ವೀರಾಜಪೇಟೆ, ಜೂ. ೪: ಈ ಮಳೆಗಾಲಕ್ಕೆ ವೀರಾಜಪೇಟೆಯ ಮಲೆತಿರಿಕೆ ಬೆಟ್ಟ ಜನರಿಗೆ ವಾಸಯೋಗ್ಯವಲ್ಲ, ಈ ಬೆಟ್ಟದ ಕೆಲವು ಭಾಗಗಳು ಕುಸಿಯಲಿದೆ ಎಂದು ಭಾರತೀಯ ಭೂ ಮತ್ತು ಗಣಿ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ವರದಿ ನೀಡಿ ಬರೋಬ್ಬರಿ ನಾಲ್ಕು ವರ್ಷಗಳು ತುಂಬಿದೆ. ಬಹುಶಃ ಈ ನಾಲ್ಕು ವರ್ಷಗಳಲ್ಲಿ ಸರ್ಕಾರದ್ದೇ ಅಂಗ ಸಂಸ್ಥೆಯ ಅಧಿಕಾರಿಗಳು ನೀಡಿದ ವರದಿಯನ್ನು ಮೊದಮೊದಲು ಸರ್ಕಾರ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅನಿಸಿದರೂ ಅದು ಕೇವಲ ಆರಂಭ ಶೂರತ್ವದಂತೆ ಕಾಣಿಸುತ್ತಿದೆಯೇ ವಿನಃ ವಾಸ್ತವದಲ್ಲಿ ಇಲ್ಲಿನ ನಿವಾಸಿಗಳ ಜೀವ ಕಾಪಾಡುವ ಯಾವ ತ್ವರಿತ ಹೆಜ್ಜೆಗಳೂ ಸರ್ಕಾರ ಮಾಡಿದಂತೆ ಕಾಣುತ್ತಿಲ್ಲ. ಅದಕ್ಕೆ ಭೂ ಸರ್ವೇಕ್ಷಣಾ ಇಲಾಖೆಯ ವರದಿಗೆ ನಾಲ್ಕು ವರ್ಷಗಳು ತುಂಬುತ್ತಿರುವುದೇ ಇದಕ್ಕೆ ಸಾಕ್ಷಿ.
ಕಳೆದ ನಾಲ್ಕು ವರ್ಷಗಳಿಂದ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ನಿವಾಸಿಗಳ ಸ್ಥಿತಿ ವೀರಾಜಪೇಟೆ ಪಟ್ಟಣ ಪಂಚಾಯ್ತಿ ಹಾಗೂ ಜಿಲ್ಲಾಡಳಿತ ಜೋರು ಮಳೆ ಸುರಿವಾಗ ನೀಡುವ ಪ್ರಕಟಣೆಗಳಿಂದ ನಿರ್ಧಾರವಾಗುತ್ತಿದೆ. ಕೊಡಗಿನಲ್ಲಿ ೨೦೧೮ರಲ್ಲಿ ಮೊದಲ ಬಾರಿ ವಿಕೋಪ ಸಂಭವಿಸಿದಾಗ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ೨೦೦ ಮೀಟರ್ ಶೂರತ್ವದಂತೆ ಕಾಣಿಸುತ್ತಿದೆಯೇ ವಿನಃ ವಾಸ್ತವದಲ್ಲಿ ಇಲ್ಲಿನ ನಿವಾಸಿಗಳ ಜೀವ ಕಾಪಾಡುವ ಯಾವ ತ್ವರಿತ ಹೆಜ್ಜೆಗಳೂ ಸರ್ಕಾರ ಮಾಡಿದಂತೆ ಕಾಣುತ್ತಿಲ್ಲ. ಅದಕ್ಕೆ ಭೂ ಸರ್ವೇಕ್ಷಣಾ ಇಲಾಖೆಯ ವರದಿಗೆ ನಾಲ್ಕು ವರ್ಷಗಳು ತುಂಬುತ್ತಿರುವುದೇ ಇದಕ್ಕೆ ಸಾಕ್ಷಿ.
