ಮಾಲಂಬಿ, ಜೂ. ೧ : ಟಿಪ್ಪರ್‌ವೊಂದು ಎದುರಿಗೆ ಬಂದ ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಟಿಪ್ಪರ್ ಮುಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಆಲೂರುಸಿದ್ದಾಪುರದಲ್ಲಿ ಸಂಜೆ ನಡೆದಿದೆ. ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದ ರಘು (೨೮) ಸಾವಿಗೀಡಾದ ಬೈಕ್ ಸವಾರ. ರಘು ತನ್ನ ಬೈಕ್‌ನಲ್ಲಿ ಆಲೂರುಸಿ ದ್ದಾಪುರ ಸಮೀಪದ ಸಂಗಯ್ಯನಪುರ ಗ್ರಾಮದಲ್ಲಿರುವ ತನ್ನ ಸಂಬAಧಿಕರ ಮನೆಗೆ ಬಂದು ಮತ್ತೆ ಕೆಲಸದ ನಿಮಿತ್ತ ಶನಿವಾರಸಂತೆ ಕಡೆಗೆ ಹೋಗುತ್ತಿದ್ದಾಗ ಆಲೂರುಸಿದ್ದಾಪುರ ಜಂಕ್ಷನ್‌ನಲ್ಲಿ ಟಿಪ್ಪರ್‌ವೊಂದು ಸೋಮವಾರಪೇಟೆ ಕಡೆಗೆ ತಿರುಗಿಸುತ್ತಿದ್ದ ಸಂದರ್ಭದಲ್ಲಿ ಎದುರಿಂದ ಬಂದ ರಘು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ರಘು ಟಿಪ್ಪರ್ ಮುಂಭಾಗದ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ, ಟಿಪ್ಪರ್ ಚಾಲಕ ವಾಹನವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ.
ಟಿಪ್ಪರ್ ಮಾಲೀಕ ಅರಕಲಗೂಡು ತಾಲೂಕಿನ ಬುದಗದವನೆಂದು ಗುರುತಿಸಲಾಗಿದೆ. ಟಿಪ್ಪರ್ ವಾಹನದ ಮುಂಭಾಗದಲ್ಲಿ ಗಾಜು ಇಲ್ಲದಿರುವುದು, ಟಿಪ್ಪರ್‌ಗೆ ಸಂಬAಧಪಟ್ಟ ಯಾವುದೇ ದಾಖಲಾತಿಗಳು ಇಲ್ಲದಿರುವುದು, ಟಿಪ್ಪರ್ ಬಗ್ಗೆ, ಅದರ ಮಾಲೀಕನ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದ ಹಿನ್ನೆಲೆ ಆಲೂರುಸಿದ್ದಾಪುರ ಗ್ರಾಮಸ್ಥರು ಮತ್ತು ಸಾವಿಗೀಡಾದ ರಘು ಸಂಬAಧಿಕರು ಶವವನ್ನು ಮೇಲೆತ್ತಲು ಬಿಡದೆ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಶನಿವಾರಸಂತೆ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮತ್ತು ಸಿಬ್ಬಂದಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಬೈಕ್ ಸವಾರನ ಸಾವಿಗೆ ಕಾರಣನಾದ ಟಿಪ್ಪರ್ ಚಾಲಕ ಮತ್ತು ಅದರ ಮಾಲೀಕನನ್ನು ಪೊಲೀಸರು ಪತ್ತೆ ಮಾಡಬೇಕು, ಟಿಪ್ಪರ್ ಮಾಲೀಕನನ್ನು ಇಲ್ಲಿಗೆ ಕರೆಸಿ ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಟಿಪ್ಪರ್ ಮಾಲೀಕನನ್ನು ಪತ್ತೆ ಮಾಡಿ ಮೃತನ ಸಂಬAಧಿಕರಿಗೆ ಟಿಪ್ಪರ್ ಮಾಲೀಕನಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊAಡು. ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.