸಿಗರು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಂಡರು.ಮಡಿಕೇರಿ: ಮಡಿಕೇರಿ ಸಮೀಪದ ಹೆರಿಟೇಜ್ ರೆಸಾರ್ಟ್ನಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಗಾಳಿಬೀಡುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರೆಸಾರ್ಟ್ನ ಕಾರ್ಮಿಕರಿಂದ ಗಿಡ ನೆಡಲಾಯಿತು.ವೀರಾಜಪೇಟೆ: ಮಾನವನು ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರದ ಮೇಲೆ ನಾನಾ ರೀತಿಯಲ್ಲಿ ದೌರ್ಜನ್ಯ ಮಾಡಿದ ಪರಿಣಾಮ ಇಂದು ಪರಿಸರವು ಮುನಿಸಿಕೊಂಡು ಹಲವಾರು ರೀತಿಯ ಪರಿಣಾಮ ಕಾಣುತ್ತಿದ್ದೇವೆ ಎಂದು ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ವೀರಾಜಪೇಟೆ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿ ಅವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಶಿವರುದ್ರ ಅವರು, ಯಾವ ರೀತಿಯಲ್ಲಿ ಮಗುವನ್ನು ಪೋಷಕರು ಲಾಲಿಸಿ, ಮುದ್ದಿಸಿ, ಪೋಷಿಸುತ್ತಾರೆ. ನಾವುಗಳು ಪರಿಸರವನ್ನು ಪ್ರೀತಿಸಿ ಬೆಳೆಸಬೇಕು ಎಂದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಗತಿ ಶಾಲೆಯ ಆಡಳಿತಾಧಿಕಾರಿ ಮಾದಂಡ ತಿಮ್ಮಯ್ಯ ಅವರು, ಪ್ಲಾಸ್ಟಿಕ್ ಉಪಯೋಗದಿಂದ ಭೂಪದರದ ಮೇಲಾಗುವ ಪರಿಣಾಮದಿಂದಾಗಿ ಭೂಸತ್ವವು ವಿನಾಶದ ಅಂಚಿನಲ್ಲಿದೆ. ಪರಿಸರವನ್ನು ಸರ್ವರು ಪ್ರೀತಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಅವರಣದಲ್ಲಿ ಮುಖ್ಯ ಅತಿಥಿಗಳಿಂದ ಸಸಿಯನ್ನು ನೆಟ್ಟು ಗಿಡಕ್ಕೆ ನೀರು ಎರೆಯಲಾಯಿತು. ಪರಿಸರ ದಿನಾಚರಣೆಯ ವಿಷಯವಾಗಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಅಯ್ಯಪ್ಪ ಪಿ.ಆರ್., ಕಾಕೋಟುಪರಂಬು ಸಿ.ಆರ್.ಪಿ. ಎ.ಎಂ. ಶ್ರೀನಿವಾಸ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.ಕಡಂಗ: ವಿಶ್ವ ಪರಿಸರ ದಿನದ ಅಂಗವಾಗಿ ಎಸ್‌ವೈಎಸ್‌ಎಸ್‌ಎಫ್, ಕೆಎಂಜೆ ಹಾಗೂ ಬದ್ರಿಯಾ ಸುನ್ನಿ ಮಸೀದಿ ಕಡಂಗ ಶಾಖೆಯ ವತಿಯಿಂದ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಬದ್ರಿಯಾ ಜಮಾಅತ್ ಅಧ್ಯಕ್ಷ ಸುಲೈಮಾನ್ ಸಿ.ಎಂ. ಸಸಿ ನೆಟ್ಟು ಚಾಲನೆ ನೀಡಿದರು. ಬದ್ರಿಯಾ ಮಸೀದಿಯ ಖತೀಬ್ ಶಾಹಜಾನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಪ್ರಾರ್ಥಿಸಿದರು.
ಬದ್ರಿಯಾ ಮದರಸ ಅಧ್ಯಾಪಕ ಹಾರಿಸ್ ಬಯಾನಿ ಹಾಗೂ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ದಿನದ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭ ಎಸ್‌ಎಸ್‌ಎಫ್ ಪದಾಧಿಕಾರಿಗಳಾದ ನೌಶಾದ್ ಸಿ.ಎಂ., ಶಮೀರ್, ಎಸ್‌ವೈಎಸ್ ಪದಾಧಿಕಾರಿಗಳಾದ ಷಂಶುದ್ದೀನ್, ಮದರಸ ಅಧ್ಯಾಪಕರಾದ ರಜಾಕ್, ಇಸ್ಮಾಯಿಲ್ ಹಾಗೂ ಮದರಸ ವಿದ್ಯಾರ್ಥಿಗಳು ಎಸ್‌ಎಸ್‌ಎಫ್, ಎಸ್‌ವೈಎಸ್, ಕೆಎಂಜೆ ಸದಸ್ಯರು ಹಾಜರಿದ್ದರು.