ಕೂಡಿಗೆ, ಜೂ. ೨: ಇಲ್ಲಿಗೆ ಸಮೀಪ ಯಡವನಾಡು ಗ್ರಾಮದಲ್ಲಿರುವ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾ ಲೋಕಾಯುಕ್ತ ನಿರೀಕ್ಷಕ ಲೋಕೇಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಂತರ ಆಶ್ರಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ಭೋಜನ ಸವಿದರು. ನಂತರ ಶಾಲೆಯ ಗ್ರಂಥಾಲಯ ಮತ್ತು ವಿದ್ಯಾರ್ಥಿಗಳ ಶೌಚಾಲಯದ ಕೊಠಡಿಯನ್ನು ಪರಿಶೀಲನೆ ಮಾಡಿದರು. ವಿದ್ಯಾರ್ಥಿಗಳಿಂದ ನೀರಿನ ಸಮಸ್ಯೆ ವಿಷಯವನ್ನು ತಿಳಿದು ಸಂಬAಧಿಸಿದ ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಶಾಲೆಗೆ ನೀರಿನ ವ್ಯವಸ್ಥೆ ಸರಿಪಡಿಸುವಂತೆ ದೂರವಾಣಿ ಮೂಲಕ ಸೂಚನೆ ನೀಡಿದರು.

ಶಾಲೆಯ ಸಮಸ್ಯೆಗಳು ಇದ್ದರೆ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭ ಲೋಕಾಯುಕ್ತ ಸಿಬ್ಬಂದಿ ಶಶಿಕುಮಾರ್, ಶಾಲೆಯ ಮುಖ್ಯೋಪಾಧ್ಯಾಯ ರಜಿನಿಕಾಂತ್, ಸಹ ಶಿಕ್ಷಕರಾದ ರೇಖಾ, ಹೆಚ್.ಎಸ್. ಕಲಾವತಿ, ಎಂ.ಎA. ಪ್ರಿಯಾ, ವಿದ್ಯಾ, ಮಂಜುಳ ಎಸ್.ಜೆ. ಚಂದ್ರಕಲಾ ಶೀಲಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.