ಮಡಿಕೇರಿ, ಜೂ. ೨: ಎಐಸಿಸಿ ವಕ್ತಾರ ಹಾಗೂ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಕಾಂಗ್ರೆಸ್‌ನಲ್ಲಿ ದೆಹಲಿ ಮಟ್ಟದಿಂದಲೇ ಪ್ರಭಾವ ಹೊಂದಿದ್ದ ಬ್ರಿಜೇಶ್ ಕಾಳಪ್ಪ ಅವರು ಪಕ್ಷದಲ್ಲಿ ಮುಂದುವರಿಯಬೇಕಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದ್ದಾರೆ.

ಬ್ರಿಜೇಶ್ ರಾಜೀನಾಮ ಕುರಿತಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು ಇದು ಅವರ ವೈಯಕ್ತಿಕವಾದ ನಿರ್ಧಾರವಾಗಿದೆ. ಪಕ್ಷ ಅವರಿಗೆ ಹಲವು ಅವಕಾಶಗಳನ್ನು ನೀಡಿತ್ತು. ಯಾವ ಉದ್ದೇಶದಿಂದ ರಾಜೀನಾಮೆ ನೀಡಿದ್ದಾರೆ ಎಂಬದು ಗೊತ್ತಿಲ್ಲ ಎಂದಿರುವ ಧರ್ಮಜ ಉತ್ತಪ್ಪ ಅವರು ರಾಜೀನಾಮೆ ಬದಲು ಬ್ರಿಜೇಶ್‌ಕಾಳಪ್ಪ ಅವರು ಪಕ್ಷದಲ್ಲಿ ಮುಂದುವರಿದಿದ್ದರೆ ಉತ್ತಮವಾಗಿತ್ತು ಎಂಬದು ತಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.