ಕಳೆದ ನಾಲ್ಕು ವರ್ಷಗಳಿಂದ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ನಿವಾಸಿಗಳ ಸ್ಥಿತಿ ವೀರಾಜಪೇಟೆ ಪಟ್ಟಣ ಪಂಚಾಯ್ತಿ ಹಾಗೂ ಜಿಲ್ಲಾಡಳಿತ ಜೋರು ಮಳೆ ಸುರಿವಾಗ ನೀಡುವ ಪ್ರಕಟಣೆಗಳಿಂದ ನಿರ್ಧಾರವಾಗುತ್ತಿದೆ. ಕೊಡಗಿನಲ್ಲಿ ೨೦೧೮ರಲ್ಲಿ ಮೊದಲ ಬಾರಿ ವಿಕೋಪ ಸಂಭವಿಸಿದಾಗ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ೨೦೦ ಮೀಟರ್ ಆ ಪ್ರಕಾರ ಈ ಬಿರುಕು ಅಪಾಯಕಾರಿಯಾಗಿದೆ. ಈ ಪ್ರದೇಶ ಜನವಸತಿಗೆ ಸುರಕ್ಷಿತವಾಗಿಲ್ಲ, ಅತಿಯಾದ ಮಳೆ ಬಂದಲ್ಲಿ ಬೆಟ್ಟ ಪ್ರದೇಶದಲ್ಲಿ ಮಡ್ ಫ್ಲೋ ಆಗುತ್ತಾ ಬೆಟ್ಟ ಜಾರುವ ಸಂಭವವಿದೆ ಎನ್ನುವ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಅಲ್ಲಿಂದ ಪ್ರತಿವರ್ಷ ಮಳೆಗಾಲ ಬಂದಾಗ ಹವಾಮಾನ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ಘೋಷಣೆಯಾದ ಕೂಡಲೇ ಜಿಲ್ಲಾಡಳಿತದ ಮೂಲಕ ಪ್ರಕಟಣೆಯೊಂದು ಮಾತ್ರ ತಪ್ಪದೇ ಬಂದು ಬಿಡುತ್ತದೆ. ಅದು ‘ರೆಡ್ ಅಲರ್ಟ್’, ‘ಯೆಲ್ಲೋ ಅಲರ್ಟ್’ ಯಾವ ಬಣ್ಣದ ಅಲರ್ಟ್ ಆದರೂ ಬೆಟ್ಟದ ನಿವಾಸಿಗಳ
(ಮೊದಲ ಪುಟದಿಂದ) ಕಣ್ಣಲ್ಲಿ ಕಾಣುವ ಅಲರ್ಟ್ ಮಾತ್ರ ಅವರ ಜೀವವನ್ನು ನೆನಪು ಮಾಡುತ್ತಿರುತ್ತದೆ.
ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸವಿರುವ ಈ ಪ್ರದೇಶದಲ್ಲಿ, ಎಲ್ಲರ ಬಳಿ ಜಿಲ್ಲಾಡಳಿತದ ಪ್ರಕಟಣೆ ನೋಡಲು ಸ್ಮಾರ್ಟ್ ಫೋನ್ ಇರಬೇಕಲ್ಲ, ಅವರ ಪ್ರಕಟಣೆ ತಲುಪದಿದ್ದರೂ ಸಂಜೆಯಾಗುತ್ತಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಪೊಲೀಸಿನವರು ಬಂದು ಸುರಿವ ಮಳೆಯಲ್ಲಿ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಬನ್ನಿ ಎಂದು ಕರೆಯುವುದು, ನಾವು ಬರೋದಿಲ್ಲ ಎಂದು ಹಠ ಮಾಡುವ ನಿವಾಸಿಗಳು ಇದು ಮಾಮೂಲು ಚಿತ್ರಣವಾಗಿ ಹೋಗಿದೆ. ನೆಹರು ನಗರ, ಅರಸುನಗರ, ಮಗ್ಗುಲ ಗ್ರಾಮದ ನಿವಾಸಿಗಳ ಪಾಲಿಗೆ ಮಳೆಗಾಲ ದುಸ್ವಪ್ನವಾಗಿ ನಾಲ್ಕು ವರ್ಷಗಳು ಕಳೆದಿವೆ.
