ವಿಶೇಷ ವರದಿ : ಅಂಚೆಮನೆ ಸುಧಿ -ಸಿದ್ದಾಪುರ ಜೂ. ೨ : ವಾಲ್ನೂರು- ತ್ಯಾಗತ್ತೂರು ಪಂಚಾಯಿತಿಗೆ ಹೊಸ ಕಂಟಕವೊAದು ಎದುರಾಗಿದೆ. ಪಂಚಾಯ್ತಿ ಕಚೇರಿ ಸೇರಿದಂತೆ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಟ್ಟಡಗಳಿರುವ ಜಮೀನು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು ಎನ್ನುವ ಮಾಹಿತಿ ಇದೀಗ ಬಹಿರಂಗ ಗೊಂಡಿದೆ.

೧೯೬೫ ಅಕ್ಟೋಬರ್ ೬ ರಂದು ಉದ್ಘಾಟನೆಗೊಂಡ ಪಂಚಾಯಿತಿ ಕಚೇರಿ ಇರುವ ಪ್ರದೇಶ ಪಂಚಾಯ್ತಿ ಹೆಸರಿನಲ್ಲಿ ಇಲ್ಲ ಎನ್ನುವುದು ಸರ್ವೆಯ ಮೂಲಕ ತಿಳಿದು ಬಂದಿದೆ. ಪಂಚಾಯ್ತಿ ಹೆಸರಿಗೆ ಇಲ್ಲಿಯವರೆಗೆ ದಾಖಲೆ ಮಾಡಿಕೊಳ್ಳದೆ ತನ್ನದೇ ಜಮೀನು ಎಂಬ ಭ್ರಮೆಯಡಿ ವಿವಿಧ ಕಟ್ಟಡಗಳನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಶಾಸಕರು ನೂತನ ಕಚೇರಿ ಕಟ್ಟಡಕ್ಕೂ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಗೊAಡಿದೆ.

ಹಳೆಯ ಕಚೇರಿ, ನೂತನ ಡಿಜಿಟಲ್ ಗ್ರಂಥಾಲಯ, ಅಂಚೆ ಕಚೇರಿ, ಇತ್ತೀಚೆಗೆ ಉದ್ಘಾಟನೆಗೊಂಡ ಕಸ ವಿಲೇವಾರಿ ಘಟಕದ ಕಟ್ಟಡಗಳು ಇಲ್ಲಿವೆ. ಇವುಗಳಿರುವ ಭೂಮಿ ಪಂಚಾಯಿತಿಗೆ ಸೇರಿಲ್ಲ ಎನ್ನುವ ಮಾಹಿತಿ ಖಾಸಗಿ ಸರ್ವೆಯಿಂದ ತಿಳಿದು ಬಂದಿದೆ.

ಸರ್ವೆ ಸಂಖ್ಯೆ ೧೧೯/೧ ರ ಜಾಗದ ಆರ್‌ಟಿಸಿ ಬೀರಯ್ಯ, ಲೀಲಾವತಿ, ಬೋಜಮ್ಮ, ಪ್ರೇಮಕುಮಾರಿ ಹಾಗೂ ಮಂಜುಳ ಅವರ ಹೆಸರಿನಲ್ಲಿದೆ. ಸ.ಸಂ ೧೨೨ ರ ಜಾಗ ಬಸವೇಶ್ವರ ದೇವರ ಜಾಗ ಎಂದು ಆರ್‌ಟಿಸಿ ಇದೆ. ಈ ಮಾಹಿತಿಯಿಂದ ಗ್ರಾ.ಪಂ ದಿಗ್ಭçಮೆ ವ್ಯಕ್ತಪಡಿಸಿದ್ದರೆ,

ಖಾಸಗಿ ವ್ಯಕ್ತಿಗಳು ಪಂಚಾಯಿತಿ ಅಧೀನದಲ್ಲಿರುವ ಜಾಗ ನಮಗೆ ಸೇರಬೇಕೆಂದು

(ಮೊದಲ ಪುಟದಿಂದ) ಜಿಲ್ಲಾಡಳಿತ ಹಾಗೂ ಜಿ.ಪಂ ಮೊರೆ ಹೋಗಿದ್ದಾರೆ. ಅಧಿಕಾರಿಗಳು ಇಷ್ಟು ದಿನ ಏನು ಮಾಡುತ್ತಿದ್ದಿರಿ ಎಂದು ಕೇಳಿದ ಪ್ರಶ್ನೆಗೆ ಸರ್ವೆ ನಡೆಸಿದ ನಂತರ ಜಾಗ ನಮಗೆ ಸೇರಿದ್ದು ಎನ್ನುವ ಸತ್ಯ ತಿಳಿದಿದೆ ಎಂದು ಖಾಸಗಿ ವ್ಯಕ್ತಿಗಳು ಉತ್ತರಿಸಿದ್ದಾರೆ.

ಇದೀಗ ಗ್ರಾ.ಪಂ.ಗೆ ಭೂ ಕಂಟಕ ಎದುರಾಗಿದ್ದು, ಖಾಸಗಿ ಸರ್ವೆಯ ಪ್ರಕಾರ ಹೊರಬಿದ್ದ ಮಾಹಿತಿಯೇ ನಿಜವಾಗಿದ್ದರೆ ೧೯೬೫ ರಿಂದ ತನ್ನ ಅಧೀನದಲ್ಲಿದ್ದ ಜಮೀನನ್ನು ಕಳೆದುಕೊಳ್ಳಬೇಕಾಗಬಹುದು. ಕಟ್ಟಡಗಳ ನಿರ್ಮಾಣಕ್ಕೆ ಖರ್ಚು ಮಾಡಿದ ಕೋಟ್ಯಂತರ ಹಣ ನೀರು ಪಾಲಾಗಬಹುದು. ತಕ್ಷಣ ಪಂಚಾಯ್ತಿ ಎಚ್ಚೆತ್ತುಕೊಂಡು ಕಾನೂನು ತೊಡಕು ನಿವಾರಿಸಿ ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಂಡರೆ ಭೂಮಿಯನ್ನು ಉಳಿಸಿಕೊಳ್ಳಬಹುದಾಗಿದೆ. ತಪ್ಪಿದಲ್ಲಿ ಪಂಚಾಯ್ತಿಯೇ ಬೀದಿಗೆ ಬರುವ ಸಾಧ್ಯತೆಯಿದೆ.

೧೯೬೫ ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಿದ್ದಯ್ಯ ಪುರಾಣಿಕ್ ಅವರಿಂದ ಉದ್ಘಾಟನೆಗೊಂಡ ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ಕಟ್ಟಡ ಇಲ್ಲಿಯವರೆಗೆ ೨೦ ಅಧ್ಯಕ್ಷರ ನೇತೃತ್ವದ ಆಡಳಿತ ಮಂಡಳಿಯನ್ನು ಕಂಡಿದೆ.