ಕಣಿವೆ, ಜೂ. ೧ : ಸುತ್ತಲೂ ಕಾವೇರಿ ನದಿ ಹರಿದಿದೆ. ಆದರೂ ಕುಡಿಯುವ ನೀರಿಗೆ ನೆಲ ಬಾವಿಯೇ ಗತಿ. ತಮ್ಮತ್ತ ದೇಶ ವಿದೇಶಗಳ ನೂರಾರು ಮಂದಿ ನಿತ್ಯವೂ ಧಾವಿಸುತ್ತಾರೆ. ಆದರೇನು ? ಈ ಮಂದಿಯ ಜೀವನ ಇನ್ನೂ ಕೂಡ ಕತ್ತಲೆಯಲ್ಲೇ ಮುಳುಗಿದೆ. ಸೋಲಾರ್ ದೀಪಗಳಿವೆ. ಆದರೆ ಬೆಳಕಿಲ್ಲ. ಮನೆ ಮಂದಿಯ ಕೈಗಳಲ್ಲಿ ಮೊಬೈಲ್‌ಗಳಿವೆ. ಆದರೆ ಅವುಗಳನ್ನು ಚಾರ್ಜ್ ಮಾಡಲು ಕರೆಂಟೇ ಇಲ್ಲ.

ಇದು ದೂರದ ಯಾವುದೋ ಅರಣ್ಯದೊಳಗಿನ ಗಿರಿಜನ ಹಾಡಿಯ ಜನರ ವ್ಯಥೆಯಲ್ಲ. ಕೊಡಗು ಅರಣ್ಯ ಇಲಾಖೆಯ ಖಜಾನೆಯನ್ನು ತುಂಬಿಸುವ ಹೊನ್ನಿನ ಗಣಿಯಾಗಿರುವ ದುಬಾರೆಯ ಸಾಕಾನೆಯ ಶಿಬಿರದ ಬಳಿ ಇರುವ ಗಿರಿಜನ ಕುಟುಂಬಗಳ ವಾಸ್ತವದ ಬದುಕಿನ ಕಥೆ. ಸಾಕಾನೆಗಳನ್ನು ನಿರ್ವಹಿಸುತ್ತಿರುವ ಆನೆ ಮಾವುತರು ಹಾಗೂ ಕಾವಾಡಿಗಳ ಅವಲಂಬಿತ ಕುಟುಂಬ ಸದಸ್ಯರು ವಾಸಿಸಿರುವ ಇಲ್ಲಿನ ಮಂದಿಗೆ ಸಂಬAಧಿತ ಅರಣ್ಯ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲಿ ಇದುವರೆಗೂ ಕನಿಷ್ಟ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂಬುದೇ ಇಲ್ಲಿ ವಿಷಾಧನೀಯವಾದುದು.

ಕುಡಿಯುವ ನೀರಿಗೆ ನೆಲ ಬಾವಿ

ಇಲ್ಲಿ ನೂರಕ್ಕೂ ಹೆಚ್ಚಿನ ಕುಟುಂಬಗಳು ವಾಸವಿವೆ. ಕೆಲವು ಮನೆಗಳಿಗೆ ಕುಡಿಯುವ ನೀರಿನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಕೆಲವು ಮನೆಗಳು ಸಂಪರ್ಕದಿAದ ಹೊರತಾಗಿವೆ. ಹಾಗಾಗಿ ಈ ಮಂದಿ ಕುಡಿಯುವ ನೀರಿಗೆ ಕಾವೇರಿ ನದಿ ದಂಡೆಯ ಅಲ್ಲಲ್ಲಿ ನೆಲ ಬಾವಿಗಳನ್ನು ತೆಗೆದು ಅಲ್ಲಿ ಸಂಗ್ರಹವಾಗುವ ನೀರನ್ನು ಬಿಂದಿಗೆಗಳಲ್ಲಿ ತುಂಬಿಸಿ ತಾವು ವಾಸವಿರುವ ಗುಡಿಸಲ ಒಳಗೆ ತಂದು ಬಳಸುತ್ತಿದ್ದಾರೆ. ಇನ್ನು ಕೆಲವರು ಸಮೀಪವೇ ಇರುವ ಜಂಗಲ್ ಲಾಡ್ಜಸ್ ಬಳಿ ಸಿಗುವ ನೀರನ್ನು ತಂದು ಕುಡಿಯುತ್ತಿದ್ದಾರೆ.

