ಮಡಿಕೇರಿ, ಜೂ. ೧: ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ರಾಷ್ಟçಮಟ್ಟದಲ್ಲೂ ಸುದ್ದಿಯಲ್ಲಿದ್ದ ಎ.ಐ.ಸಿ.ಸಿ. ವಕ್ತಾರರೂ ಆಗಿದ್ದ ಕೊಡಗಿನವರಾದ ಪಾಲಚಂಡ ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸುಮಾರು ೨೫ ವರ್ಷಗಳಿಂದ ಪಕ್ಷದಲ್ಲಿದ್ದು, ಪ್ರಮುಖ ಹುದ್ದೆ ನಿಭಾಯಿಸುತ್ತಿದ್ದ ಬ್ರಿಜೇಶ್ ಅವರ ದಿಢೀರ್ ತೀರ್ಮಾನ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರವನ್ನು ಬರೆದಿರುವ ಬ್ರಿಜೇಶ್ ಕಾಳಪ್ಪ, ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದು, ೧೯೯೭ರಿಂದ ಈ ತನಕದ ಪಕ್ಷದ ಸಂಬAಧವನ್ನು ಕಡಿತಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ. ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಇವರು ರಾಷ್ಟಿçÃಯ ಸುದ್ದಿ ವಾಹಿನಿಗಳಲ್ಲಿ ಸುಮಾರು ೭ ಸಾವಿರದಷ್ಟು ಚರ್ಚೆಗಳಲ್ಲಿ ತೊಡಗಿಸಿಕೊಂಡು ಪಕ್ಷವನ್ನು ಸಮರ್ಥಿಸಿಕೊಂಡು ಗಮನ ಸೆಳೆದಿದ್ದರು. ಇಲ್ಲಿಯವರೆಗೆ ನೀಡಿರುವ ಅವಕಾಶಕ್ಕಾಗಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಧನ್ಯವಾದಗಳನ್ನು ಹೇಳಿರುವ ಅವರು, ರಾಜೀನಾಮೆಗೆ ಕಾರಣವನ್ನು ತಿಳಿಸಿಲ್ಲ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಬ್ರಿಜೇಶ್ ಕಾಳಪ್ಪ ಅವರು ಇಷ್ಟು ವರ್ಷ ಪಕ್ಷವನ್ನು ಬೆಳೆಸಲು ಶ್ರಮಿಸಿದ್ದೇನೆ. ಇದೀಗ ಪಕ್ಷವನ್ನು ಬಿಡುತ್ತಿದ್ದೇನೆ ಎಂದಷ್ಟೇ ಹೇಳಿ ರಾಜೀನಾಮೆಗೆ ಕಾರಣವನ್ನು ತಿಳಿಸಲಿಲ್ಲ. ಪ್ರಸ್ತುತ ಎ.ಐ.ಸಿ.ಸಿ. ವಕ್ತಾರ ಹಾಗೂ ಕೆ.ಪಿ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಆಮ್ ಆದ್ಮಿ ಪಕ್ಷದಿಂದ ಈ ಪಕ್ಷ ಸೇರ್ಪಡೆಗೆ ಆಹ್ವಾನ ಬಂದಿದೆ. ಆದರೆ ಸದ್ಯಕ್ಕೆ ತಾವು ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ ಎಂದರು. ಬಿಜೆಪಿ ಸೇರ್ಪಡೆ ಕುರಿತು ಪ್ರಶ್ನಿಸಿದಾಗ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ಆಪ್ತರು. ಈ ಹಿಂದೆ ತಮ್ಮ ವಿವಾಹಕ್ಕೂ ಇವರು ಆಗಮಿಸಿದ್ದರು ಎಂದು ಹೇಳಿದರಾದರೂ, ಯಾವುದೇ ನಿಲುವು ವ್ಯಕ್ತಪಡಿಸಲಿಲ್ಲ. ಸದ್ಯಕ್ಕೆ ಒಂದು ತಿಂಗಳ ಕಾಲ ಯಾವ ನಿರ್ಧಾರಕ್ಕೂ ಬರುವುದಿಲ್ಲ ಎಂದು ಖ್ಯಾತ ವಕೀಲರೂ ಆಗಿರುವ ಬ್ರಿಜೇಶ್ ಹೇಳಿದರು.