ಮಡಿಕೇರಿ, ಮೇ ೩೦ : ಮನೆಯ ಸೆಂಟ್ರಿAಗ್ ಬಿಚ್ಚುವ ಸಂದರ್ಭ ೨ನೇ ಮಹಡಿಯಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಗರದ ಗಣಪತಿಬೀದಿಯಲ್ಲಿ ನಡೆದಿದೆ.
ಸೇಲಂ ಮೂಲದ ಕಾರ್ಮಿಕ ರಾಜಕುಮಾರ್ (೪೦) ಮೃತಪಟ್ಟ ದುರ್ಧೈವಿ. ಮತ್ತೋರ್ವ ಕಾರ್ಮಿಕ ಸೇಲಂನ ಗಿರೀಶ್ (೩೦) ಸಣ್ಣಪುಟ್ಟ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.