ನದಿಯಲ್ಲಿ ಹರಿಯುವ ನೀರನ್ನೇ ತಂದು ಕುಡಿಯಬಹುದಲ್ಲವೇ ಎಂಬ ಪ್ರಶ್ನೆಗೆ, ಅಯ್ಯೋ ಪ್ರವಾಸಿಗರು ಬಂದು ಸ್ನಾನ ಮಾಡಿ, ಆನೆ ತೊಳೆದು, ಆಟವಾಡಿ, ದೋಣಿಗಳಿಂದ ಹೊರಸೂಸುವ ಡೀಸೆಲ್‌ನಿಂದಾಗಿ ಮಲೀನವಾಗಿರುವ ನೀರನ್ನು ನೋಡಿ ನೋಡಿ ಕುಡಿಯೋದಾ...? ಅದಕ್ಕೆ ನಾವೇ ಬಾವಿ ತೋಡಿಕೊಂಡಿದ್ದೇವೆ ಎನ್ನುತ್ತಾರೆ ಹಾಡಿಯ ವಾಸಿಗಳಾದ ಅಕ್ಕಮ್ಮ ಹಾಗೂ ಶಾಂತಿ.

ಒAದು ಗುಡಿಸಲಲ್ಲಿ ಮೂರು ಕುಟುಂಬಗಳು

ಮನೆಗಳನ್ನು ಕಟ್ಟಿಕೊಡದ ಕಾರಣ ಈಗ ಇರುವ ಕಿತ್ತು ನಿಂತ ಜೋಪಡಿಯೊಳಗೆ ಅಪ್ಪ - ಅಮ್ಮ, ಮಗ - ಸೊಸೆ, ಅಳಿಯ - ಮಗಳು ಹೀಗೆ ಕನಿಷ್ಟ ಎರಡರಿಂದ ಮೂರು ಕುಟುಂಬಗಳು ವಾಸ ಮಾಡ್ತಾ ಇದ್ದೇವೆ. ಬೇರೆ ಮನೆಗಳು ಕಟ್ಟಿ ಕೊಡಿ ಅಂತಾ ಪಂಚಾಯಿತಿ ಹಾಗೂ ಗಿರಿಜನ ಇಲಾಖೆಯನ್ನು ಕೇಳಿ ಕೇಳಿ ಸಾಕಾಯ್ತು. ಯಾರೂ ಕೂಡ ಮನೆಗಳನ್ನು ಕೊಡಲ್ಲ. ಏನು ಮಾಡೋದು ಹೇಳಿ ಅಂತಾರೆ ಹಾಡಿಯ ವಾಸಿ ಚಿಣ್ಣಪ್ಪ, ಸಣ್ಣಪ್ಪ, ಮಣಿ, ಸಿದ್ದ ಮೊದಲಾದವರು.

ಬಯಲೇ ಶೌಚಾಲಯ

ರಾಷ್ಟಿçÃಯ ಮಟ್ಟದ ಪ್ರವಾಸಿ ಕೇಂದ್ರವಾಗಿರುವ ಈ ದುಬಾರೆ ಸಾಕಾನೆ ಶಿಬಿರಕ್ಕೆ ನಿತ್ಯವೂ ದೇಶ ವಿದೇಶಗಳಿಂದ ನೂರಾರು ಮಂದಿ ಪ್ರವಾಸಿಗರು ಧಾವಿಸುತ್ತಾರೆ. ಆದರೆ, ಈ ಪ್ರವಾಸಿಗರ ಮನ ಸಂತೋಷ ಪಡಿಸುವ ಮಾವುತ ಹಾಗೂ ಕಾವಾಡಿಗಳ ಕುಟುಂಬಗಳಲ್ಲಿ ನಿರಾಸೆ ಮನೆ ಮಾಡಿದೆ. (ಮೊದಲ ಪುಟದಿಂದ) ಅಂದರೆ ಈ ಶ್ರಮಿಕ ಮಂದಿಗೆ ಸರ್ಕಾರದ ಕನಿಷ್ಟ ಸವಲತ್ತುಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತಕ್ಕೆ ಏಕೆ ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಕನಿಷ್ಟ ಶೌಚಾಲಯವೂ ಇಲ್ಲದ ಈ ಮಂದಿ ಹಗಲು ರಾತ್ರಿ ವೇಳೆ ಶೌಚ ಹಾಗೂ ಮೂತ್ರ ವಿಸರ್ಜನೆಗೆ ಕಾಡನ್ನೇ ಅವಲಂಬಿಸುತ್ತಿದ್ದಾರೆ.

