ಕೂಡಿಗೆ, ಜೂ. ೨: ಕೂಡಿಗೆಯಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಕಾರ್ಯಾಲಯದ ವತಿಯಿಂದ ಕ್ರೀಡಾ ಶಾಲೆಯ ಆಡಳಿತ ಮತ್ತು ತರಬೇತಿಯ ಮೇಲ್ವಿಚಾರಣೆಯನ್ನು ಅನುಷ್ಠಾನಗೊಳಿಸಲು ಆಡಳಿತಾಧಿಕಾರಿಯಾಗಿ ಎನ್.ಡಿ. ಜಯರಾಮ್ ಅವರನ್ನು ನೇಮಕ ಮಾಡಲಾಗಿದೆ.
ಕ್ರೀಡಾ ಶಾಲೆಯಲ್ಲಿ ಅಥ್ಲೆಟಿಕ್ಸ್, ಹಾಕಿ ಮತ್ತು ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡುವ ಬಗ್ಗೆ, ಪ್ರೌಢಶಾಲೆ, ಮತ್ತು ಪದವಿ ಪೂರ್ವ ತರಗತಿಗಳಿಗೆ ಬಾಲಕ, ಬಾಲಕಿಯರ ಕ್ರೀಡಾಪಟುಗಳನ್ನು ದಾಖಲಿಸಿಕೊಳ್ಳುವ ಅವಕಾಶವನ್ನು ಕಲ್ಪಿಸುವ ಹಾಗೂ ಕ್ರೀಡಾಪಟುಗಳ ಯೋಗಕ್ಷೇಮ, ತರಬೇತಿ, ಕ್ರೀಡಾಶಾಲೆಯ ಆಡಳಿತ, ಸಿಬ್ಬಂದಿಗಳ ನಿರ್ವಹಣೆ, ಶಾಲೆ ಮೇಲ್ವಿಚಾರಣೆ ನೋಡಿಕೊಳ್ಳಲು ಆಡಳಿತಾತ್ಮಕ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ಹಾಸನ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಜಯರಾಮ್ ಅವರನ್ನು ನೇಮಕಗೊಳಿಸಲಾಗಿದೆ.