ಸುಂಟಿಕೊಪ್ಪ, ಜೂ. ೨: ಸಾಮಾನ್ಯವಾಗಿ ಮನೆಯವರ ಮತ್ತು ವಧು-ವರರ ಒಪ್ಪಿಗೆ ಮೇರೆಗೆ ವಿವಾಹ ನಿಶ್ಚಯವಾಗಿರುತ್ತದೆ. ಅದೇ ರೀತಿ ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದಿರುತ್ತವೆ. ಇನ್ನೇನು ‘ಮಾಂಗಲ್ಯ ತಂತು ನಾನೇನಾ…..’ ಎಂಬ ಗಟ್ಟಿಮೇಳದೊಂದಿಗೆ ತಾಳಿಕಟ್ಟಬೇಕೆನ್ನುವಷ್ಟರಲ್ಲಿ ವಧು ಅಥವಾ ವರ ಏನೇನೋ ನಾಟಕ ಮಾಡಿ ತನಗೆ ಈ ಮದುವೆ ಇಷ್ಟ ಇಲ್ಲ, ಮದುವೆ ಬೇಡ ಎಂದು ಪಟ್ಟು ಹಿಡಿಯುತ್ತಾರೆ. ಅಲ್ಲಿಗೆ ವಿವಾಹ ಪ್ರಹಸನ ದುಖಾಂತ್ಯವಾಗಿರುತ್ತದೆ.
ಇಂತಹ ಪ್ರಮೇಯಗಳು ಅಪರೂಪಕ್ಕೊಮ್ಮೆ ನಡೆಯುತ್ತಿರುವುದು ಕಣ್ಣಮುಂದಿದೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ಆದರೆ ಇಲ್ಲಿ ಮದುವೆ ನಿಂತಿಲ್ಲ. ವಧು ಮದುವೆಯನ್ನು ನಿರಾಕರಿಸಿದರೂ, ನಿಗದಿಪಡಿಸಿದ ದಿನದ ಅದೇ ಮುಹೂರ್ತದಲ್ಲಿ ಬೇರೆ ಯುವತಿಯೊಂದಿಗೆ ಪಾಣಿ ಗ್ರಹಣ ನೆರವೇರಿದೆ. ಆ ಮೂಲಕ ಈ ಸಪ್ತಪದಿ ಸುಖಾಂತ್ಯ ಕಂಡಿದೆ.
ಸುAಟಿಕೊಪ್ಪ ಬಳಿಯ ತೋಟವೊಂದರ ಯುವಕನ ಮದುವೆ ಮಡಿಕೇರಿಯ ಯುವತಿಯೊಂದಿಗೆ ಪೂರ್ವ ನಿಶ್ಚಯದಂತೆ ತಾ. ೧ರಂದು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಮತ್ತು ತಾ. ೫ ರಂದು ಸುಂಟಿಕೊಪ್ಪದಲ್ಲಿ ಆರತಕ್ಷತೆಯನ್ನು ನಿಗದಿಪಡಿಸಲಾಗಿತ್ತು. ಅದೇಕೋ ಯುವತಿ ಮದುವೆಗೆ ಎರಡು ದಿವಸ ಇರಬೇಕೆನ್ನುವಷ್ಟರಲ್ಲಿ ತನಗೆ ಈ ಮದುವೆ ಬೇಡವೇ ಬೇಡ ಎಂದು ಪಟ್ಟು ಹಿಡಿದು ಕುಳಿತುಬಿಟ್ಟಿದ್ದಳು. ಬದಲಾದ ಆಕೆಯ ದಿಢೀರ್ ನಿರ್ಧಾರದಿಂದಾಗಿ ಅಗ್ನಿಸಾಕ್ಷಿಯಾಗಿ ನಡೆಯುವ ಮದುವೆಯ ಸಂಭ್ರಮಾಚರಣೆಯಲ್ಲಿದ್ದವರು ಬೆಂಕಿಯಲ್ಲಿ ಬಿದ್ದಂತಾದರು. ಎಷ್ಟೇ ತಿಳಿಹೇಳಿದರೂ ಯುವತಿ ತನ್ನ ಹಠಕ್ಕೆ ಗಂಟು ಬಿದ್ದು ಮದುವೆಗೆ ಸುತಾರಾಂ ಒಪ್ಪಲಿಲ್ಲ. ಅತ್ತ ಈಕೆ ಮನಸು ಬದಲಿಸದೇ ಮದುವೆಗೆ ಕೈಕೊಟ್ಟ ಕಾರಣ ಕನ್ಯಾಪಿತೃರು ತಲೆ ಮೇಲೆ ಕೈಯಿಟ್ಟು ಕೊಳ್ಳುವಂತಾದರೆ ಇತ್ತ ಬೀಗರು ಕೂಡ ವಧುವಿನ ನಿರ್ಧಾರದಿಂದ ಗರಬಡಿದಂತಾಗಿದ್ದರು. ನಂತರ ಪ್ರಕರಣ ಸುಂಟಿಕೊಪ್ಪ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಅಲ್ಲಿಯೂ ಕೂಡ ಯುವತಿ ತನ್ನ
(ಮೊದಲ ಪುಟದಿಂದ) ಛಲಕ್ಕೆ ಜೋತುಬಿದ್ದು, ಮದುವೆಗೆ ಒಪ್ಪದ ಕಾರಣ ಹುಡುಗನ ಕಡೆಯವರು ಮದುವೆ ಕಾರ್ಯಕ್ಕೆ ವ್ಯಯಿಸಿದ್ದ ಅಂದಾಜು ರೂ. ೮ ಲಕ್ಷ ಹಣವನ್ನು ಹೆಣ್ಣಿನ ಕಡೆಯವರು ಹಿಂತಿರುಗಿಸಬೇಕೆನ್ನುವ ಒಪ್ಪಂದ ಎರಡೂ ಕಡೆಯವರ ನಡುವೆ ಏರ್ಪಟ್ಟಿತು.
ಬದಲಾದ ವಧು : ಮದುವೆ ನಿರಾಕರಿಸಿದ ಯುವತಿಯ ನಿರ್ಧಾರಕ್ಕೆ ಸಡ್ಡು ಹೊಡೆದ ವರನ ಮನೆಯವರು, ತಮಿಳುನಾಡಿನಲ್ಲಿರುವ ಸಂಬAಧಿಕರೊಬ್ಬರ ಪುತ್ರಿಯನ್ನು ಮದುವೆಗೆ ಒಪ್ಪಿಸುವಲ್ಲಿ ಯಶಸ್ವಿಯಾದರು. ಅದೇ ರೀತಿ ಈ ಹಿಂದೆ ತಾ. ೧ರಂದು ನಿಗದಿಯಾಗಿದ್ದಂತೆ ಓಂಕಾರೇಶ್ವರ ದೇವಾಲಯದಲ್ಲಿ ಅದೇ ಮುಹೂರ್ತದಲ್ಲಿ ಶಾಸ್ತೊçÃಕ್ತವಾಗಿ ವಿವಾಹ ನೆರವೇರಿದೆ. ಮುಂದಿನ ಭಾನುವಾರ ಆರತಕ್ಷತೆ ಕೂಡ ನಡೆಯಲಿದೆ.