ಕೂಡಿಗೆ, ಜೂ. ೨ : ಕೂಡಿಗೆಯಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ವತಿಯಿಂದ ರಾಷ್ಟಿçÃಯ ಜಾನುವಾರು ಅಭಿಯಾನ ೨೦೨೧-೨೨ ನೇ ಸಾಲಿನ ಯೋಜನೆಯ ಅಡಿಯಲ್ಲಿ ಎರಡು ದಿನಗಳ ಪಶುಪಾಲನೆಗೆ ಸಂಬAಧಿಸಿದ ತರಬೇತಿ ಕಾರ್ಯಾಗಾರವು ಕೂಡಿಗೆ ಜಿಲ್ಲಾ ಕೋಳಿ ಸಾಕಾಣಿಕಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಜಾನುವಾರು ತಳಿ ಸಂವರ್ಧನ ಕೇಂದ್ರದ ಉಪ ನಿರ್ದೇಶಕ ಡಾ,ಕೃಷ್ಣ ಮೂರ್ತಿ ನೆರವೇರಿಸಿದರು. ನಂತರ ಮಾತಾಡುತ್ತಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ವತಿಯಿಂದ ಎನ್‌ಎಂಎA ಯೋಜನೆಯ ಅಡಿಯಲ್ಲಿ ಸುಧಾರಿತ ಪಶುಪಾಲನೆ ಮತ್ತು ಹೈನುಗಾರಿಕೆಯ ನೂತನ ಪದ್ಧತಿಗಳ ಬಗ್ಗೆ ರೈತರಿಗೆ ಹೈನುಗಾರಿಕೆಯಲ್ಲಿ ಉನ್ನತವಾದ ತರಬೇತಿಯನ್ನು ಪಡೆದ ಪಶುವೈದ್ಯರಿಂದ ತರಬೇತಿಯನ್ನು ನೀಡಲಾಗುತ್ತಿದೆ.ಈ ತರಬೇತಿಯಲ್ಲಿ ಹೈನುಗಾರಿಕೆಯ ವೈಜ್ಞಾನಿಕ ಹೊಸ ಆವಿಷ್ಕಾರ ಪದ್ಧತಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ವಿವಿಧ ವೈದ್ಯರು ನೀಡುವ ಮೂಲಕ ರೈತರು ತರಬೇತಿಯನ್ನು ಪಡೆದು ಸ್ವ ಉದ್ಯೋಗದ ಮೂಲಕ ಹೈನುಗಾರಿಕೆಯನ್ನು ಅಭಿವೃದ್ಧಿ ನಡೆಸಿಕೊಳ್ಳುವಂತೆ ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ಇಲಾಖೆಯ ಪಶುಸಂಗೋಪನಾ ಕೃಪಿಡಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಿಶ್ರ ತಳಿಗಳ ಹಸುಗಳ ಸಾಕಾಣಿಕೆ, ಕೋಳಿ, ಮೇಕೆ, ಕುರಿಗಳ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೊಲಗಳ ಸಾಕಾಣಿಕೆ ಸೇರಿದಂತೆ ಅವುಗಳಿಗೆ ಬೇಕಾಗುವ ಮೇವಿನ ಬೆಳೆಗಳ ಬಗ್ಗೆ ಹೊಸ ಹೊಸ ಆವಿಷ್ಕಾರಗಳ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಪಶುವೈದ್ಯರು ಎರಡು ದಿನಗಳ ಕಾಲ ತರಬೇತಿಯ ಸಮಯದಲ್ಲಿ ನೀಡಿದರು.

ಈ ಸಂದರ್ಭದಲ್ಲಿ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ, ಕೃಷ್ಣ ಮೂರ್ತಿ, ಜಿಲ್ಲಾ ಕೋಳಿ ಸಾಕಾಣಿಕೆ ಕೇಂದ್ರದ ಸಹಾಯಕ ನಿರ್ದೇಶಕ ಡಾ, ನಾಗರಾಜ್, ಮುಖ್ಯ ಪಶುವೈದ್ಯಾಧಿಕಾರಿ. ಡಾ. ಶೈಲಜಾ, ಸೇರಿದಂತೆ ಜಿಲ್ಲೆಯ ಹೈನುಗಾರಿಕೆಯಲ್ಲಿ ಉನ್ನತ ವ್ಯಾಸಂಗ ಪಡೆದ ವಿವಿಧ ಪಶು ವೈದ್ಯರು ಹಾಜರಿದ್ದರು.