ಶ್ರೀಮಂಗಲ, ಜೂ. ೪: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಮೇ ೨೯ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಶ್ರೀಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲಿನ ಅಣ್ಣೀರ ಎಂ. ಲೋಕೇಶ್ ಎಂಬವರ ಮನೆಯಲ್ಲಿ ಮನೆಯವರು ಇಲ್ಲದಿದ್ದ ಸಂದರ್ಭ ನಗದು ಹಾಗೂ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು.

ಆರೋಪಿಯನ್ನು ೫ ದಿನದಲ್ಲಿ ಶ್ರೀಮಂಗಲ ಪೊಲೀಸರು ಕೇರಳ ರಾಜ್ಯದ

(ಮೊದಲ ಪುಟದಿಂದ) ಕಣ್ಣೂರಿನಲ್ಲಿ ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಕೇರಳ ಕಾಸರ ಗೋಡು ಜಿಲ್ಲೆಯ ಪೊಡಮಕಲ್ ಗ್ರಾಮದ ಸಜೇಶ್ ಕೃಷ್ಣ ಎಂಬಾತನನ್ನು ಪೊಲೀಸರು ಬಂದಿಸಿದ್ದು, ಈತ ಮೇ ೨೯ರಂದು ಪೊರಾಡು ಗ್ರಾಮದ ಅಣ್ಣೀರ ಎಂ. ಲೋಕೇಶ್ ಅವರು ಹಾಗೂ ಅವರ ಕುಟುಂಬ ತಮ್ಮ ಸಂಬAಧಿಕರ ಮನೆಗೆ ಹೋಗಿರುವುದನ್ನು ಅರಿತು ರಾತ್ರಿ ಮನೆಯ ಹಿಂಭಾಗಿಲು ಹಾಗೂ ಛಾವಣಿಯನ್ನು ಮುರಿದು ೧೪ ಗ್ರಾಂ.ನ ಚಿನ್ನ, ರೂ. ೪೮ ಸಾವಿರ ನಗದು ಮತ್ತು ಪೀಚೆಕತ್ತಿಯ ಬೆಳ್ಳಿಯ ಸರವನ್ನು ಕಳ್ಳತನ ಮಾಡಿದ್ದ. ಸುತ್ತಿಗೆ ಹಾಗೂ ರಾಡ್ ಬಳಸಿ ಕಬ್ಬಿಣದ ಬೀರುವನ್ನು ಮುರಿದು ಕಳವು ಮಾಡಿದ್ದ.

ಕಳವಿನ ನಂತರ ರಾತ್ರಿಯೇ ಗ್ರಾಮದಿಂದ ತೆರಳಿ ಮುಂಜಾನೆ ಬಸ್ಸ್ ಮೂಲಕ ಕೇರಳದ ಕಣ್ಣೂರಿಗೆ ತೆರಳಿ ಅಲ್ಲಿ ಆಭರಣವನ್ನು ಮಾರಾಟ ಮಾಡಿ ಹಾಗೂ ನಗದು ಬಳಸಿ

ರೂ. ೧೬ ಸಾವಿರದ ಮೊಬೈಲ್ ಹಾಗೂ ರೂ. ೫೦ ಸಾವಿರದ ಬೈಕ್ ಖರೀದಿಸಿದ್ದ. ಆರೋಪಿಯು ಬೆಳೆಗಾರ ಅಣ್ಣೀರ ಲೋಕೇಶ್ ಅವರ ಮನೆಯಲ್ಲಿ ಕಾರ್ಮಿಕನಾಗಿ ಮನೆಯ ಸಮೀಪದ ಲೈನ್ ಮನೆಯಲ್ಲಿ ವಾಸವಾಗಿದ್ದ. ಮನೆಯವರು ಕುಟುಂಬ ಸಮೇತ ಸಂಬAಧಿಕರ ಮನೆಗೆ ಹೋಗಿರುವುದನ್ನು ಅರಿತು ಕಳವು ಮಾಡಿರುವುದು ತನಿಖೆ ವೇಳೆ ದೃಢಪಟ್ಟಿದೆ.

ಕಳವು ಮಾಡಿ ನಾಪತ್ತೆಯಾಗಿದ್ದ ಕಾರ್ಮಿಕ ಸಜೇಶ್ ಕೃಷ್ಣ ಅವರ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೆಳೆಗಾರ ಲೋಕೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಶ್ರೀಮಂಗಲ ಪೊಲೀಸರೊಂದಿಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಅಗತ್ಯ ಸಾಕ್ಷಾ÷್ಯಧಾರ ಕಲೆ ಹಾಕಿದ್ದರು. ಪೊಲೀಸ್ ಶ್ವಾನವು ಆರೋಪಿ ತಂಗಿದ್ದ ಲೈನ್ ಮನೆಗೆ ನುಗ್ಗಿ, ಆರೋಪಿ ಬದಲಿಸಿದ್ದ ಶರ್ಟನ್ನು ಹೊರತಂದಿತ್ತು ಹಾಗೂ ಆರೋಪಿ ತೆರಳಿದ್ದ ರಸ್ತೆಯ ಕುರುಹು ನೀಡಿತ್ತು.

ಆರೋಪಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಆರೋಪಿಯು ಕಳ್ಳತನ ಹಣ ಹಾಗೂ ಆಭರಣ ಮಾರಿ ಖರೀದಿಸಿದ್ದ ಬೈಕ್, ಖರ್ಚಾಗದೇ ಉಳಿದಿದ್ದ ನಗದು ಹಣ ಮತ್ತು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕೇವಲ ೫ ದಿನದಲ್ಲಿ ಆರೋಪಿಯನ್ನು ಕೇರಳಕ್ಕೆ ತೆರಳಿ ಬಂದಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕಾರ್ಯಾಚರಣೆ ತಂಡದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ ಅವರ ನಿರ್ದೇಶನದಂತೆ ಡಿವೈಎಸ್ಪಿ ನಿರಂಜನ್ ರಾವ್ ಅರಸ್ ಮತ್ತು ಕುಟ್ಟ÷ ವೃತ್ತ ನಿರೀಕ್ಷಕ ಮಂಜಪ್ಪ ಅವರ ಮಾರ್ಗದರ್ಶನದಲ್ಲಿ ಶ್ರೀಮಂಗಲ ಉಪನಿರೀಕ್ಷಕ ಕೆ.ಆರ್. ರವಿಶಂಕರ್ ಎಎಸ್‌ಐ ಸಾಲ್ಡಾನಾ, ಸಿಬ್ಬಂದಿಗಳಾದ ಬಿ.ಟಿ. ಮಂಜುನಾಥ್, ಖಾಲಿದ್, ಶಿವು, ರಘು ಸುಬ್ರಮಣಿ, ಚಂದ್ರಶೇಖರ್, ಚಾಲಕ ರಾಮಲಿಂಗ, ರಾಜೇಶ್ ಅವರು ಪಾಲ್ಗೊಂಡಿದ್ದರು.