ಬಹುಶಃ ಈ ಮಲೆತಿರಿಕೆ ಬೆಟ್ಟಕ್ಕೆ ಭೇಟಿ ನೀಡಿದಷ್ಟು ಸಚಿವರುಗಳು ಕೊಡಗಿನ ಬೇರೆ ಯಾವ ಬೆಟ್ಟಕ್ಕೂ ನೀಡಿರಲಾರರು. ಎಲ್ಲರೂ ಒಂದು ಸುತ್ತು ಬಂದರೆ, ಕೆಲವರು ಎರೆಡೆರೆಡು ಸುತ್ತು ಭೇಟಿ ನೀಡಿ ಹೋಗಿದ್ದಾರೆ. ಈ ವಿಚಾರ ಸದನದಲ್ಲಿಯೂ ಚರ್ಚೆ ಆಗಿದೆ. ಎಂ.ಎಲ್.ಸಿ ವೀಣಾ ಅಚ್ಚಯ್ಯ ಅವರು ಕಳೆದ ವರ್ಷ ‘ಶಕ್ತಿ’ಯಲ್ಲಿ ಪ್ರಕಟವಾಗಿದ್ದ, ‘ಈ ಮಳೆಗಾಲಕ್ಕೆ ಮಲೆತಿರಿಕೆ ನಿವಾಸಿಗಳಿಗೆ ಅಡಗಲು ತಾಣವೆಲ್ಲಿ?’ ಎನ್ನುವ ವರದಿಯನ್ನಿಟ್ಟು ಕೊಂಡು ವಿಧಾನ ಪರಿಷತ್‌ನಲ್ಲಿಯೂ ಪ್ರಶ್ನೆ ಮಾಡಿದ್ದಾರೆ. ಖುದ್ದು ಅಂದಿನ ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಅವರು , ಅತ್ಯಂತ ಅಪಾಯದಲ್ಲಿರುವ ಮಲೆತಿರಿಕೆ ಬೆಟ್ಟದ ೬೪ ಕುಟುಂಬಗಳಿಗೆ ಬಿಟ್ಟಂಗಾಲದ ಅಂಬಟ್ಟಿ ಗ್ರಾಮದ ಬಳಿ ವೀರಾಜಪೇಟೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಜಾಗವಿಲ್ಲದ ಕಾರಣ, ಖಾಸಗೀಯವರ ೭.೮೦ ಜಾಗ ಗುರುತು ಮಾಡಿದ್ದಾಗಿ ತಿಳಿಸಿದ್ದರು. ಆದಷ್ಟು ಬೇಗ ಖರೀದಿ ಪ್ರಕ್ರಿಯೆ ಮುಗಿಸಿ ನಿವೇಶನ ಕಟ್ಟಿಕೊಡಲಾಗುವುದು ಎಂದು ತಿಳಿಸಿದ್ದರು.
ಈ ಬಗ್ಗೆ ವೀರಾಜಪೇಟೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರ ಪ್ರತಿಕ್ರಿಯೆ ಬಯಸಿದಾಗ ಅಂಬಟ್ಟಿ ಗ್ರಾಮದ ಸರ್ವೇ ನಂಬರ್ ೯೦/೧ರಲ್ಲಿ ಇರುವ ಜಾಗ ವಾಸಕ್ಕೆ ಅನುಕೂಲಕರವಾಗಿದೆ. ಆದರೆ, ಯಾವುದೇ ಭೂಮಾಲೀಕರು ಸರ್ಕಾರಿ ದರಕ್ಕೆ ಈ ಜಾಗವನ್ನು ನೀಡಲು ಮುಂದಾಗುತ್ತಿಲ್ಲ. ಎಕರೆಗೆ ೧೨ ಲಕ್ಷ ರೂಪಾಯಿಯಂತೆ ಸರಕಾರ ಭೂ ಖರೀದಿ ಮಾಡಲು ಮುಂದಾಗಿದ್ದು ಇದಕ್ಕೆ ಯಾರೂ ಒಪ್ಪುತ್ತಿಲ್ಲ.
ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯವರು ಪರಿವೀಕ್ಷಣೆ ಮಾಡಿ ಭೂಕುಸಿತದ ಸಂಭವಿರುವ ಬಗ್ಗೆ ವರದಿ ನೀಡಿದ್ದು ಸದರಿ ಗ್ರಾಮದ ಜನರನ್ನು ಸ್ಥಳಾಂತರ ಮಾಡುವುದು ಅವಶ್ಯಕವಾಗಿರುವುದಾಗಿ ಮಳೆ ಹಾನಿ ಭಾದಿತರ ಪುನರ್ ವಸತಿ ಕಲ್ಪಿಸಲು ಇದೊಂದು ವಿಶೇಷ ಪ್ರಕರಣ ಅಂತ ಪರಿಗಣಿಸಬೇಕು, ಭೂಮಾಲೀಕರು ಕೇಳಿರುವ ಎಕರೆಗೆ ಇಪ್ಪತ್ತು ಲಕ್ಷದಂತೆ ೭.೮ ಎಕರೆಗೆ ೧,೫೬,೦೦,೦೦೦ ರೂಗಳನ್ನು ಬಿಡುಗಡೆಗಾಗಿ ಕೇಳಿಕೊಳ್ಳಲಾಗಿದೆ ಎಂದರು.
