ಮಡಿಕೇರಿ, ಜೂ. ೨ : ರಾಜ್ಯದಲ್ಲಿ ಕೋವಿಡ್ ಲಸಿಕಾಕರಣದಲ್ಲಿ ೧೨ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ೧೨ ವರ್ಷಕ್ಕಿಂತ ಮೇಲ್ಪಟ್ಟ ಫಲಾನುಭವಿಗಳ ಗುರಿ ೪,೩೯,೩೯೯ ಹೊಂದಿದ್ದು, ಇದರಲ್ಲಿ ಮೊದಲ ಡೋಸ್‌ನ್ನು ಒಟ್ಟು ೪,೫೧,೧೬೨ ಫಲಾನುಭವಿಗಳಿಗೆ ನೀಡಲಾಗಿದ್ದು, ಶೇ.೧೦೨.೬೮ ಪ್ರಗತಿ ಸಾಧಿಸಲಾಗಿದೆ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಒಟ್ಟು ೪,೪೩,೪೪೮ ಫಲಾನುಭವಿಗಳಿಗೆ ನೀಡಲಾಗಿದ್ದು, ಶೇ.೯೮.೨೯ ಪ್ರಗತಿ ಸಾಧಿಸಲಾಗಿದೆ.
೧೨ ರಿಂದ ೧೪ ವರ್ಷದ ವಯೋಮಾನದ ಒಟ್ಟು ೧೬,೨೮೪ ಮಕ್ಕಳ ಗುರಿ ಹೊಂದಿದ್ದು, ಒಟ್ಟು ೧೫,೪೩೩ ಫಲಾನುಭವಿಗಳಿಗೆ ಮೊದಲನೇ ಡೋಸ್ ನೀಡಲಾಗಿದ್ದು, ಶೇ.೯೪.೭೭ ಪ್ರಗತಿ ಸಾಧಿಸಲಾಗಿದೆ. ಎರಡನೇ ಡೋಸ್‌ನ್ನು ಒಟ್ಟು ೮,೫೫೩ ಫಲಾನುಭವಿಗಳಿಗೆ ನೀಡಲಾಗಿದ್ದು, ಶೇ.೫೫.೪೨ ಪ್ರಗತಿ ಸಾಧಿಸಲಾಗಿದೆ. ಮೊದಲ ಎರಡು ಡೋಸ್ ಕೋವಿಡ್-೧೯ ಲಸಿಕೆ ಪಡೆದು ೯ ತಿಂಗಳು ಪೂರೈಸಿ ೧೮ ವರ್ಷಕ್ಕಿಂತ ಮೇಲ್ಪಟ್ಟ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ (Pಡಿeಛಿಚಿuಣioಟಿ ಆose) ಗುರಿ ಒಟ್ಟು ೧,೧೮,೯೨೫ ಹೊಂದಿದ್ದು, ಇದರಲ್ಲಿ ೨೬,೦೮೧ ಫಲಾನುಭವಿಗಳಿಗೆ ನೀಡಲಾಗಿದ್ದು, ಶೇ.೨೧.೯೩ ಪ್ರಗತಿ ಸಾಧಿಸಲಾಗಿದೆ.
೧೨-೧೪ ವರ್ಷ ವಯೋಮಾನದ ಮಕ್ಕಳ ಕೋರ್ಬಿವ್ಯಾಕ್ಸ್ ಲಸಿಕಾಕರಣದ ಪ್ರಗತಿಯು ಹಾಗೂ ೧೮ ವರ್ಷಕ್ಕಿಂತ ಮೇಲ್ಪಟ್ಟ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ (Pಡಿeಛಿಚಿuಣioಟಿ ಆose) ಕುಂಠಿತವಾಗಿರುವ ಕಾರಣ ರಾಜ್ಯ ಸರ್ಕಾರದ ಆದೇಶದಂತೆ ಪ್ರತೀ ವಾರದ ಬುಧವಾರದಂದು ಲಸಿಕಾ ಮೇಳವನ್ನು ಹಮ್ಮಿಕೊಂಡು ಪ್ರಗತಿ ಸಾಧಿಸಲು ತಿಳಿಸಲಾಗಿದೆ. ಅದರಂತೆ ತಾ, ೧ ರಂದು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-೧೯ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೇಳದಲ್ಲಿ ಒಟ್ಟು ೫,೧೦೯ ಫಲಾನುಭವಿಗಳಿಗೆ ಲಸಿಕಾಕರಣ ನಡೆಸಲಾಗಿದೆ.
ತಾ. ೮ ರಂದು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಲಸಿಕಾಕರಣಕ್ಕೆ ಬಾಕಿ ಇರುವ ಎಲ್ಲಾ ಫಲಾನುಭವಿಗಳು ಕೋವಿಡ್ ಲಸಿಕಾ ಮೇಳದ ಸದುಪಯೋಗ ಪಡೆದುಕೊಂಡು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.