ಆದರೆ ಇವರ ಬಯಲು ಶೌಚಕ್ಕೆ ಹಗಲು ಪ್ರವಾಸಿಗರಿಂದ ಕಿರಿ ಕಿರಿಯಾದರೆ, ಇರುಳು ಕಾಡಾನೆಗಳು ಹಾಗೂ ಚಿರತೆಗಳ ಕಿರಿಕಿರಿ ಎನ್ನುತ್ತಾರೆ ಹಾಡಿಯ ವಾಸಿಗಳು.

ಆರೋಗ್ಯ ಶಿಕ್ಷಣವಿಲ್ಲ

ಹಾಡಿಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿವೆ. ಆದರೆ ಇಲ್ಲಿನ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಾದ ಆರೋಗ್ಯ ಶಿಕ್ಷಣ ನೀಡುವಲ್ಲಿ ಇಲಾಖೆ ನಿರ್ಲಕ್ಷ್ಯ ತಾಳಿದೆ. ಮಾಸಿಕ ರುತು ಸ್ರಾವದ ಸಂದರ್ಭ ಹಾಡಿಯ ಹದಿ ಹರೆಯದ ಮಕ್ಕಳು ಅನುಭವಿಸುವ ನರಕ ಯಾತನೆಗೆ ಆರೋಗ್ಯ ಇಲಾಖೆ ಸೂಕ್ತ ತಿಳುವಳಿಕೆ ಹಾಗೂ ಸ್ವಚ್ಛತಾ ಪರಿಕರಗಳನ್ನು ನೀಡುವ ಮೂಲಕ

ಗಮನ ಹರಿಸಬೇಕಿದೆ.

ಬೆಳಗದ ಸೋಲಾರ್ ದೀಪ

ಹಾಡಿಯ ಕೆಲವೆಡೆಗಳಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಅಳವಡಿಸಿರುವ ಸೋಲಾರ್ ದೀಪಗಳಲ್ಲಿ ಬೆಳಕೇ ಬರಲ್ಲ. ಅಂದರೆ ಅವು ಚಾರ್ಜೇ ಆಗಲ್ಲ. ಹಾಡಿಯಲ್ಲಿ ರಾತ್ರಿ ಆದರೆ ಕಾಡಾನೆ ಕಾಟ, ಚಿರತೆ ಭಯವಿದೆ. ನಮಗೆ ಬೆಳಕು ಸೂಸುವ ಬೇರೆ ಸೋಲಾರ್ ದೀಪಗಳು ಅಳವಡಿಸಿ ಎಂದು ಪರಿ ಪರಿ ಬೇಡಿದರೂ ಕೂಡ ಯಾರೂ ಕೂಡ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಹಾಡಿಯ ನಿವಾಸಿಗಳ ಅಳಲು.

ಹಾಗಾಗಿ ಸಂಬAಧ ಪಟ್ಟ ಇಲಾಖೆ ಅಧಿಕಾರಿಗಳು ಹಾಡಿಗೆ ಖುದ್ದು ಆಗಮಿಸಿ ಅಲ್ಲಿನ ಜನರ ಕತ್ತಲೆಯ ಜೀವನಕ್ಕೆ ಬೆಳಕು ನೀಡುವರಾ ಕಾದು ನೋಡಬೇಕಿದೆ.

(ಕೆ.ಎಸ್. ಮೂರ್ತಿ)