ಒಟ್ಟಾರೆಯಾಗಿ ೬೪ ಕುಟುಂಬಗಳ ಸುರಕ್ಷತೆಗೆ ಸಂಬAಧಪಟ್ಟ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ಅವರಿಗೆ ಪುನರ್ವಸತಿ ಕಲ್ಪಿಸುವುದು ಬಿಟ್ಟು ಸರ್ಕಾರದಿಂದ ಜಿಲ್ಲಾಧಿಕಾರಿಗೆ ಜಿಲ್ಲಾಧಿಕಾರಿಯಿಂದ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅಲ್ಲಿಂದ ಸರ್ಕಾರದ ವಸತಿ ಇಲಾಖೆಗೆ ಪ್ರಸ್ತಾವನೆ ಆರಾಮವಾಗಿ ಓಡಾಡುತ್ತಿದೆ. ಪ್ರಸ್ತಾವನೆ ಯಾರಿಗೆ ಕೊಡಬೇಕು? ಭೂಮಿ ಖರೀದಿ ಯಾರು ಮಾಡಬೇಕು ಎನ್ನುವುದೇ ಸರ್ಕಾರಿ ಆಡಳಿತ ಯಂತ್ರಕ್ಕೆ ಸ್ಪಷ್ಟತೆ ಇಲ್ಲದಂತೆ ಆಗಿದೆ.
ಬೆಟ್ಟ ಕುಸಿತದ ಭೀಕರತೆ ಕೊಡಗಿನ ಜನರಿಗೆ ಈಗ ಹೊಸದಾಗಿ ಕಾಣಬೇಕಿಲ್ಲ. ಸರಣಿ ಬೆಟ್ಟ ಕುಸಿತಗಳನ್ನು ಮೂರು ವರ್ಷ ನಿರಂತರವಾಗಿ ನೋಡಿದ್ದೇವೆ. ಕಳೆದುಕೊಂಡವರಿಗಾಗಿ ವಾರಾನುಗಟ್ಟಲೇ ಹುಡುಕಿದ್ದೇವೆ. ಮಲೆತಿರಿಕೆ ಬೆಟ್ಟದಲ್ಲಿ ಎರಡೂವರೆ ಸಾವಿರ ಜನಸಂಖ್ಯೆ ವಾಸವಿದೆ. ಅಷ್ಟು ಅಮೂಲ್ಯ ಬದುಕುಗಳ ಬಗ್ಗೆ ಸರ್ಕಾರಿ ಯಂತ್ರ ಆಲೋಚಿಸಬೇಕಿದೆ.
ಅಂದು ಸಾಲುಸಾಲಾಗಿ ಸರ್ಕಾರಿ ಎಸ್ಕಾರ್ಟಿನ ಜೊತೆಗೆ ಬಿರುಕುಬಿಟ್ಟ ಬೆಟ್ಟದ ಅಂದಚೆAದ ಸವಿದುಹೋದ ಸಚಿವರುಗಳಿಗೆ ಒಮ್ಮೆ ಈ ಬೆಟ್ಟದ ಬಗ್ಗೆ ಮತ್ತೆ ನೆನಪಾಗಲಿ. ಯಾವ ನಿಗಮಕ್ಕೆ ಹೋಗಬೇಕು ಯಾರು ಹಣ ಬಿಡುಗಡೆ ಮಾಡಬೇಕು ಎಂದು ತಿಳಿಯದೆ ದಿಕ್ಕೆಟ್ಟು ಓಡಾಡುತ್ತಿರುವ ಆ ಪ್ರಸ್ತಾವನೆಗೆ ದಿಕ್ಕು ತೋರಿಸಿ ಆದಷ್ಟು ಬೇಗ ಭೂಮಿ ಖರೀದಿಗೆ ಹಣ ಬಿಡುಗಡೆ ಮಾಡಿಸಲಿ. ಆ ಮೂಲಕ ಅಮೂಲ್ಯ ಜೀವಗಳ ರಕ್ಷಣೆಯಾಗಲಿ. ವಿಪತ್ತು ಸಂಭವಿಸಿದ ಮೇಲೆ ಮಮ್ಮಲ ಮರುಗುವುದಕ್ಕಿಂತ ಬದುಕಿರುವವರಿಗೆ ಇವರ ಮನಸ್ಸು ಮಿಡಿಯುವಂತಾಗಲಿ.
- ಉಷಾಪ್ರೀತಮ್