ಮಡಿಕೇರಿ, ಜೂ. ೫: ಜಿಲ್ಲೆಯಲ್ಲಿ ವಾಕ್‌ಶ್ರವಣ ಸಂಸ್ಥೆ ಆರಂಭವಾಗಿದ್ದು, ಅಧ್ಯಕ್ಷರಾಗಿ ಮುಂಡೋಟಿರ ಅಚ್ಚಯ್ಯ ಮತ್ತು ಕಾರ್ಯದರ್ಶಿಯಾಗಿ ಪಂಚಮ್ ಪೊನ್ನಣ್ಣ ಆಯ್ಕೆಯಾಗಿದ್ದಾರೆ.

ಸಂಸ್ಥೆಯನ್ನು ಪ್ರತಿಷ್ಠಿತ ಅಮೇರಿಕಾ ಶ್ರವಣ ಸಂಸ್ಥೆ ನಾಮಾಂಕಿತ ಅಧ್ಯಕ್ಷ ಡಾ. ಬೋಪಣ್ಣ ಅವರು ಉದ್ಘಾಟಿಸಿ ವಿಶ್ವದಲ್ಲಿ ಶ್ರವಣ ದೋಷಗಳಿಂದ ಬಳಲುತ್ತಿರುವವರ ಸಂಖ್ಯೆ ಏರುತ್ತಿದ್ದು, ಇದನ್ನು ಆರಂಭದಲ್ಲೇ ಗುರುತಿಸಿ ಶುಶ್ರೂಷೆ ನೀಡುವುದು ಅವಶ್ಯ ಎಂದರು. ೨೦೫೦ರ ಸಂದರ್ಭ ಪ್ರತಿ ನಾಲ್ವರಲ್ಲಿ ಒಬ್ಬರು ಶ್ರವಣ ದೋಷ ಹೊಂದುವ ಆತಂಕ ಇದ್ದು, ಇದನ್ನು ತಡೆಗಟ್ಟಲು ಜಾಗೃತಿ ಅವಶ್ಯ ಎಂದರು.

ಇAದು ಮಾನವನಿಗೆ ತಡೆದುಕೊಳ್ಳಲು ಇರುವ ಅರ್ಹತೆ ಮೀರಿ ಶಬ್ಧ ಮಾಲಿನ್ಯ ಆಗುತ್ತಿದ್ದು, ಇದು ಶ್ರವಣತ್ವ ಕುಗ್ಗಲು ಪ್ರಥಮ ಕಾರಣ ಎಂದರು. ಇಯರ್ ಫೋನ್ ಇತ್ಯಾದಿ ಬಳಸಿ ಶಬ್ಧವಿಕಾರಕ್ಕೆ ಒಳಗಾಗುತ್ತಿರುವ ಮಕ್ಕಳಲ್ಲಿ ಈ ದೋಷ ಇಮ್ಮಡಿ ಆಗಲಿದ್ದು, ಬಳಸುವ ಉಪಕರಣಗಳ ಕುರಿತು ಎಚ್ಚರ ಅಗತ್ಯ ಎಂದರು.

ಎ.ಓ.ಐ. ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರು ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ಕೊಡಗಿನ ವೈದ್ಯಕೀಯ ಸೇವಾ ಗುಣಮಟ್ಟ ಇತರ ಮುಖ್ಯ ನಗರಗಳಿಗೆ ಸಮನಾಗಲಿದೆ ಎಂದರು. ಇಂದು ದೇಶದಲ್ಲಿ ೬೩ ಮಿಲಿಯ ಮಂದಿ ಶ್ರವಣ ದೋಷದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆಯಿಂದ ಹೆಚ್ಚಿನ ದೋಷಗಳನ್ನು ನಿವಾರಿಸಬಹುದು ಎಂದರು.

ಇAಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಶ್ಯಾಂ ಅಪ್ಪಣ್ಣ ಮಾತನಾಡಿ ಜನತೆಗೆ ವೈದ್ಯಕೀಯ ಶುಶ್ರೂಷೆಗಳ ಕುರಿತು, ಅವಶ್ಯಕತೆಗಳ ಕುರಿತು ತಿಳಿಸುವ ಅವಶ್ಯಕತೆ ಇದೆ ಎಂದರು.

ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಆನಂದ್ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರವಣ ದೋಷ ನಿವಾರಣೆಗೆ ಕಟಿಬದ್ಧವಾಗಿದ್ದು, ಹಲವು ಯೋಜನೆ ಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಶ್ರವಣ ದೋಷವುಳ್ಳ ಚಿಕ್ಕ ಮಕ್ಕಳಿದ್ದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಶಸ್ತçಚಿಕಿತ್ಸೆ ನಡೆಸಲಾಗುವುದು ಎಂದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ ಶುಭಕೋರಿದರು. ಈ ಸಂದರ್ಭ ಡಾ. ಬೋಪಣ್ಣ ಹಾಗೂ ಡಾ. ಮೋಹನ್ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು.

ಅನುರೂಪ, ಕವನ ಬೋಪಣ್ಣ ಮತ್ತು ಕಪಾಲಿ ನಿರೂಪಣೆ ಮಾಡಿದರು. ಅಧ್ಯಾಪಕಿ ಪವಿತ್ರ ಪ್ರಾರ್ಥಿಸಿದರು. ಶ್ರವಣ ಸಂಸ್ಥೆ ಆರಂಭದ ನಿಮಿತ್ತ ಉಚಿತ ರಕ್ತ ಪರೀಕ್ಷೆ ಮತ್ತು ಕೋವಿಡ್ ಲಸಿಕೆ ನೀಡಲಾಯಿತು.