ಮಡಿಕೇರಿ, ಜೂ. ೧: ಭಾರತೀಯ ಸೇನೆಯಲ್ಲಿ ನೌಕಾಪಡೆಯಲ್ಲಿ ರಿಯರ್ ಅಡ್ಮಿರಲ್ ಹಾಗೂ ಅಡ್ಮಿರಲ್ ಸೂಪರಿಂಟೆAಡೆAಟ್ ನೇವಲ್ ಡಾಕ್‌ಯಾರ್ಡ್ ವಿಶಾಖಪಟ್ಟಣಂ ಆಗಿರುವ ಕೊಡಗಿನವರಾದ ಐಚೆಟ್ಟಿರ ಬಿ. ಉತ್ತಯ್ಯ ಅವರಿಗೆ ಅತಿ ವಿಶಿಷ್ಟ ಸೇವಾ ಮೆಡಲ್ (ಎ.ವಿ.ಎಸ್.ಎಂ.) ಪ್ರದಾನ ಮಾಡಲಾಯಿತು. ರಾಷ್ಟçಪತಿ ಭವನದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಉತ್ತಯ್ಯ ಅವರು ಈ ಪದಕವನ್ನು ರಕ್ಷಣಾ ಪಡೆÀಗಳ ಮುಖ್ಯಸ್ಥರಾದ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದರು. ವಿಶಾಖಪಟ್ಟಣ ನೌಕಾ ನೆಲೆಯಲ್ಲಿ ಕರ್ತವ್ಯದಲ್ಲಿರುವ ಉತ್ತಯ್ಯ ಅವರಿಗೆ ಈ ಹಿಂದೆ ವಿಶಿಷ್ಟ ಸೇವಾ ಮೆಡಲ್ ಲಭ್ಯವಾಗಿತ್ತು.